ETV Bharat / bharat

ಮನೆಯಲ್ಲೇ ಐಸೋಲೇಷನ್​ನಲ್ಲಿರುವ ಸೋಂಕಿತರು ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು - ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಗತ್ಯ ಸೌಲಭ್ಯವನ್ನು ಹೊಂದಿರುವ ಮತ್ತು ಪ್ರಾಥಮಿಕ ಹಂತದ ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಅಥವಾ ಸೊಂಕಿನ ಪೂರ್ವ ಲಕ್ಷಣಗಳಿರುವ ರೋಗಿಗಳು ಹೋಂ ಐಸೋಲೇಷನ್​ನಲ್ಲಿರುವ ಆಯ್ಕೆ ಹೊಂದಿದ್ದಾರೆ. ಅವರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ.

home isolation
home isolation
author img

By

Published : Apr 29, 2020, 12:56 PM IST

ಹೈದರಾಬಾದ್: ಮನೆಯಲ್ಲಿಯೇ ಐಸೋಲೇಷನ್​ನಲ್ಲಿರುವ ಪ್ರಾಥಮಿಕ ಹಂತದ ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಅಥವಾ ಸೊಂಕಿನ ಪೂರ್ವ ಲಕ್ಷಣಗಳಿರುವ ರೋಗಿಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅಗತ್ಯ ಸೌಲಭ್ಯವನ್ನು ಹೊಂದಿರುವ ಮತ್ತು ಪ್ರಾಥಮಿಕ ಹಂತದ ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಅಥವಾ ಸೊಂಕಿನ ಪೂರ್ವ ಲಕ್ಷಣಗಳಿರುವ ರೋಗಿಗಳು ಮನೆಯಲ್ಲೇ ಐಸೋಲೇಷನ್​ನಲ್ಲಿರುವ ಆಯ್ಕೆ ಹೊಂದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮನೆ ಪ್ರತ್ಯೇಕತೆಗೆ (ಹೋಂ ಐಸೋಲೇಷನ್) ಅರ್ಹತೆ:

  • ವೈದ್ಯಕೀಯ ಅಧಿಕಾರಿಯು ವ್ಯಕ್ತಿಗೆ ಪ್ರಾಥಮಿಕ ಹಂತದ ಕೋವಿಡ್-19 ಸೋಂಕು ಅಥವಾ ಸೊಂಕಿನ ಪೂರ್ವ ಲಕ್ಷಣಗಳು ಮಾತ್ರ ಇವೆ ಇಂದು ಸ್ಪಷ್ಟೀಕರಿಸಿರಬೇಕು.
  • ವ್ಯಕ್ತಿಯ ಐಸೋಲೇಷನ್​ಗೆ ಮತ್ತು ಮನೆಯಲ್ಲಿ ಕುಟುಂಬದವರಿಂದ ಕ್ವಾರಂಟೈನ್​ ಆಗಿರಲು ಮತ್ತು ಅಗತ್ಯವಾದ ಸೌಲಭ್ಯವನ್ನು ಹೊಂದಿರಬೇಕು.
  • 24 x 7 ಆರೈಕೆ ನೀಡಲು ಆರೈಕೆ ನೀಡುವವರು ಲಭ್ಯವಿರಬೇಕು. ಆರೈಕೆದಾರ ಮತ್ತು ಆಸ್ಪತ್ರೆಯ ನಡುವೆ ಸಂವಹನ ಸಂಪರ್ಕವಿರಬೇಕು.
  • ಆರೈಕೆ ನೀಡುವವರು ಮತ್ತು ವ್ಯಕ್ತಿಯ ಎಲ್ಲಾ ನಿಕಟ ಸಂಪರ್ಕಿತರು ವೈದ್ಯಕೀಯ ಅಧಿಕಾರಿ ಸೂಚಿಸಿದಂತೆ ಹೈಡ್ರಾಕ್ಸಿಕ್ಲೋರೋಕ್ವಿನ್ ರೋಗನಿರೋಧಕವನ್ನು ತೆಗೆದುಕೊಳ್ಳಬೇಕು.
  • ಮೊಬೈಲ್​ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು ಮತ್ತು ಅದು ಎಲ್ಲಾ ಸಮಯದಲ್ಲೂ ಆ್ಯಕ್ಟಿವ್ ಆಗಿರಬೇಕು.
  • ರೋಗಿಯು ತನ್ನ ಆರೋಗ್ಯದ ಮೇಲ್ವಿಚಾರಣೆಗೆ ಒಪ್ಪಿಕೊಳ್ಳಬೇಕು ಮತ್ತು ನಿಯಮಿತವಾಗಿ ಅವನ ಆರೋಗ್ಯ ಸ್ಥಿತಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ತಿಳಿಸಬೇಕು.
  • ರೋಗಿಯು ಹೋಂ ಐಸೋಲೇಷನ್ ಬಗ್ಗೆ ತನ್ನ ಜವಾಬ್ದಾರಿಯ ಫಾರ್ಮ್ ಭರ್ತಿ ಮಾಡಿ, ಕ್ವಾರಂಟೈನ್​ನ ನಿಯಮಗಳನ್ನು ಪಾಲಿಸಬೇಕು.

ಯಾವಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು?

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು:

  • ಉಸಿರಾಟದಲ್ಲಿ ತೊಂದರೆ
  • ಎದೆಯಲ್ಲಿ ನಿರಂತರ ನೋವು ಅಥವಾ ಒತ್ತಡ
  • ಮಾನಸಿಕ ಗೊಂದಲ ಅಥವಾ ಪ್ರಚೋದಿಸಲು ಅಸಮರ್ಥತೆ
  • ತುಟಿಗಳು ಅಥವಾ ಮುಖ ನೀಲಿ ಬಣ್ಣಕ್ಕೆ ತಿರುಗುವುದು
  • ವೈದ್ಯಕೀಯ ಅಧಿಕಾರಿ ತಿಳಿಸಿದ ಇತರ ಲಕ್ಷಣಗಳು

ವೈದ್ಯಕೀಯ ಚಿಕಿತ್ಸೆಯ ಬಳಿಕ ವೈದ್ಯರು ಸೊಂಕಿತ ವ್ಯಕ್ತಿ ಗುಣಮುಖನಾಗಿದ್ದಾನೆಂದು ಪ್ರಮಾಣೀಕರಿಸಿದ ಬಳಿಕ, ವೈದ್ಯರ ಸಲಹೆ ಮೇರೆಗೆ ವ್ಯಕ್ತಿ ಹೋಂ ಐಸೋಲೇಷನ್​ನಿಂದ ಮುಕ್ತವಾಗಬಹುದು.

ಆರೈಕೆ ನೀಡುವವರಿಗೆ ಸೂಚನೆಗಳು

ಮಾಸ್ಕ್:

  • ಸೋಂಕಿತ ವ್ಯಕ್ತಿಯ ಆರೈಕೆ ಮಾಡುವವರು ಟ್ರಿಪಲ್ ಲೇಯರ್ ವೈದ್ಯಕೀಯ ಮಾಸ್ಕ್ ಧರಿಸಬೇಕು.
  • ಮಾಸ್ಕ್​ನ ಮುಂಭಾಗವನ್ನು ಬಳಕೆಯ ಸಮಯದಲ್ಲಿ ಸ್ಪರ್ಶಿಸಬಾರದು.
  • ಮಾಸ್ಕ್ ಒದ್ದೆಯಾಗಿದ್ದರೆ ಅಥವಾ ಕೊಳಕಾಗಿದ್ದರೆ ತಕ್ಷಣ ಬದಲಾಯಿಸಬೇಕು.
  • ಬಳಕೆಯ ನಂತರ ಸೂಕ್ತ ರೀತಿಯಲ್ಲಿ ಮಾಸ್ಕ್ ವಿಲೇವಾರಿ ಮಾಡಬೇಕು.
  • ಮುಖ, ಮೂಗು ಅಥವಾ ಬಾಯಿಯನ್ನು ಆಗಾಗ ಮುಟ್ಟಬಾರದು.

ಕೈಯ ಸ್ವಚ್ಛತೆ/ನೈರ್ಮಲ್ಯೀಕರಣ:

  • ಸೋಂಕಿತನ ಸಂಪರ್ಕದಲ್ಲಿರುವಾಗ ಕೈಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
  • ಆಹಾರ ತಯಾರಿಸುವ ಮೊದಲು, ತಿನ್ನುವ ಮೊದಲು ಕನಿಷ್ಠ 40 ಸೆಕೆಂಡುಗಳ ಕಾಲ ಆಲ್ಕೋಹಾಲ್ ಆಧಾರಿತ ಹ್ಯಾಂಡ್​ ವಾಶ್ ಅಥವಾ ಸೋಪ್ ಮತ್ತು ನೀರನ್ನು ಬಳಸಿ ಕೈ ತೊಳೆಯಬೇಕು.
  • ಆಗಾಗ ಕೈ ತೊಳೆಯುತ್ತಿದ್ದರೆ ಉತ್ತಮ.

