ETV Bharat / bharat

ಮೂತ್ರ ವಿಸರ್ಜನೆಯಲ್ಲಿ ತೊಂದರೆಯೇ? - ಇಲ್ಲಿದೆ ಸುಲಭ ಪರಿಹಾರ - ಮೂತ್ರ ಹೊರ ಹೋಗುವಾಗ ನೋವು

ಮೂತ್ರ ವಿಸರ್ಜನೆಯಲ್ಲಿನ ತೊಂದರೆಗಳು ಮೂತ್ರ ಹೊರ ಹೋಗುವಾಗ ನೋವು ಅಥವಾ ಕಿರಿಕಿರಿ ಅಥವಾ ಅಡಚಣೆಯಾಗಬಹುದು. ಇದು ರೋಗದ ಲಕ್ಷಣವೂ ಆಗಿರಬಹುದು ಅಥವಾ ಮೂತ್ರದ ಸೋಂಕು ಇತ್ಯಾದಿಗಳ ಕಾರಣದಿಂದಾಗಿ ಸಂಭವಿಸಬಹುದು. ಆದ್ದರಿಂದ, ಡಾ.ನಿರ್ಮಲಾ ಅವರು ಈ ಕೆಳಗಿನ ಮನೆಮದ್ದುಗಳನ್ನು ಸೂಚಿಸುತ್ತಾರೆ. ಅಂತಹ ಮೂತ್ರದ ಸಮಸ್ಯೆಗಳ ಸಂದರ್ಭದಲ್ಲಿ ಇದನ್ನು ಅಭ್ಯಾಸ ಮಾಡಬಹುದು.

ಮೂತ್ರ ವಿಸರ್ಜನೆಯಲ್ಲಿನ ತೊಂದರೆಗಳಿಗೆ ಮನೆಮದ್ದು

author img

By

Published : Jun 26, 2020, 8:41 PM IST

ಹೈದರಾಬಾದ್ : ಆರೋಗ್ಯಕರ ದೇಹಕ್ಕೆ ನೈರ್ಮಲ್ಯ ಬಹಳ ಮುಖ್ಯ. ಕೋವಿಡ್-19 ಸಾಂಕ್ರಾಮಿಕ ರೋಗದೊಂದಿಗೆ, ಪ್ರಕೃತಿ ನಮ್ಮ ಜೀವನದಲ್ಲಿ ಅದರ ಮಹತ್ವವನ್ನು ಪುನರುಚ್ಛರಿಸಿದೆ. ಆರೋಗ್ಯಕರವಲ್ಲದ ಅಭ್ಯಾಸಗಳು ಮತ್ತು ನಮ್ಮ ದೇಹದಲ್ಲಿನ ಕೆಲವು ಅಸಮತೋಲನಗಳು ವ್ಯಕ್ತಿಯ ಮೂತ್ರದ ಸಮಸ್ಯೆಗಳಿಗೆ ಕಾರಣವಾಗಬಹುದು.

ಆಂಧ್ರಪ್ರದೇಶದ ಅಮೃತ ಆಯುರ್ವೇದ ಆಸ್ಪತ್ರೆಯ ಎಂಡಿ ಆಯುರ್ವೇದ ವೈದ್ಯೆ ಡಾ.ನಿರ್ಮಲಾ ದೇವಿ, ನಮ್ಮ ದೇಹದಲ್ಲಿ, ಮೂತ್ರಪಿಂಡಗಳು ರಕ್ತದ ಸಂಯೋಜನೆ ಮತ್ತು ಪ್ರಮಾಣವನ್ನು ನಿಯಂತ್ರಿಸುತ್ತವೆ. ಅದರಿಂದ ತ್ಯಾಜ್ಯವನ್ನು ಮೂತ್ರದ ರೂಪದಲ್ಲಿ ತೆಗೆದುಹಾಕುತ್ತದೆ. ಅಲ್ಲಿ ರಕ್ತದ ಪಿಹೆಚ್ ಅನ್ನು ನಿಯಂತ್ರಿಸುವ ಮೂಲಕ ರಕ್ತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂತ್ರದ ವ್ಯವಸ್ಥೆಯಲ್ಲಿನ ಅಸಮತೋಲನವು ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಡಿಸುರಿಯಾ ಎಂದು ಕರೆಯಲಾಗುತ್ತದೆ. ಆಯುರ್ವೇದದಲ್ಲಿ, ಮೂತ್ರ ವಿಸರ್ಜನೆಯಲ್ಲಿನ ತೊಂದರೆಗಳನ್ನು ‘ಮುತ್ರಕ್ರುಚ’ ಎಂದು ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದರು.

