ETV Bharat / bharat

ಗಣರಾಜ್ಯೋತ್ಸವ ಪಥ ಸಂಚಲನಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೋದಿ ನಮನ - Chief of Defence Staff and the three Services Chiefs

ಈ ಬಾರಿ ಗಣರಾಜ್ಯೋತ್ಸವ ಸಮಾರಂಭ ನಡೆಯುವ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (ನ್ಯಾಷನಲ್​ ವಾರ್​ ಮೆಮೋರಿಯಲ್​) ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಲಿದ್ದಾರೆ.

In a first, PM to visit National War Memorial before Republic Day Parade
ಗಣರಾಜ್ಯೋತ್ಸವದ ಮೆರವಣಿಗೆಗೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೋದಿ ನಮನ
author img

By

Published : Jan 23, 2020, 5:51 PM IST

Updated : Jan 23, 2020, 9:30 PM IST

ನವದೆಹಲಿ: ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (ನ್ಯಾಷನಲ್​ ವಾರ್​ ಮೆಮೋರಿಯಲ್​) ಗೌರವ ನಮನ ಸಲ್ಲಿಸಲಿದ್ದಾರೆ.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ಪಥ ಸಂಚಲನ ಸಮಾರಂಭಕ್ಕೆ ಆಗಮಿಸುವ ಮೋದಿ ಅವರನ್ನು 'ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ' (ಭೂ ಸೇನೆ, ವಾಯುಪಡೆ, ನೌಕಾಪಡೆ) ಜನರಲ್​ ಬಿಪಿನ್​ ರಾವತ್​ ಅವರು ಸ್ವಾಗತ ಮಾಡಿಕೊಳ್ಳಲಿದ್ದಾರೆ.

ಈ ಕುರಿತು ಗಣರಾಜ್ಯೋತ್ಸವದ ಉಪ ಕಮಾಂಡರ್ ಮೇಜರ್ ಜನರಲ್ ಅಲೋಕ್ ಕಕ್ಕರ್ ಅವರು ಮಾಹಿತಿ ನೀಡಿದ್ದಾರೆ.

2019ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಮೋದಿ ಅವರೇ ಉದ್ಘಾಟಿಸಿದ್ದರು. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಭಾರತೀಯ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಚೀಫ್​ ಡಿಫೆನ್ಸ್​ ಸ್ಟಾಫ್​​​ ('ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ') ಹುದ್ದೆಯನ್ನು ಮೋದಿ ಸರ್ಕಾರ 2019ರ ಡಿಸೆಂಬರ್​ನಲ್ಲಿ ಸೃಷ್ಟಿಸಿದ್ದು, ಅದಕ್ಕೆ ಜನರಲ್​ ರಾವತ್ ಅವರನ್ನು (ಮೊದಲ ಅಧಿಕಾರಿ) ನೇಮಿಸಿದೆ. ರಾವತ್​ ನೇಮಕವಾದ ಮೊದಲ ಗಣರಾಜ್ಯೋತ್ಸವದ ಪಥ ಸಂಚಲನ ಇದಾಗಿದೆ. ಗಣರಾಜ್ಯೋತ್ಸವ ಪರೇಡ್​​ನಲ್ಲಿ ಭೂ ಸೇನೆ, ನೌಕಾ ಪಡೆ, ವಾಯು ಪಡೆ ಮತ್ತು ಅರೆಸೈನಿಕ ಪಡೆಗಳ 16 ತಂಡಗಳು 31 ಬ್ಯಾಂಡ್‌ಗಳೊಂದಿಗೆ ಭಾಗವಹಿಸಲಿವೆ ಎಂದು ಕಕ್ಕರ್ ಮಾಹಿತಿ ನೀಡಿದ್ದಾರೆ.

Intro:script in wrap

tn_ngp_03_special_story_1000_paddy_variety_vis_7204630

Body:script in wrap

tn_ngp_03_special_story_1000_paddy_variety_vis_7204630

Conclusion:
Last Updated : Jan 23, 2020, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.