ETV Bharat / bharat

ತನ್ನ ಮದುವೆ ಕಾರ್ಡ್‌ನಲ್ಲಿ'' ಐ ಲವ್​​​ ಕೇಜ್ರಿವಾಲ್​'' ಎಂದು ಬರೆಸಿದ ಅಭಿಮಾನಿ! - ಲಗ್ನ ಪತ್ರಿಕೆಯಲ್ಲಿ ಕೇಜ್ರಿವಾಲ್​ ಅಭಿಮಾನಿ ಅಭಿಮಾನ

ಅರವಿಂದ್​ ಕೇಜ್ರಿವಾಲ್​ ಅಭಿಮಾನಿಯೋರ್ವ ತನ್ನ ಮದುವೆ ಕಾರ್ಡ್‌ನಲ್ಲಿ'' ಐ ಲವ್​​​ ಕೇಜ್ರಿವಾಲ್​'' ಎಂದು ಬರೆಸಿದ್ದಾನೆ.

I love kejriwal on wedding card by groom in jodhpur
'' ಐ ಲವ್​​​ ಕೇಜ್ರಿವಾಲ್​''
author img

By

Published : Feb 16, 2020, 10:34 AM IST

ಜೋಧಪುರ್​​/ರಾಜಸ್ಥಾನ : ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ರಾಮ್​​ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಕೇಜ್ರಿವಾಲ್ ಅವರ ಜನಪ್ರಿಯತೆಯೂ ಹೆಚ್ಚುತ್ತಿದೆ. ಯಾವ ಮಟ್ಟಿಗೆ ಎಂದರೆ ಕೇಜ್ರಿವಾಲ್​ ಅಭಿಮಾನಿಯೋರ್ವ ತನ್ನ ಮದುವೆ ಕಾರ್ಡ್‌ನಲ್ಲಿ'' ಐ ಲವ್​​​ ಕೇಜ್ರಿವಾಲ್​'' ಎಂದು ಪ್ರಿಂಟ್‌ ಹಾಕಿಸಿದ್ದಾನೆ.

ಜೋಧಪುರ್​​ದ ಬಾಲೇಸರ್​ ನಿವಾಸಿಯಾದ ನೀಲೇಶ್​​ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದು, ಇದೇ 21 ರಂದು ಹಸೆಮಣೆ ಏರಲಿದ್ದಾರೆ. ಈ ಹಿನ್ನೆಲೆ ಕೇಜ್ರಿವಾಲ್​​ರ ದೊಡ್ಡ ಅಭಿಮಾನಿಯಾಗಿರುವ ನೀಲೇಶ್​​ ತನ್ನ ಲಗ್ನ ಪತ್ರಿಕೆಯಲ್ಲಿ ಐ ಲವ್​​​ ಕೇಜ್ರಿವಾಲ್ ಎಂದು ಬರೆಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

'' ಐ ಲವ್​​​ ಕೇಜ್ರಿವಾಲ್​'' ಎಂದ ಅಭಿಮಾನಿ

ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಕೇಜ್ರಿವಾಲ್​​ ಪ್ರಮುಖ ಪಾತ್ರ ವಹಿಸಿದ್ದರು. ಮಾತ್ರವಲ್ಲದೇ ದೆಹಲಿಯಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ, ಅವರು ಜನಸಾಮಾನ್ಯ ಜನರ ಯೋಗಕ್ಷೇಮಾಭಿವೃದ್ಧಿಗಾಗಿ ಮಾಡಿದ ಕೆಲಸಗಳು ಶ್ಲಾಘನೀಯ. ಹೀಗಾಗಿ ನಾನು ಅವರ ದೊಡ್ಡ ಫ್ಯಾನ್​​ ಆದೆ ಎಂದು ನೀಲೇಶ್​​ ತಿಳಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲಾ 70 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ನನಗೆ ಬೇಸರವಿದೆ ಎಂದು ನೀಲೇಶ್​​ ಹೇಳಿದ್ದಾರೆ. ಅಲ್ಲದೇ ನೀಲೇಶ್​ ಕೇಜ್ರಿವಾಲ್ ಅವರನ್ನು ದೇಶದ ಭವಿಷ್ಯದ ಪ್ರಧಾನಿ ಎಂದು ಪರಿಗಣಿಸುತ್ತಾರೆ. ಆದರೆ ಇದುವರೆಗೂ ಕೇಜ್ರಿವಾಲ್ ಅವರನ್ನು ಭೇಟಿ ಮಾಡದ ನೀಲೇಶ್, ಹೋಳಿ ಹಬ್ಬದ ನಂತರ ದೆಹಲಿಗೆ ಹೋಗಿ ಕೇಜ್ರಿವಾಲ್ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದ್ರು. ಇನ್ನು ನೀಲೇಶ್​ ಅವರ ಸ್ನೇಹಿತರು ನೀಲೇಶ್​​ಗೆ ಕೇಜ್ರಿವಾಲ್ ಎಂದು ಅಡ್ಡ ಹೆಸರು ಇಟ್ಟಿದ್ದಾರಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.