ಮೂತ್ರ ವಿಸರ್ಜನೆಯಲ್ಲಿನ ತೊಂದರೆಗಳು ಮೂತ್ರ ಹೊರ ಹೋಗುವಾಗ ನೋವು ಅಥವಾ ಕಿರಿಕಿರಿ ಅಥವಾ ಅಡಚಣೆಯಾಗಬಹುದು. ಇದು ರೋಗದ ಲಕ್ಷಣವೂ ಆಗಿರಬಹುದು ಅಥವಾ ಮೂತ್ರದ ಸೋಂಕು ಇತ್ಯಾದಿಗಳ ಕಾರಣದಿಂದಾಗಿ ಸಂಭವಿಸಬಹುದು. ಆದ್ದರಿಂದ, ಡಾ.ನಿರ್ಮಲಾ ಅವರು ಈ ಕೆಳಗಿನ ಮನೆಮದ್ದುಗಳನ್ನು ಸೂಚಿಸುತ್ತಾರೆ. ಅಂತಹ ಮೂತ್ರದ ಸಮಸ್ಯೆಗಳ ಸಂದರ್ಭದಲ್ಲಿ ಇದನ್ನು ಅಭ್ಯಾಸ ಮಾಡಬಹುದು.

1.ಏಲಕ್ಕಿ ಮತ್ತು ಹಾಲು: 3 ಏಲಕ್ಕಿ ಬೀಜಗಳನ್ನು ಪುಡಿ ಮಾಡಿ. ಒಂದು ಕಪ್ ತಣ್ಣನೆಯ ಹಾಲಿನೊಂದಿಗೆ ಪ್ರತಿದಿನ ಎರಡು ಬಾರಿ ತೆಗೆದುಕೊಳ್ಳಿ. ಮೂತ್ರ ವಿಸರ್ಜಿಸುವಾಗ ಉಂಟಾಗುವ ಉರಿಯುವ ಸಂವೇದನೆಯನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.

2.ಕೊತ್ತಂಬರಿ ಪುಡಿ: ಒಂದು ಕಪ್ ಬಿಸಿನೀರನ್ನು ತೆಗೆದುಕೊಂಡು 2 ಟೀ ಸ್ಪೂನ್​ ಕೊತ್ತಂಬರಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಪ್ರತಿದಿನ ಎರಡು ಬಾರಿ ಕುಡಿಯಿರಿ.

3.ಆಮ್ಲಾ ಮತ್ತು ಅರಿಶಿನ ಕಷಾಯ: ಒಂದು ಕಪ್ ನೀರು ತೆಗೆದುಕೊಂಡು 1 ಟೀ ಸ್ಪೂನ್ ಆಮ್ಲಾ ಪುಡಿ ಮತ್ತು 1 ಟೀ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ. ನೀರನ್ನು ಅರ್ಧದ ವರೆಗೆ ಕುದಿಸಿ. ಇದನ್ನು 3-5 ದಿನಗಳವರೆಗೆ ದಿನಕ್ಕೆ ಮೂರು ಬಾರಿ ಕುಡಿಯಿರಿ.

