ETV Bharat / bharat

ಭಾರತ-ಚೀನಾ ಗಡಿ ಘರ್ಷಣೆ: ಸರ್ವಪಕ್ಷ ