ನವದೆಹಲಿ: ಭಾರತ ಮತ್ತು ಚೀನಾ ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷದಲ್ಲಿ ಭಾಗಿಯಾಗಿದ್ದರೂ ಮತ್ತು ಬೀಜಿಂಗ್ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತನ್ನ ವಿಸ್ತರಣಾ ತಂತ್ರಗಳನ್ನು ಕಾರ್ಯಗತಮಾಡುವತ್ತ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ ಭಾರತವು ಅಮೆರಿಕದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಕೇಂದ್ರ ಬಿಂದುವಾಗಿ ಉಳಿಯಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಮೆರಿಕ-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (ಯುಎಸ್‌ಐಎಸ್‌ಪಿಎಫ್) ಆಯೋಜಿಸಿರುವ ಹಾಗೂ ಪ್ರಸ್ತುತ ಆಯೋಜಿಸುತ್ತಿರುವ “ಯುನೈಟೇಡ್ ಸ್ಟೇಟ್ಸ್ ಆಫ್ ಅಮೆರಿಕ-ಇಂಡಿಯಾ: ನ್ಯಾವಿಗೇಟಿಂಗ್ ನ್ಯೂ ಚಾಲೆಂಜ್ʼಎಂಬ ವಾರದ ಅವಧಿಯ ಚರ್ಚೆಯಲ್ಲಿ ಮಾತನಾಡಿದ ಯುನೈಟೇಡ್ ಸ್ಟೇಟ್ಸ್ ಆಫ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಸ್ಟೀಫನ್ ಬೀಗುನ್, ವಾಷಿಂಗ್ಟನ್‌ನ ಹೊಸ ಇಂಡೋ-ಪೆಸಿಫಿಕ್ ಕಾರ್ಯತಂತ್ರವು ಆಧುನಿಕ ಜಗತ್ತಿನ ವಾಸ್ತವಿಕತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಕಾರ್ಯತಂತ್ರವು ಪ್ರಜಾಪ್ರಭುತ್ವಗಳ ಸುತ್ತ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ.
"ಇದು ಮುಕ್ತ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿದೆ" ಎಂದು ಬೀಗನ್ ಸೋಮವಾರ ಹೇಳಿದ್ದಾರೆ.
ಇದು ಭಾರತ ಸರ್ಕಾರ ಮತ್ತು ಭಾರತೀಯ ಜನರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಸರ್ಕಾರ ಮತ್ತು ಯುನೈಟೆಡ್ ಸ್ಟೇಟ್ಸ್ ಅಮೆರಿಕದ ಜನರೊಂದಿಗೆ ಹಂಚಿಕೊಳ್ಳುವ ಮೌಲ್ಯಗಳ ಮೇಲೆ ಕೇಂದ್ರೀಕರಿಸಿದೆ. ಅದನ್ನು ಯಶಸ್ವಿಗೊಳಿಸಲು ನಾವು ಈ ವಲಯದ ಮೇಲೆ ಪೂರ್ಣ ಪ್ರಮಾಣದಲ್ಲಿ ಗಮನ ಹರಿಸಬೇಕು. ಅದು ಅರ್ಥಶಾಸ್ತ್ರದ ವಿಷಯ, ಭದ್ರತಾ ಸಹಕಾರದ ವಿಷಯ ಒಳಗೊಂಡಿರುತ್ತದೆ. ಹೀಗಾಗಿ, ಭಾರತವನ್ನು ಕಾರ್ಯತಂತ್ರದ ಕೇಂದ್ರಬಿಂದುವಾಗಿಸದ ಹೊರತು ನಮ್ಮ ಗುರಿ ಸಾಧಿಸುವುದು ಅಸಾಧ್ಯವಾಗಿದೆ. ಈ ಕಾರ್ಯತಂತ್ರಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಕ್ಕೆ ನೀಡಿದಷ್ಟೇ ಮಹತ್ವವನ್ನ ಈ ಕಾರ್ಯತಂತ್ರಕ್ಕೆ ನೀಡುವುದು ಮುಖ್ಯ. ಭಾರತವು ನಮ್ಮ ಅಕ್ಕಪಕ್ಕದಲ್ಲಿ ನಿಲ್ಲದೆ ಹೋದರೆ ನಾವು ಈ ಕಾರ್ಯತಂತ್ರದಲ್ಲಿ ಯಶಸ್ವಿಯಾಗುವುದಿಲ್ಲ, ಎಂದಿದ್ದಾರೆ ಬೀಗನ್.
ಇಂಡೋ-ಪೆಸಿಫಿಕ್ ಪ್ರದೇಶವು 2006-07ರಲ್ಲಿ ಜಪಾನಿನ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರ ಮೊದಲ ಅವಧಿಯ ಕಾಲದಲ್ಲೇ ಪ್ರಭಾವಿತವಾಗಿದೆ. ಈ ಪ್ರದೇಶವು ಜಪಾನಿನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ವ್ಯಾಪಿಸಿದೆ.