4.ಶುಂಠಿ ಮತ್ತು ಕಪ್ಪು ಎಳ್ಳು ಪೇಸ್ಟ್: ಒಂದು ಸಣ್ಣ ತುಂಡು ಶುಂಠಿಯನ್ನು ಸಿಪ್ಪೆ ತೆಗೆದು, ಪುಡಿ ಮಾಡಿ ಮತ್ತು ಅದಕ್ಕೆ 1 ಟೀ ಸ್ಪೂನ್ ಕಪ್ಪು ಎಳ್ಳು ಸೇರಿಸಿ. ಅವುಗಳನ್ನು ಗ್ರೈಂಡರ್​ನಲ್ಲಿ ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಒಂದು ಬಟ್ಟಲಿನಲ್ಲಿ ಖಾಲಿ ಮಾಡಿ ಈಗ 1/4 ಟೀ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉರಿ ಮೂತ್ರ ಗುಣಪಡಿಸಲು ಇದನ್ನು ಪ್ರತಿದಿನ 2-3 ಬಾರಿ ಸೇವಿಸಿ.

5.ಬಾರ್ಲಿ ನೀರು: 1 ಟೇಬಲ್ ಸ್ಪೂನ್ ಬಾರ್ಲಿ ಮತ್ತು 1 ಕಪ್ ನೀರು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ ಮುಚ್ಚಳವನ್ನು ಮುಚ್ಚಿ ಮತ್ತು 6-7 ಸೀಟಿಯಾದ ಬಳಿಕ ಆರಿಸಿ. ಸ್ವಲ್ಪ ಸಮಯದ ನಂತರ ಕುಕ್ಕರ್ ತೆರೆಯಿರಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ. ಅದನ್ನು ಬ್ಲೆಂಡರ್​ಗೆ ಸೇರಿಸಿ ಮತ್ತು ಮಿಶ್ರಣ ಮಾಡಿ. ಈಗ ಇದನ್ನು ಗ್ಲಾಸ್​ಗೆ ಹಾಕಿ, 1/2 ಟೀ ಸ್ಪೂನ್ ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

ಇತರ ಪರಿಹಾರಗಳು :

  • ಹಾಲಿಗೆ ತುಪ್ಪ ಸೇರಿಸಿ ಮತ್ತು ಅದನ್ನು ಸೇವಿಸಿ
  • ತೆಂಗಿನ ನೀರು ಸಹ ಸಹಾಯಕವಾಗಿದೆ
  • ನೀವು ಬಾಟಲ್ ಸೋರೆಕಾಯಿ (ಲಾಕಿ) ರಸವನ್ನು ಸೇವಿಸಲು ಪ್ರಯತ್ನಿಸಬಹುದು

ಮೂತ್ರದ ಸಮಸ್ಯೆಗಳಿಂದ ಪರಿಹಾರ ಪಡೆಯಲು ನಿಮ್ಮ ಆಹಾರದಲ್ಲಿ ಈ ವಿಷಯಗಳನ್ನು ಸೇರಿಸಿ:

  • ಸಕ್ಕರೆ ಕ್ಯಾಂಡಿ (ಮಿಶ್ರಿ), ಮಜ್ಜಿಗೆ, ಹಾಲು, ಸೋರೆಕಾಯಿ, ಖರ್ಜೂರ, ತೆಂಗಿನ ನೀರು, ಬೆಟ್ಟದ ನೆಲ್ಲೆಕಾಯಿ, ಮೊಸರು
  • ಮೂತ್ರದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಅಲ್ಕೊಹಾಲ್, ಅತಿಯಾದ ಕೆಲಸ, ಸೆಕ್ಸ್, ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಮೀನು, ಉಪ್ಪು, ಕರಿದ ಆಹಾರ, ಒಣ ಮತ್ತು ಹುಳಿ ಆಹಾರವನ್ನು ಸೇವಿಸಬೇಡಿ.

ಯಾವುದೇ ಮೂತ್ರ ವಿಸರ್ಜನೆಯ ತೊಂದರೆಗಳಿದ್ದಲ್ಲಿ, ನೀವು ಈ ಆಯುರ್ವೇದ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅದನ್ನು ಅನುಸರಿಸುವುದು ಸಹ ತುಂಬಾ ಸುಲಭ. ಹಾಗಾದರೂ, ಸಮಸ್ಯೆ ಮುಂದುವರಿದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.