ಹೈದರಾಬಾದ್: ಮಕ್ಕಳ ದಿನಾಚರಣೆ ದಿನವಾದ ಇಂದು ಟ್ವಿಟರ್ ಟಾಪ್ ಟ್ರೆಂಡಿಂಗ್ನಲ್ಲಿ #HelmetSaves ಎಂಬ ಹ್ಯಾಶ್ ಟ್ಯಾಗ್ ಮುಂಚೂಣಿಯಲ್ಲಿದೆ.
ಹೆಲ್ಮೆಟ್ ಧರಿಸದೆ ಪ್ರಯಾಣಿಸಿ ಸಾವಿರಾರು ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವು ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೇ ಮಾಡಿದ ಪ್ರಯಾಣದಿಂದಾಗಿ ರೈಡರ್ಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಕ್ಕಳ ದಿನಾಚರಣೆಯ ದಿನವಾದ ಇಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಪುಟ್ಟ ಮಗುವೊಂದು, ಹೆಲ್ಮೆಟ್ ಇಲ್ಲದೆ ಬೈಕ್ ಏರಿ ಕೂತ ಅಪ್ಪನಿಗೆ ಮನೆಯೊಳಗಿದ್ದ ಹೆಲ್ಮೆಟ್ ತಂದು ಕೊಟ್ಟು ರಸ್ತೆ ಸುರಕ್ಷತೆಯ ಬಗ್ಗೆ ಹೇಳಿಕೊಟ್ಟಿದ್ದಾಳೆ. ಈ ಮೂಲಕ ತಂದೆಯನ್ನು ಅಪಘಾತದ ಸಂಭವದಿಂದ ರಕ್ಷಿಸಿ ತನ್ನ ಕುಟುಂಬವನ್ನೂ ಪುಟ್ಟ ಮಗು ರಕ್ಷಿಸಿದೆ. ಈ ವಿಡಿಯೋ ಈಗ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.
-
This Children" s="" day,="" do="" listen="" to="" your="" child="" and="" support="" #RoadSafety ⛑️#HappyChildrensDay #HelmetSaves pic.twitter.com/4wKvbRkVtB
— Uttarakhand Police (@uttarakhandcops) November 14, 2019 ' class='align-text-top noRightClick twitterSection' data=''>
ಇನ್ನೊಂದೆಡೆ ಮಕ್ಕಳ ತಂಡವೊಂದು ಮಕ್ಕಳ ದಿನಾಚರಣೆಯ ದಿನವಾದ ಇಂದು ತಮ್ಮ ಹಾಗೂ ತಮ್ಮವರ ಭದ್ರತೆಗಾಗಿ ಹೆಲ್ಮೆಟ್ ಧರಿಸಿ ಸುರಕ್ಷತೆಯಿಂದ ಪ್ರಯಾಣಿಸಿ ಎಂದು ತಮ್ ಪೋಷಕರಿಗೆ ತಿಳಿ ಹೇಳಿದೆ.
ತಾವು ಮಾತ್ರ ಹೆಲ್ಮೆಟ್ ಧರಿಸಿಕೊಂಡು ತಮ್ಮ ಮಕ್ಕಳ ತಲೆಗೆ ಹೆಲ್ಮೆಟ್ ಹಾಕದೆ ಶಾಲೆಗೆ ಕರೆತರುವ ಪೋಷಕರಿಗೆ ಈ ಮಕ್ಕಳು ತಿಳಿ ಹೇಳಿದ್ದಾರೆ. ಮಕ್ಕಳಿಗೂ ಹೆಲ್ಮೆಟ್ ಹಾಕಿ. ಆ ಹೆಲ್ಮೆಟ್ ನಿಮ್ಮ ಜೊತೆಗೆ ನಿಮ್ಮವರನ್ನೂ ರಕ್ಷಿಸುತ್ತದೆ ಎಂದು ಮಕ್ಕಳು ಹೇಳಿದ್ದಾರೆ.
-
A group of school kids decided to take matters into their own hands, when it came to their safety. Watch The Voice of Children here and support child safety. #ChildrensDay #HelmetSaves pic.twitter.com/MKjhpIp65W
— Exide Life Insurance (@ExideLife) November 13, 2019 " class="align-text-top noRightClick twitterSection" data="
">A group of school kids decided to take matters into their own hands, when it came to their safety. Watch The Voice of Children here and support child safety. #ChildrensDay #HelmetSaves pic.twitter.com/MKjhpIp65W
— Exide Life Insurance (@ExideLife) November 13, 2019A group of school kids decided to take matters into their own hands, when it came to their safety. Watch The Voice of Children here and support child safety. #ChildrensDay #HelmetSaves pic.twitter.com/MKjhpIp65W
— Exide Life Insurance (@ExideLife) November 13, 2019
ಇಂದು ನವೆಂಬರ್ 14 ಮಕ್ಕಳ ದಿನಾಚರನಣೆ. ಮಕ್ಕಳ ದಿನವಾದ ಇಂದೇ ಈ ಹೆಲ್ಮೆಟ್ ಸೇಫ್ ಟ್ರೆಂಡ್ ಆಗುತ್ತಿದೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಫುಲ್ ಹವಾ ಕ್ರಿಯೇಟ್ ಮಾಡಿದ್ದಾರೆ. ತಮ್ಮ ರಕ್ಷಣೆಗಾಗಿ ಮಕ್ಕಳೇ ಹಿರಿಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ವಿಡಿಯೋ ಕೂಡಾ ಈಗ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.