ETV Bharat / bharat

ಕೋವಿಡ್ ನಿಯಂತ್ರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಡಿಜಿಟಲ್ ಮೂಲಸೌಕರ್ಯ

ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿಶ್ವದಾದ್ಯಂತ ಹಬ್ಬಿರುವ ಈ ಸಂದರ್ಭದಲ್ಲಿ ವಿವಿಧ ಡಿಜಿಟಲ್ ಸೌಲಭ್ಯಗಳು ಮುಂಚೂಣಿಗೆ ಬಂದಿವೆ. ಕೃತಕ ಬುದ್ಧಿಮತ್ತೆ, ಸ್ಮಾರ್ಟ್‍ಫೋನ್‍ಗಳು ಮತ್ತು ಹೆಚ್ಚಿನ ಡಾಟಾ ಸಂಗ್ರಹಣಾ ವಿಧಾನಗಳು ದಕ್ಷಿಣ ಕೊರಿಯಾ, ತೈವಾನ್ ಮತ್ತು ಚೈನಾ ದೇಶಗಳಿಗೆ ಕೊವಿಡ್-19ನ್ನು ಎದುರಿಸಲು ಸಹಕರಿಸಿವೆ.

ಕೋವಿಡ್ 19
ಕೋವಿಡ್ 19
author img

By

Published : Apr 14, 2020, 9:46 PM IST

ಹೈದರಾಬಾದ್: ಪ್ರಸ್ತುತ ಕೋವಿಡ್ 19 ಎಲ್ಲೆಡೆ ಹಬ್ಬಿದ್ದು, ರೋಗ ಹರಡುವುದನ್ನು ತಡೆಯಲು ಎಲ್ಲೆಡೆ ಲಾಕ್‍ಡೌನ್ ಘೋಷಿಸಲಾಗಿದೆ. ಈ ರೋಗದ ಪರಿಣಾಮಗಳನ್ನು ಎದುರಿಸಲು ಮತ್ತು ಭವಿಷ್ಯದಲ್ಲಿ ಇಂತಹ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಡಿಜಿಟಲ್ ಮೂಲ ಸೌಕರ್ಯಗಳನ್ನು ಬಲಪಡಿಸುವ ಅಗತ್ಯವಿದೆ.

ಈ ಡಿಜಿಟಲ್ ಮೂಲಸೌಕರ್ಯ ಪೈಕಿ ಕೃತಕ ಬುದ್ಧಿಮತ್ತೆಯನ್ನು ಪ್ರಥಮ ಪ್ರಾಶಸ್ತ್ಯ ನೀಡಿ ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಇದು ಗೃಹಬಂಧನದ ಅವಧಿಯಲ್ಲಿ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇರಿಸಿ ಮೇಲ್ವಿಚಾರಣೆ ನಡೆಸಲು ಸಹಾಯ ನೀಡುತ್ತದೆ. ಇದು ಗುಂಪುಗಳನ್ನು ಗುರುತಿಸಲು ಸಹಕರಿಸುವುದರೊಂದಿಗೆ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಕರಿಸಲು ಸಹಕರಿಸುತ್ತದೆ.

ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸದೃಢವಾಗಿರಲು ಮತ್ತು ಬಲಹೀನರಾಗದಂತೆ ತಡೆಯಲು ವಿಶ್ವದಾದ್ಯಂತ ಅನೇಕ ನಗರಗಳು ಸಾಕಷ್ಟು ಆವಿಷ್ಕಾರಗಳನ್ನು ಮಾಡಿದ್ದು ,ಇದನ್ನು ಈ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲೂ ಬಳಸಿಕೊಳ್ಳಬಹುದಾಗಿದೆ.

ಈ ವರೆಗೂ ಚರಿತ್ರೆಯಲ್ಲಿ ಯಾವುದೇ ಕಾಯಿಲೆ ಕೂಡ ಇಷ್ಟು ತ್ವರಿತಗತಿಯಲ್ಲಿ ವಿಶ್ವದಾದ್ಯಂತ ವ್ಯಾಪಿಸಿ, ಈ ರೀತಿ ಲಕ್ಷಾಂತರ ಜನರಿಗೆ ಹರಡಿರಲಿಲ್ಲ. ಈ ಕಾಯಿಲೆಗೆ ವೈದೈಕೀಯ ಚಿಕಿತ್ಸೆಯೂ ಅಷ್ಟಾಗಿ ಲಭ್ಯವಿಲ್ಲ. ಕೇವಲ ಒಂದರಿಂದ ಹತ್ತು ಶೇಕಡಾ ಜನರಿಗೆ ಮಾತ್ರ ಚಿಕಿತ್ಸೆ ದೊರಕುತ್ತಿದೆ.