ಈ ವರ್ಷದ ಜೂನ್ ತಿಂಗಳಲ್ಲಿ ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ 45 ವರ್ಷಗಳಲ್ಲಿ ಮೊದಲ ಬಾರಿಗೆ ನಡೆದ ಅತ್ಯಂತ ಭೀಕರ ಮತ್ತು ಸಾವು ನೋವಿಗೆ ಕಾರಣವಾದ ರಕ್ತ ಸಿಕ್ತ ಸಂಘರ್ಷದ ಹಿನ್ನೆಲೆಯಲ್ಲಿ ಬೀಗುನ್ ಅವರ ಅಭಿಪ್ರಾಯಗಳು ಹೊರಬಿದ್ದಿರುವುದು ಮಹತ್ವ ಪಡೆದುಕೊಂಡಿದೆ.
ಈ ಮಧ್ಯೆ, ಕಳೆದ ತಿಂಗಳು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತೋರುತ್ತಿರುವ ಆಕ್ರಮಣಕಾರಿ ಪ್ರವೃತ್ತಿ ಹಿನ್ನೆಲೆಯಲ್ಲಿ ಚೀನಾದ ವ್ಯಕ್ತಿಗಳು ಮತ್ತು ಉದ್ಯಮಗಳ ಮೇಲೆ ಅಮೆರಿಕವು ವೀಸಾ ನಿರ್ಬಂಧಗಳು ಮತ್ತು ಪ್ರವೇಶ ನಿರ್ಬಂಧಗಳನ್ನು ವಿಧಿಸಿದೆ.
ಕಳೆದ ಜುಲೈನಲ್ಲಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನೌಕಾಪಡೆಯು ಉಭಯಚರ ದಾಳಿ ಚಟುವಟಿಕೆಗಳ ಮೂಲಕ ದಕ್ಷಿಣ ಚೀನಾ ಸಮುದ್ರದಲ್ಲಿ ನೌಕಾಪಡೆ ತಾಲೀಮನ್ನು ಪ್ರಾರಂಭಿಸಿತು.
ಪ್ಯಾರಾಸೆಲ್ ದ್ವೀಪಗಳ ಬಳಿ ಚೀನಾದ ಇತ್ತೀಚಿನ ಚಟುವಟಿಕೆಗಳನ್ನು ಎದುರಿಸಲು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ದಕ್ಷಿಣ ಚೀನಾ ಸಮುದ್ರಕ್ಕೆ ಮೂರು ಪರಮಾಣು-ಚಾಲಿತ ವಿಮಾನ ವಾಹಕ ನೌಕೆಗಳನ್ನು ನಿಯೋಜಿಸಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿನ ದ್ವೀಪಗಳ ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ಗುಂಪುಗಳ ಹಕ್ಕು ಸಾಧಿಸುವ ವಿವಾದದಲ್ಲಿ ಚೀನಾ ಈ ಪ್ರದೇಶದ ಇತರ ದೇಶಗಳೊಂದಿಗೆ ನಿರತವಾಗಿದೆ. ಸ್ಪ್ರಾಟ್ಲಿ ದ್ವೀಪಗಳ ಇತರ ಹಕ್ಕುದಾರರೆಂದರೆ ಬ್ರೂನಿ, ಮಲೇಷ್ಯಾ, ಫಿಲಿಪೈನ್ಸ್, ತೈವಾನ್ ಮತ್ತು ವಿಯೆಟ್ನಾಂ ದೇಶಗಳಾಗಿವೆ. ಇದರ ಜೊತೆಗೆ ಪ್ಯಾರಾಸೆಲ್ ದ್ವೀಪಗಳಲ್ಲೂ ವಿಯೆಟ್ನಾಂ ಮತ್ತು ತೈವಾನ್ ಸಹ ಹಕ್ಕು ಸಾಧಿಸಿವೆ
ವಿಶ್ವದ ಅತ್ಯಂತ ಜನನಿಬಿಡ ವಾಣಿಜ್ಯ ಹಡಗು ಮಾರ್ಗಗಳಲ್ಲಿ ಒಂದಾದ ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪೈನ್ಸ್ ಹಕ್ಕುಗಳನ್ನು ಚೀನಾ ಉಲ್ಲಂಘಿಸಿದೆ ಎಂದು ಹೇಗ್ ಮೂಲದ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ 2016 ರಲ್ಲಿ ತೀರ್ಪು ನೀಡಿತ್ತು.
