ETV Bharat / bharat

ಇಂದು ಮೂರು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ: ರೆಡ್​ ಅಲರ್ಟ್​ ಘೋಷಣೆ - ದೇಶದ ಮಳೆ ಅಪ್ಡೇಟ್​ ನ್ಯೂಸ್​

ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದರೆ, ಬಿಹಾರದಲ್ಲಿ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಬಿಹಾರದಲ್ಲಿ ಪ್ರವಾಹ ಪೀಡಿತರ ಸಂಖ್ಯೆಯಲ್ಲಿ ಸುಮಾರು 12,500 ರಷ್ಟು ಏರಿಕೆಯಾಗಿದ್ದು, ಒಟ್ಟು 16 ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ 81.44 ಲಕ್ಷಕ್ಕೆ ತಲುಪಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

IMD issues red alert for 2 Maha districts; more rains likely in Odisha, T'gana, C'garh today
ಇಂದು ಒಡಿಶಾ, ತೆಲಂಗಾಣ, ಛತ್ತೀಸ್‌ಗಡದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ: ಐಎಮ್‌ಡಿ ರೆಡ್​ ಅಲರ್ಟ್​ ಘೋಷಣೆ
author img

By

Published : Aug 17, 2020, 9:43 AM IST

ನವದೆಹಲಿ: ಒಡಿಶಾ ಮತ್ತು ತೆಲಂಗಾಣದಲ್ಲಿ ಭಾನುವಾರ ಭಾರಿ ಮಳೆ ಆಗುತ್ತಿದ್ದು, ನಾಲ್ಕು ಮಂದಿ ಮೃತಪಟ್ಟಿರುವ ವರದಿ ಆಗಿದೆ. ಭಾರಿ ಮಳೆ ಹಿನ್ನೆಲೆ ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲೂ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಉತ್ತರ ಭಾರತದ ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳು ಈಗಾಗಲೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತತ್ತರಿಸಿ ಹೋಗಿವೆ.

ಆದಾಗ್ಯೂ, ಆರ್ದ್ರತೆಯ ಮಟ್ಟವು ಶೇ 91ರಷ್ಟು ಹೆಚ್ಚಾಗಿದೆ ಮತ್ತು ಗರಿಷ್ಠ ತಾಪಮಾನವು 36.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಸಾಮಾನ್ಯಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ಹವಾಮಾನ ತಜ್ಞರು ಮುಂದಿನ ಎರಡು ದಿನಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂಬ ಮುನ್ಸೂಚನೆ ನೀಡಿದ್ದಾರೆ.

ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದರೆ, ಬಿಹಾರ ಪ್ರವಾಹದಲ್ಲೂ ಮತ್ತಷ್ಟು ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಬಿಹಾರದ ಪ್ರವಾಹದಿಂದ ಪೀಡಿತರ ಸಂಖ್ಯೆ ಸುಮಾರು 12,500 ರಷ್ಟು ಏರಿಕೆಯಾಗಿದ್ದು, ಒಟ್ಟು 16 ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ 81,44,356ಕ್ಕೆ ತಲುಪಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಇನ್ನು ಭಾನುವಾರ ಸಂಭವಿಸಿದ ಪ್ರವಾಹದಿಂದ ಯಾವುದೇ ಹೊಸ ಜಿಲ್ಲೆಗೆ ತೊಂದರೆಯಾಗಿಲ್ಲ ಮತ್ತು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ 33 ತಂಡಗಳು ಈವರೆಗೆ 5.46 ಲಕ್ಷ ಜನರನ್ನು ಸ್ಥಳಾಂತರಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಒಡಿಶಾ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದ ಉಂಟಾದ ಭಾರಿ ಮಳೆಯಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮಣ್ಣಿನ ಮನೆಗಳು ಮತ್ತು ಬೆಳೆಗಳಿಗೆ ಹಾನಿಯಾಗಿದೆ.

ಕರ್ನಾಟಕದ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ:

ಇಂದು ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ನೈರುತ್ಯ ರಾಜಸ್ಥಾನ, ರಾಯಲ್​ ಸೀಮಾದ ಕೆಲವು ಭಾಗಗಳು, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.