ಕೇರಳದಲ್ಲಿ ಕೋವಿಡ್-19 ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿರುವವರನ್ನು ಗುರುತಿಸಲೆಂದೇ ಕಾಲ್ ಸೆಂಟರ್​​​ಗಳನ್ನು ತೆರೆಯಲಾಗಿದೆ. ಇವರ ಪ್ರಯಾಣದ ವಿವರಗಳನ್ನು ದಾಖಲಿಸಲು ವಿಶೇಷ ಆ್ಯಪ್​​ ಕೂಡ ಅಭಿವೃದ್ಧಿ ಪಡಿಸಲಾಗಿದೆ. ಅದರೊಂದಿಗೆ ಈಗಾಗಲೇ ಇತರ ಸೋಂಕಿತರು ಅಥವಾ ಶಂಕಿತರ ದಾಖಲಿಸಿರುವ ವಿವರಗಳಿಗೂ ಈ ವ್ಯಕ್ತಿಯ ಪ್ರಯಾಣದ ವಿವರಗಳಿಗೂ ಹೊಂದಿಕೆಯಾಗುತ್ತದೆಯೇ ಎಂದು ಗುರುತಿಸಲೂ ಸುಲಭವಾಗುತ್ತದೆ.

ಸರ್ಕಾರ ಮತ್ತು ಪೊಲೀಸರ ಲಭ್ಯವಿರುವ ಪರಿಚಯ ಡಾಟಾ, ಮೊಬೈಲ್ ಫೋನ್ ಟ್ರೇಸ್ ಮತ್ತು ಸ್ಥಳ ಗುರುತಿಸುವ ಸೌಲಭ್ಯಗಳನ್ನು ಬಳಸಿಕೊಂಡು ವಿವಿಧ ದತ್ತಾಂಶ/ ಡಾಟಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಬಹುದು.

ಚೈನಾದಲ್ಲಿ ಕೋವಿಡ್-19 ವ್ಯಾಪಕವಾಗಿ ಕಾಣಿಸಿಕೊಳ್ಳಲಾರಂಭಿಸಿದ ಕೂಡಲೇ ತೈವಾನ್‍ನಲ್ಲಿ ರಾಷ್ಟ್ರೀಯ ಆರೋಗ್ಯ ಆದೇಶ ಕೇಂದ್ರವೊಂದನ್ನು ಆರಂಭಿಸಲಾಯಿತು. ಸರ್ಕಾರ ದೇಶದ ಒಳಗಿನ ಮತ್ತು ಹೊರಗಿನ ಪ್ರಯಾಣಿಕರನ್ನು ನಿರ್ಬಂಧಿಸಿತು. ಹೆಚ್ಚಿನ ಪ್ರಮಾಣದ ಡಾಟಾವನ್ನು ಬಳಸಿಕೊಂಡು ಸೋಂಕಿತರನ್ನು ಗುರುತಿಸಲಾರಂಭಿಸಿತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಹರಡುವುದನ್ನು ತಡೆಹಿಡಿಯಿತು. ರಾಷ್ಟ್ರೀಯ ಆರೋಗ್ಯ ವಿಮೆ ಪಾಲಿಸಿಗಳು, ವಲಸೆ, ಕಸ್ಟಮ್, ಆಸ್ಪತ್ರೆ ಭೇಟಿ, ವಿಮಾನದ ಟಿಕೆಟ್‍ಗಳ ಕ್ಯೂಆರ್ ಕೋಡ್ ಹೀಗೆ ವಿವಿಧ ಮಾಹಿತಿಗಳನ್ನೊಳಗೊಂಡ ಡಾಟಾಬೇಸ್‍ವೊಂದನ್ನು ರೂಪಿಸಲಾಯಿತು.

ಅಲ್ ಅಲ್ಗಾರಿತಮ್‍ಗಳನ್ನು/ಕ್ರಮಾವಳಿಗಳನ್ನು ಬಳಸಿಕೊಂಡು ಜನರನ್ನು ಎಚ್ಚರಿಸಲಾಯಿತು. ಇದು ಆರೋಗ್ಯ ಕಾರ್ಯಕರ್ತರಿಗೆ ರೋಗಿಗಳ ಪ್ರಯಾಣದ ವಿವರಗಳನ್ನು ಕಂಡು ಹಿಡಿಯಲು ಸಹಾಯ ನೀಡಿತು. ಈ ಹೆಚ್ಚಿನ ದತ್ತಾಂಶದ ಸಹಾಯದಿಂದ ಅಧಿಕಾರಿಗಳು ಪ್ರತಿಯೊಬ್ಬರ ಆರೋಗ್ಯದ ವಿವರಗಳನ್ನು ಗಡಿ ಭದ್ರತಾ ಪಡೆಯವರಿಗೂ ಕಳುಹಿಸಲು ಸಾಧ್ಯವಾಯಿತು. ಈ ಆರೋಗ್ಯ ಸ್ಥಿತಿಯ ಸಂದೇಶಗಳೇ ಪಾಸ್‍ನ ರೀತಿಯಲ್ಲಿ ಕಾರ್ಯ ನಿರ್ವಹಿಸಿದವು. ಕೋವಿಡ್‍ನ ಗುಣಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ಅದರ ಗುಣಲಕ್ಷಣಗಳಿರುವ ರೋಗಿಗಳನ್ನು ಮೊಬೈಲ್ ಫೋನ್ ಟ್ರಾಕರ್ ಮೂಲಕ ಅವರನ್ನು ಗುರುತಿಸಿ ಅವರನ್ನು ಗೃಹಬಂಧನಕ್ಕೆ ಒಳಪಡಿಸಲಾಯಿತು.

ಕೆನಡಾ ದೇಶದ ಬ್ಲೂಡಾಟ್ ಸಿಸ್ಟಮ್ಸ್ ಸಂಸ್ಥೆ, ಈ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಮೊತ್ತ ಮೊದಲ ಬಾರಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿತ್ತು. ಈ ಸಂಸ್ಥೆಯ ಕೃತಕ ಬುದ್ದಿಮತ್ತೆ ಸಾಧನ, 65 ಭಾಷೆಗಳಲ್ಲಿ ಪ್ರಕಟಗೊಂಡ ಸುದ್ದಿ, ಲೇಖನಗಳು, ಬ್ಲಾಗ್ ಬರಹಗಳನ್ನು ಪರಿಶೀಲಿಸಿ, ದತ್ತಾಂಶ ಶೇಖರಣೆ ಮಾಡುತ್ತಿತ್ತು. ಅದು ಡಿಸೆಂಬರ್ 1, 2019ರಂದೇ ಸಾರ್ಸ್ ತೆರನಾದ ಮಾರಣಾಂತಿಕ ಕಾಯಿಲೆಯೊಂದು ಚೀನಾದ ವುಹಾನ್‍ನಲ್ಲಿ ಹರಡಲಿದೆ ಎಂಬ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಗೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೊಷಿಸುವ 9 ದಿನಗಳ ಮೊದಲೇ ಬಂದಿತ್ತು.

ಬ್ಲೂಡಾಟ್ ಸಿಸ್ಟಮ್ ಸಂಸ್ಥೆ ತನ್ನ ಲೇಖನವೊಂದರಲ್ಲಿ, ಚೀನಾದ ವುಹಾನ್‍ನ ಮಾಂಸ ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ನ್ಯೂಮೋನಿಯಾದಿಂದ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು ಎಂದು ತಿಳಿಸಿತ್ತು. ಬ್ಲೂಡಾಟ್ ಸಂಸ್ಥೆಯ 40 ಉದ್ಯೋಗಿಗಳ ಪೈಕಿ ವೈದ್ಯರು, ಪಶು ವೈದ್ಯರು, ಸಾಂಕ್ರಾಮಿಕ ರೋಗ ತಜ್ಞರು, ದತ್ತಾಂಶ ವಿಜ್ಞಾನಿಗಳು, ಸಾಫ್ಟ್‍ವೇರ್ ತಜ್ಞರು ಇದ್ದರು. ಇವರು 65 ಭಾಷೆಗಳಲ್ಲಿ ಪ್ರಕಟವಾಗುವ ಲೇಖನಗಳನ್ನು ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ ಹಾಗೂ ಮೆಷಿನ್ ಲರ್ನಿಂಗ್ ಮೂಲಕ ವಿಶ್ಲೇಷಿಸುತ್ತಿದ್ದರು. ಅವರು ಯಾವುದಾದರೊಂದು ರೋಗ ಹರಡುವಿಕೆಯ ಮಾಹಿತಿ ಇದ್ದಾಗ ಎಚ್ಚರಿಕೆಯ ಸಂದೇಶ ಪಡೆದಯುತ್ತಿದ್ದರು.