ಫಿಲಿಪೈನ್ಸ್‌ನ ಮೀನುಗಾರಿಕೆ ಮತ್ತು ಪೆಟ್ರೋಲಿಯಂ ಪರಿಶೋಧನೆಗೆ ಚೀನಾ ಹಸ್ತಕ್ಷೇಪ ಮಾಡುವುದು, ನೀರಿನಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವುದು ಮತ್ತು ಚೀನಾದ ಮೀನುಗಾರರು ಈ ವಲಯದಲ್ಲಿ ಮೀನುಗಾರಿಕೆ ಮಾಡುವುದನ್ನು ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂದು ನ್ಯಾಯಾಲಯ ಆರೋಪಿಸಿದೆ.
ಮತ್ತೆ, ಜುಲೈನಲ್ಲಿ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪುನರಾವರ್ತಿತ ಕಡಲ ಕಾನೂನು ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.ಇದಲ್ಲದೆ, ಪೂರ್ವ ಚೀನಾ ಸಮುದ್ರದಲ್ಲಿ ಬೀಜಿಂಗ್ ಟೋಕಿಯೊದೊಂದಿಗೆ ಸೆನ್ಕಾಕು ದ್ವೀಪಗಳ ವಿವಾದದಲ್ಲಿ ಭಾಗಿಯಾಗಿದೆ - ಇದನ್ನು ಚೀನಾ ದಿಯೌ ದ್ವೀಪಗಳು ಎಂದು ಕರೆಯುತ್ತದೆ.
"ನಾವು ಮುನ್ನಡೆಸುತ್ತಿರುವ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕೆ ಭಾರತವು ತನ್ನದೇ ಆದ ಕೊಡುಗೆ ನೀಡಲು ಅಪಾರ ನಾಯಕತ್ವ ಮತ್ತು ಆಸಕ್ತಿಯನ್ನು ತೋರಿಸಿದೆ" ಎಂದು ಬೀಗನ್ ಹೇಳಿದರು.
"ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಎರಡೂ ರಾಷ್ಟ್ರಗಳು ನಮ್ಮ ಭದ್ರತಾ ಸಹಕಾರವನ್ನು ಮತ್ತಷ್ಟು ಆಳವಾಗಿ ರೂಪಿಸಿಕೊಂಡಿವೆ. ಈ ಮೂಲಕ ನಾವು ಇನ್ನೂ ವಿಶಾಲವಾದ ಆರ್ಥಿಕ ಸಂಬಂಧ ಮತ್ತು ವ್ಯಾಪಾರ ಉದಾರೀಕರಣದ ಸೇರಿದಂತೆ ಕೆಲವು ಆಯಾಮಗಳನ್ನು ಒಳಗೊಂಡಂತ ಉತ್ತಮ ಸಂಬಂಧ ರೂಪಿಸುವ ಪ್ರಕ್ರಿಯೆಯಲ್ಲಿದ್ದೇವೆ,” ಎಂದು ಅವರು ಹೇಳಿದರು.
“ಇದರ ಜೊತೆಗೆ ನಾವು ಭದ್ರತಾ ಕ್ಷೇತ್ರದಲ್ಲಿಯೂ ಬಹಳ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ, ತೀರಾ ಇತ್ತೀಚೆಗೆ ಭಾರತವು ಮಲಬಾರ್ ನೌಕಾ ತಾಲೀಮಿನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾವನ್ನು ಆಹ್ವಾನಿಸಿದ ಭಾರತದ ಉದ್ದೇಶವು ಇಂಡೋ-ಪೆಸಿಫಿಕ್ ಸಮುದ್ರಗಳಲ್ಲಿ ಅಂಗೀಕಾರದ ಸ್ವಾತಂತ್ರ್ಯ ಮತ್ತು ಸಾಗರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ," ಎಂದು ಹೇಳಿದ್ದಾರೆ.
ಯುನೈಟೇಡ್ ಸ್ಟೇಟ್ಸ್ ಆಫ್ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಜೊತೆಗೆ ಭಾರತವು ದಕ್ಷಿಣ ಚೀನಾ ಸಮುದ್ರದ ಚತುಷ್ಪಥ ಭದ್ರತಾ ಒಕ್ಕೂಟದ ಭಾಗವಾಗಿದೆ, ಇದನ್ನು ಕ್ವಾಡ್ ಎಂದೂ ಕರೆಯುತ್ತಾರೆ, ಇದು ಅನೌಪಚಾರಿಕ ಕಾರ್ಯತಂತ್ರದ ವೇದಿಕೆಯಾಗಿದ್ದು, ಇದನ್ನು ಅರೆ-ನಿಯಮಿತ ಶೃಂಗಸಭೆಗಳು, ಮಾಹಿತಿ ವಿನಿಮಯ ಮತ್ತು ಸದಸ್ಯ ರಾಷ್ಟ್ರಗಳ ನಡುವಿನ ಮಿಲಿಟರಿ ಕಸರತ್ತುಗಳು ನಿರ್ವಹಿಸುತ್ತವೆ.
ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಚೀನಾದ ಹೆಜ್ಜೆ ಗುರುತನ್ನು ಎದುರಿಸುವಾಗ ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸಮೃದ್ಧಿ ಮತ್ತು ತೆರೆದ ಸಮುದ್ರ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ಈ ವೇದಿಕೆ ಪ್ರಯತ್ನಿಸುತ್ತದೆ. ಮಲಬಾರ್ ತಾಲೀಮು (Exercise Malabar) ಎಂಬ ಶೀರ್ಷಿಕೆಯಡಿ ಅಭೂತಪೂರ್ವ ಪ್ರಮಾಣದ ಜಂಟಿ ಮಿಲಿಟರಿ ತಾಲೀಮಿನಿಂದ ಪರಸ್ಪರ ರಾಷ್ಟ್ರಗಳ ಅಭಿಪ್ರಾಯ ಸಮಾನಾಂತರವಾಗಿತ್ತು. ಹೆಚ್ಚಿದ ಚೀನಾದ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯ ಪ್ರತಿಕ್ರಿಯೆಯಾಗಿ ರಾಜತಾಂತ್ರಿಕ ಮತ್ತು ಮಿಲಿಟರಿ ವ್ಯವಸ್ಥೆಯನ್ನು ವ್ಯಾಪಕವಾಗಿ ನೋಡಲಾಯಿತು. ಈ ಪ್ರಕ್ರಿಯೆಗೆ ಔಪಚಅರಿಕ ರಾಜತಾಂತ್ರಿಕ ಪ್ರತಿಭಟನೆ ವ್ಯಕ್ತಪಡಿಸುವ ಮೂಲಕ ಚೀನಾ ಪ್ರತಿಕ್ರಿಯೆ ನೀಡಿತು.
ಭಾರತವು ಅಮೆರಿಕದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ ಎಂದು ಬೀಗನ್ ಹೇಳಿಕೆ ಸಿಂಗಾಪುರದಲ್ಲಿ 2018 ರ ಶಾಂಗ್ರಿ-ಲಾ ಸಭೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ, 10 ರಾಷ್ಟ್ರಗಳ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) ಪ್ರಾದೇಶಿಕ ಬಣ ಇಂಡೋ-ಪೆಸಿಫಿಕ್ ಭವಿಷ್ಯದ ಕೇಂದ್ರಬಿಂದುವಾಗಿರಿ ಎಂದು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಬಂದಿದೆ.
"ಇದು ಕೇವಲ ಭಾರತವಲ್ಲ, ಆದರೆ ಇತರ ಹಲವು ದೇಶಗಳು ಇಂಡೋ-ಪೆಸಿಫಿಕ್‌ನಲ್ಲಿ ಆಸಿಯಾನ್‌ನ ಕೇಂದ್ರೀಕರಣವನ್ನು ಹೊಂದಿವೆ, ಇದರರ್ಥ ಈ ಪ್ರದೇಶದ ಸಮಸ್ಯೆಗಳನ್ನು ಆಸಿಯಾನ್ ನೇತೃತ್ವದ ಸಂಸ್ಥೆಗಳ ಮೂಲಕ ಪರಿಹರಿಸಬೇಕು" ಎಂದು ಗೇಟ್‌ವೇ ಹೌಸ್ ಥಿಂಕ್ ಟ್ಯಾಂಕ್‌ನ ವಿಶೇಷ ಸಹೋದ್ಯೋಗಿ ಮತ್ತು ಮ್ಯಾನ್ಮಾರ್‌ನ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ರಾಜೀವ್ ಭಾಟಿಯಾ ಈಟಿವಿ ಭಾರತ್‌ಗೆ ತಿಳಿಸಿದರು.
“ಆದರೆ, ಮತ್ತೊಂದೆಡೆ, ಅಮೆರಿಕದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಕೇಂದ್ರಬಿಂದು ಭಾರತ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದಾಗ, ಇದರರ್ಥ ಚೀನಾ ಜೊತೆ ವ್ಯವಹರಿಸುವಾಗ ಈ ಪ್ರದೇಶದಲ್ಲಿ ವಾಷಿಂಗ್ಟನ್‌ನ ನೀತಿಗೆ ಭಾರತವು ಹೆಚ್ಚು ಮಹತ್ವದ್ದಾಗಿದೆ," ಎಂದು ಇಂಡೋ-ಪೆಸಿಫಿಕ್ ವ್ಯವಹಾರಗಳ ಬಗ್ಗೆ ನಿಯಮಿತವಾಗಿ ಪ್ರತಿಕ್ರಿಯೆ ನೀಡುವ ಭಾಟಿಯಾ ವಿವರಿಸಿದ್ದಾರೆ.