ಕಠ್ಮಂಡು: ನೆರೆಯ ರಾಷ್ಟ್ರ ನೇಪಾಳದಲ್ಲಿ ಭಾರಿ ಪ್ರವಾಹಕ್ಕೆ 132 ಜನರು ಬಲಿಯಾಗಿದ್ದಾರೆ. ಸುಮಾರು 128 ಜನ ಮಳೆಯ ಅವಾಂತರದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಂಡು ಕೇಳರಿಯದ ಪ್ರವಾಹದ ಹೊಡೆತಕ್ಕೆ 53 ಮಂದಿ ನಾಪತ್ತೆಯಾಗಿದ್ದು, ಸುಮಾರು 998 ಕುಟುಂಬಗಳು ಭೂಕುಸಿತದಿದ ಕಂಗಾಲಾಗಿವೆ. ನಿರಂತರವಾಗಿ ಸುರಿಯುತ್ತಿರುವ ಭೂಮಿ ಇದ್ದಕ್ಕಿದ್ದಂತೆ ಕುಸಿಯುತ್ತಿದೆ. ಅತ್ತ ನದಿಗಳು ತುಂಬಿ ಹರಿಯುತ್ತಿವೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು ಅಕ್ಕ- ಪಕ್ಕದ ಗ್ರಾಮಗಳನ್ನ ಆಹುತಿ ಪಡೆಯುತ್ತಿವೆ.