ETV Bharat / bharat

ವಿಶ್ವ ಆರೋಗ್ಯ ಸಂಸ್ಥೆ ಒಗ್ಗಟ್ಟಿನ ಪ್ರಯೋಗದಲ್ಲಿ ಭಾಗಿಯಾಗಲಿದೆ ಭಾರತ

author img

By

Published : Mar 28, 2020, 8:32 AM IST

ಮಹಾಮಾರಿ ಕೊರೊನಾ ವೈರಸ್​ಗೆ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ಭರದಿಂದ ಸಾಗಿವೆ. ಇದರ ಭಾಗವಾಗಿ WHO ನಡೆಸುತ್ತಿರುವ ಒಗ್ಗಟ್ಟಿನ ಪ್ರಯೋಗದಲ್ಲಿ ಹಲವಾರು ರಾಷ್ಟ್ರಗಳು ಭಾಗವಹಿಸಲಿವೆ.

solidarity trial, ವಿಶ್ವ ಆರೋಗ್ಯ ಸಂಸ್ಥೆ
ಆರೋಗ್ಯ ಸಚಿವಾಲಯ

ಹೊಸದಿಲ್ಲಿ: ಕೋವಿಡ್​-19 ತಡೆಗಟ್ಟುವ ಔಷಧಿಯನ್ನು ಕಂಡು ಹಿಡಿಯಲು ವಿಶ್ವ ಆರೋಗ್ಯ ಸಂಸ್ಥೆಯ (WHO) ನೇತೃತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಒಗ್ಗಟ್ಟಿನ ಪ್ರಯೋಗದಲ್ಲಿ ಭಾಗಿಯಾಗಲು ಭಾರತ ನಿರ್ಧರಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ ಅಗರ್ವಾಲ್ ಈ ವಿಷಯ ಖಚಿತಪಡಿಸಿದರು. ಕಳೆದ 24 ಗಂಟೆಗಳ ಅವಧಿಯಲ್ಲಿ 75 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

'ಕೋವಿಡ್​-19 ಗೆ ಔಷಧಿ ಕಂಡು ಹಿಡಿಯಲು WHO ಕೈಗೊಳ್ಳುತ್ತಿರುವ ಒಗ್ಗಟ್ಟಿನ ಪ್ರಯೋಗದಲ್ಲಿ ನಾವು ಭಾಗವಹಿಸಲಿದ್ದೇವೆ. ಈ ಮುನ್ನ ನಮ್ಮ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದುದರಿಂದ ನಮ್ಮ ಸಹಭಾಗಿತ್ವದಿಂದ ಮಹತ್ವದ ಉಪಯೋಗವಾಗಲಾರದೆಂದು ಅದರಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಿರಲಿಲ್ಲ.' ಎಂದು ಐಸಿಎಂಆರ್​ ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ರಾಮನ್ ಆರ್​. ಗಂಗಾಖೇಡ್ಕರ್ ಇದೇ ಸಂದರ್ಭದಲ್ಲಿ ತಿಳಿಸಿದರು.

10,000 ವೆಂಟಿಲೇಟರ್​ಗಳನ್ನು ಉತ್ಪಾದಿಸುವಂತೆ ದೇಶದ ಸಾರ್ವಜನಿಕ ವಲಯದ ಉದ್ಯಮವೊಂದಕ್ಕೆ ಸೂಚಿಸಲಾಗಿದೆ. ಒಂದೆರಡು ತಿಂಗಳಲ್ಲಿ ಹೆಚ್ಚುವರಿಯಾಗಿ 30,000 ವೆಂಟಿಲೇಟರ್​ಗಳನ್ನು ಖರೀದಿಸುವಂತೆ ಭಾರತ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ಗೆ ಆದೇಶಿಸಲಾಗಿದೆ. ದೇಶದಲ್ಲಿನ ವೈದ್ಯಕೀಯ ಉಪಕರಣಗಳ ಕೊರತೆ ನೀಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಗರ್ವಾಲ್ ನುಡಿದರು.

ವಲಸೆ ಬಂದ ಕಾರ್ಮಿಕರಿಗಾಗಿ ಸಾಕಷ್ಟು ಆಹಾರ, ನೀರು ಹಾಗೂ ನೈರ್ಮಲ್ಯ ವ್ಯವಸ್ಥೆಗಳನ್ನು ಒದಗಿಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಹೊಟೇಲ್​ ಹಾಗೂ ಬಾಡಿಗೆಯ ವಸತಿ ಗೃಹಗಳು ಎಂದಿನಂತೆ ಕಾರ್ಯನಿರ್ವಹಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಹೇಳಿದರು.

ಆದಾಗ್ಯೂ ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಬೇರೆ ನಗರಗಳಿಗೆ ಅಥವಾ ರಾಜ್ಯಗಳಿಗೆ ಸಾಗಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹೀಗೆ ಮಾಡಿದಲ್ಲಿ ಅದು ಲಾಕ್​ಡೌನ್​ ಉದ್ದೇಶಕ್ಕೇ ಧಕ್ಕೆ ತರಲಿದೆ ಎಂದು ಶ್ರೀವಾಸ್ತವ ಸ್ಪಷ್ಟಪಡಿಸಿದರು.

ಬಹುತೇಕ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಸರ್ಕಾರ ಟೆಲಿಮೆಡಿಸಿನ್​ ನೀತಿಯನ್ನು ಪ್ರಕಟಿಸಿದೆ. ಇದರಿಂದ ವೈದ್ಯರು ತಮ್ಮ ಮನೆಯಿಂದಲೇ ರೋಗಿಗಳಿಗೆ ಸೇವೆ ನೀಡಲು ಸಾಧ್ಯವಾಗಲಿದ್ದು, ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಅಗರ್ವಾಲ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.