ETV Bharat / bharat

ಮಾಲ್ಡೀವ್ಸ್​ನಲ್ಲಿ ಕ್ಯಾನ್ಸರ್ ಆಸ್ಪತ್ರೆ, ಕ್ರಿಕೆಟ್ ಮೈದಾನ ನಿರ್ಮಿಸಲಿರುವ ಭಾರತ - ಮಾಲ್ಡೀವ್ಸ್​ನಲ್ಲಿ ಭಾರತದ ಕ್ಯಾನ್ಸರ್ ಆಸ್ಪತ್ರೆ

ದ್ವೀಪ ರಾಷ್ಟ್ರದಲ್ಲಿ ಭಾರತ 100 ಬೆಡ್​ಗಳ ಕ್ಯಾನ್ಸರ್ ಆಸ್ಪತ್ರೆ ಮತ್ತು ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಿಸಲಿದೆ ಎಂದು ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದೆ.

Maldives
Maldives
author img

By

Published : Oct 1, 2020, 6:50 AM IST

ಮಾಲ್ಡೀವ್ಸ್: ಭಾರತವು ಮಾಲ್ಡೀವ್ಸ್​ನ ಹುಲ್ಹುಮಾಲೆ ನಗರದಲ್ಲಿ 100 ಬೆಡ್​ಗಳ ಕ್ಯಾನ್ಸರ್ ಆಸ್ಪತ್ರೆ ಮತ್ತು 22 ಸಾವಿರ ಸೀಟುಗಳ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಿದೆ. ಕಳೆದ ವರ್ಷ ಮಾಲ್ಡೀವ್ಸ್​ಗೆ ವಿಸ್ತರಿಸಿದ 800 ಮಿಲಿಯನ್ ಯುಎಸ್​ಡಿ ಸಾಲದ ಅಡಿಯಲ್ಲಿ ಭಾರತ ಈ ಕಾಮಗಾರಿಯನ್ನು ಹಮ್ಮಿಕೊಳ್ಳಲಿದೆ.

ಆರೋಗ್ಯ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಹಿನ್ನೆಲೆಯಲ್ಲಿ ಭಾರತದ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುತ್ತಿದೆ. ಹಾಗೆಯೇ ಆಧುನಿಕ ತಂತ್ರಜ್ಞಾನ ಆಧಾರಿತ 22 ಸಾವಿರ ಸೀಟುಗಳ ಕ್ರಿಕೆಟ್ ಮೈದಾನವನ್ನ ಕೂಡ 800 ಮಿಲಿಯನ್ ಯುಎಸ್​ಡಿ ಸಾಲದ ಯೋಜನೆ ಅಡಿ ನಿರ್ಮಿಸಲಿದೆ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಇಲ್ಲಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಈ ಯೋಜನೆಗಳಿಂದ ಅನುಕೂಲವಾಗಲಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

2019ರ ಮಾರ್ಚ್​ನಲ್ಲಿ ಎಕ್ಸಿಮ್ ಬ್ಯಾಂಕ್, ಮಾಲ್ಡೀವ್ಸ್​ಗೆ ಅಭಿವೃದ್ಧಿ ಯೋಜನೆಗಳಿಗಾಗಿ 800 ಮಿಲಿಯನ್ ಯುಎಸ್​ಡಿ ಸಾಲ ನೀಡಿದೆ. ಇದರಲ್ಲಿ ಹಲವು ಯೋಜನೆಗಳು ಇವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.