ಇದೇ ಸಂಸ್ಥೆ 2016ರಲ್ಲಿ ಬ್ರೆಜಿಲ್‍ನಿಂದ ಝೈಕಾ ವೈರಸ್ ಹರಡುವ ಬಗ್ಗೆ ಅಮೆರಿಕಾಗೆ ಎಚ್ಚರಿಕೆ ನೀಡಿತ್ತು. ಚೀನಾದ ಶೇ 80ರಷ್ಟು ವಹಿವಾಟು ಡಿಜಿಟಲ್ ನಗದು ರಹಿತವಾಗಿ ನಡೆಯುತ್ತಿದೆ. ಅವರು ಅಲಿ ಪೇ, ವಿ ಚಾಟ್‍ನಂತಹ ಅಪ್‍ಗಳ ಮೂಲಕ ವಹಿವಾಟು ನಡೆಸುತ್ತಾರೆ. ಚೀನಾದ ಅಧಿಕಾರಿಗಳು ಈ ದತ್ತಾಂಶವನ್ನು ಜನರ ಪ್ರಯಾಣದ ಮಾಹಿತಿ ಪತ್ತೆ ಹಚ್ಚಲು ಬಳಸುತ್ತಾರೆ ಹಾಗೂ ಆ ಮೂಲಕ ಅನಿವಾರ್ಯವಾದರೆ ತಕ್ಷಣ ಕ್ರಮಕೈಗೊಳ್ಳುತ್ತಾರೆ.

ಆರೋಗ್ಯ ಕ್ಷೇತ್ರದಲ್ಲಿ ಈಗಾಗಲೆ ನ್ಯುಮೋನಿಯಾ ಹಾಗೂ ಅದರ ಹರಡುವಿಕೆಯ ತೀವ್ರತೆ ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಬಳಸುತ್ತಾರೆ. ಇದು ವೈದ್ಯರಿಗೆ ರೋಗ ನಿರ್ಣಯ ಮಾಡುಲು ಹಾಗೂ ಚಿಕಿತ್ಸೆ ನಿರ್ಧರಿಸಲು ನೆರವಾಗುತ್ತದೆ. ಆದರೆ ಸರ್ವರ್​​ಗಳ ಹಾಗೂ ಕ್ಲೌಡ್ ಶೇಖರಣೆಯ ಸಾಮರ್ಥ್ಯ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಏಕೆಂದರೆ, ಈ ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲರೂ ಗೃಹಬಂಧನ-ವರ್ಕ್ಫ್ರಮ್ ಹೋಂ ಮಾಡುವುದರಿಂದ ಅಧಿಕ ಸಾಮರ್ಥ್ಯದ ಮೂಲ ಸೌಕರ್ಯ ಬೇಕಿರುತ್ತದೆ.

ಕೆಲವು ಸಂಶೋಧಕರು, ಖಾಸಗಿ ಸಂಸ್ಥೆಗಳು, ರಾಜ್ಯ ಸರಕಾಗಳ ಸಹಯೋಗದೊಂದಿಗೆ ಆರೋಗ್ಯ ನಕ್ಷೆಯಂತಹ ಡಿಜಿಟಲ್ ವೇದಿಕೆಗಳನ್ನು ನಿರ್ಮಿಸಿ, ಆ ಮೂಲಕ ಈ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಚಿತ್ರಗಳ ಮೂಲಕ ಸಮಯ, ಸ್ಥಳ ಹಾಗೂ ಹರಡುವಿಕೆಯ ವಿಧಾನವನ್ನು ತೋರಿಸುತ್ತಿವೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಈಗಾಗಲೆ ವಿಶ್ವಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿಯನ್ನು ಸೋಂಕಿತರನ್ನಾಗಿಸಿದ್ದು, 50,000ಕ್ಕೂ ಹೆಚ್ಚು ರೋಗಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಸುಮಾರು 2 ಲಕ್ಷದಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ.

ಭಾರತ ಈಗಾಗಲೇ ಈ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಹತೋಟಿಯಲ್ಲಿಡಲು 21 ದಿನಗಳ ಲಾಕ್​ಡೌನ್ ಘೋಷಿಸಿದ್ದು, ದೇಶಾದ್ಯಂತ ಅದು ಈಗ ಜಾರಿಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.