ಸೋಂಕಿತನ ಜೊತೆಯಲ್ಲಿರುವಾಗ:

  • ಸೋಂಕಿತನ ಸಂಪರ್ಕದಲ್ಲಿರುವಾಗ, ಆತನ ಎಂಜಲು ಹಾಗೂ ಗಂಟಲು ದ್ರವ ಸೋಕದಂತೆ ನೊಡಿಕೊಳ್ಳಬೇಕು.
  • ಆತನೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಬೇಕು.
  • ಸೋಂಕಿತನಿಗೆ ಆತನ ಕೋಣೆಯಲ್ಲಿಯೇ ಆಹಾರವನ್ನು ಒದಗಿಸಿ, ಆತ ಬಳಸುವ ಪಾತ್ರೆಗಳನ್ನು ಮತ್ತು ಇತರ ವಸ್ತುಗಳನ್ನು ಗ್ಲೌಸ್ ಹಾಕಿಕೊಂಡೇ ಸೋಪ್ ಅಥವಾ ಡಿಟರ್ಜೆಂಟ್​ನಿಂದ ಸ್ವಚ್ಛಗೊಳಿಸಬೇಕು.
  • ವೈದ್ಯರ ಸೂಚನೆಯಂತೆ ಸೋಂಕಿತನ ಆರೈಕೆ ಮಾಡುತ್ತಿರಬೇಕು ಮತ್ತು ರೋಗ ಲಕ್ಷಣಗಳು ಕಂಡುಬಂದರೆ ಅಥವಾ ಉಲ್ಬಣವಾದರೆ ತಕ್ಷಣ ವೈದ್ಯರಿಗೆ ತಿಳಿಸಬೇಕು.

ಸೋಂಕಿತ ವ್ಯಕ್ತಿಗೆ ಸೂಚನೆಗಳು:

  • ಸೋಂಕಿತ ವ್ಯಕ್ತಿ ಯಾವತ್ತೂ ಟ್ರಿಪಲ್ ಲೇಯರ್ ವೈದ್ಯಕೀಯ ಮಾಸ್ಕ್ ಬಳಸಬೇಕು.
  • 8 ಗಂಟೆಗಳ ಬಳಕೆಯ ನಂತರ ಅಥವಾ ಮುಂಚೆಯೇ ಮಾಸ್ಕ್ ಒದ್ದೆಯಾಗಿದ್ದರೆ ಅಥವಾ ಮಣ್ಣಾಗಿದ್ದರೆ ಮಾಸ್ಕ್ ಬದಲಿಸಬೇಕು.
  • 1% ಸೋಡಿಯಂ ಹೈಪೋ-ಕ್ಲೋರೈಟ್‌ ಬಳಸಿ ಮಾಸ್ಕನ್ನು ಸೋಂಕುನಿವಾರಕಗೊಳಿಸಿದ ನಂತರವೇ ಅದನ್ನು ಬಿಸಾಡಬೇಕು.
  • ಸೋಂಕಿತ ವ್ಯಕ್ತಿ ತನ್ನ ಕೋಣೆಯಲ್ಲಿಯೇ ಇರಬೇಕು ಮತ್ತು ಮನೆಯವರಿಂದ ದೂರವಿರಬೇಕು.
  • ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ನೀರು ಕುಡಿಯಬೇಕು.
  • ಆಲ್ಕೋಹಾಲ್ ಆಧಾರಿತ ಹ್ಯಾಂಡ್​ ವಾಶ್ ಅಥವಾ ಸೋಪ್ ಮತ್ತು ನೀರನ್ನು ಬಳಸಿ ಕನಿಷ್ಠ 40 ಸೆಕೆಂಡುಗಳ ಕಾಲ ಕೈ ತೊಳೆಯಬೇಕು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸಬೇಕು.
  • ವೈಯಕ್ತಿಕ ವಸ್ತುಗಳನ್ನು ಇತರ ಜನರೊಂದಿಗೆ ಹಂಚಿಕೊಳ್ಳಬಾರದು.
  • 1% ಹೈಪೋಕ್ಲೋರೈಟ್ ದ್ರಾವಣದೊಂದಿಗೆ ಆಗಾಗ ಕೋಣೆಯಲ್ಲಿರುವ ವಸ್ತುಗಳನ್ನು ಶುಚಿಗೊಳಿಸಬೇಕು.
  • ವೈದ್ಯರ ಸೂಚನೆಗಳನ್ನು ಪಾಲಿಸಬೇಕು ಮತ್ತ ಔಷಧಿ ಸೇವಿಸಬೇಕು.
  • ದೈಹಿಕ ತಾಪಮಾನವನ್ನು ವೈದ್ಯರಿಗೆ ಪ್ರತಿದಿನ ತಿಳಿಸಬೇಕು.
  • ರೋಗಲಕ್ಷಣ ಕಂಡುಬಂದರೆ ಅಥವಾ ಉಲ್ಬಣಿಸಿದರೆ ತಕ್ಷಣ ವೈದ್ಯರಿಗೆ ತಿಳಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.