ETV Bharat / bharat

'ವಂದೇ ಭಾರತ್' ವಿಮಾನದ ಟ್ರಾವೆಲ್​ ವೆಚ್ಚವನ್ನು ಪ್ರಯಾಣಿಕರೇ ತುಂಬಬೇಕು: ನಾಗರಿಕ ವಿಮಾನಯಾನ ಸಚಿವಾಲಯ

author img

By

Published : Aug 25, 2020, 3:35 PM IST

ಕೊರೊನಾ ವೈರಸ್​​ ಪ್ರೇರಿತ ಲಾಕ್​ಡೌನ್​ನಿಂದ ಹಲವಾರು ಭಾರತೀಯರು ವಿದೇಶದಲ್ಲಿ ಸಿಲುಕಿದ್ದು, ಈ ಪೈಕಿ ಸಾಕಷ್ಟು ಜನರನ್ನು ಈ ಹಿಂದೆ ವಂದೇ ಭಾರತ್​​ ವಿಮಾನದ ಮೂಲಕ ದೇಶಕ್ಕೆ ಕರೆತರಲಾಗಿದೆ. ಇದೀಗ ವಿದೇಶದಲ್ಲಿ ಸಿಲುಕಿರುವ ಮತ್ತಷ್ಟು ಮಂದಿ ಭಾರತಕ್ಕೆ ಬರಲು ಅನುಮತಿಸಲಾಗಿದ್ದು, ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

India
ನಾಗರಿಕ ವಿಮಾನಯಾನ ಸಚಿವಾಲಯ

ನವದೆಹಲಿ: ಕೊರೊನಾ ಕಾರಣದಿಂದಾಗಿ ವಿದೇಶಗಳಿಗೆ ವಿಮಾನ ಸಂಚಾರ ಬಂದ್​ ಆಗಿದ್ದು, ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಂದೇ ಭಾರತ್ ಯೋಜನೆಯಡಿ ವಿಮಾನಗಳಲ್ಲಿ ಮತ್ತು ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸಲು ಭಾರತ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪ್ರಕಟಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣ ವೆಚ್ಚವನ್ನು ಆಯಾ ಪ್ರಯಾಣಿಕರು ಭರಿಸಬೇಕಿದೆ.

ವಿದೇಶದಿಂದ ಸ್ವದೇಶಕ್ಕೆ ಮರಳಲು ಅಥವಾ ಇಲ್ಲಿಂದ ವಿದೇಶಕ್ಕೆ ತೆರಳಲು ಬೋರ್ಡಿಂಗ್ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. ಈ ವೇಳೆ ಕೊರೊನಾ ರೋಗದ ಲಕ್ಷಣ ರಹಿತ ಪ್ರಯಾಣಿಕರನ್ನು ಮಾತ್ರ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದು ಎಂದು ಸರ್ಕಾರ ಹೇಳಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಭಾರತದಿಂದ ತೆರಳುವ ಅರ್ಹ ವ್ಯಕ್ತಿಗಳು ನಾಗರಿಕ ವಿಮಾನಯಾನ ಸಂಸ್ಥೆ ಅಥವಾ ಗೊತ್ತುಪಡಿಸಿದ ಏಜೆನ್ಸಿಗೆ ಅವರ ಅಗತ್ಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಅನುಮತಿಸಿದಂತೆ ಪ್ರಯಾಣಿಸಲು ಮುಖಗವಸು ಧರಿಸುವುದು, ಕೈಗಳನ್ನು ಸ್ಯಾನಿಟೈಸ್​​ ಮಾಡಿಕೊಳ್ಳುವುದು ಸೇರಿದಂತೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನು ಸಿಬ್ಬಂದಿ ಮತ್ತು ಎಲ್ಲಾ ಪ್ರಯಾಣಿಕರು ಅನುಸರಿಸಬೇಕು ಎಂದು ಸೂಚಿಸಿದೆ.

ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೇಂದ್ರ ಗೃಹ ಸಚಿವಾಲಯ ಅನುಮತಿಸುತ್ತದೆ. ವಂದೇ ಭಾರತ್ ಯೋಜನೆಯಡಿ ವಿಮಾನಗಳ ಪ್ರಯಾಣಿಕರು ವಿದೇಶದಲ್ಲಿನ ಭಾರತೀಯ ರಾಯಭಾರ ಸಂಸ್ಥೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ವಾಯುಸಾರಿಗೆ ಬಬಲ್ ವ್ಯವಸ್ಥೆಗೆ ಅಂತಹ ನೋಂದಣಿ ಅಗತ್ಯವಿಲ್ಲ. ಅವರು ಸರ್ಕಾರವು ಅನುಮತಿಸದ ನಿಗದಿತ ವಾಣಿಜ್ಯ ವಿಮಾನಗಳು ಅಥವಾ ಹಡಗುಗಳ ಮೂಲಕ ಪ್ರಯಾಣಿಸುತ್ತಾರೆ ಎಂದು ಮಾರ್ಗಸೂಚಿ ತಿಳಿಸಿದೆ.

ಭಾರತಕ್ಕೆ ಅಮೆರಿಕ, ಫ್ರಾನ್ಸ್, ಕತಾರ್, ಮಾಲ್ಡೀವ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಇಂಗ್ಲೆಂಡ್, ಜರ್ಮನಿಯಿಂದ ವಿಮಾನ ಅಥವಾ ವಾಯುಸಂಚಾರ ವ್ಯವಸ್ಥೆಯಿದ್ದು, ಇನ್ನೂ 13 ದೇಶಗಳೊಂದಿಗೆ ವಾಯುಸಂಚಾರ ಆರಂಭಿಸಲು ಮಾತುಕತೆಗಳು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ವಂದೇ ಭಾರತ್ ಯೋಜನೆಯಡಿ ವಿಮಾನದಲ್ಲಿ ಬರಲು ಪಡೆದ ದಾಖಲಾತಿಗಳ ಆಧಾರದ ಮೇಲೆ ಹೆಸರು, ವಯಸ್ಸು, ಲಿಂಗ, ಮೊಬೈಲ್ ಫೋನ್ ಸಂಖ್ಯೆ, ವಾಸಸ್ಥಳ, ಅಂತಿಮವಾಗಿ ಭಾರತದಲ್ಲಿ ತಲುಪುವ ಸ್ಥಳ ಮುಂತಾದ ವಿವರಗಳನ್ನು ಒಳಗೊಂಡಂತೆ ಎಂಇಎ ಅಂತಹ ಎಲ್ಲ ಪ್ರಯಾಣಿಕರ ವಿಮಾನ ಅಥವಾ ಹಡಗು ಪ್ರಯಾಣದ ಅಂಕಿ ಅಂಶವನ್ನು ಸಿದ್ಧಪಡಿಸುತ್ತದೆ.

ವಿದೇಶದಲ್ಲಿ ಸಿಲುಕಿರುವ 11,23,000 ಭಾರತೀಯರನ್ನು ಆಗಸ್ಟ್ 19 ರವರೆಗೆ ವಂದೇ ಭಾರತ್ ಮಿಷನ್ (ವಿಬಿಎಂ) ಅಡಿಯಲ್ಲಿ ವಿವಿಧ ವಿಧಾನಗಳಿಂದ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.

ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್​ ಮಾತನಾಡಿ, ವಂದೇ ಭಾರತ್ ಮಿಷನ್‌ನ 5 ನೇ ಹಂತದಲ್ಲಿ, ಸುಮಾರು 500 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 130 ದೇಶಿಯ ವಿಮಾನಗಳು ಈವರೆಗೆ 22 ವಿವಿಧ ದೇಶಗಳಿಂದ ಕಾರ್ಯ ನಿರ್ವಹಿಸಲಾಗಿದ್ದು, ಭಾರತದಾದ್ಯಂತ 23 ವಿಮಾನ ನಿಲ್ದಾಣಗಳ ಮೂಲಕ ಜನರನ್ನು ಕರೆತರಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.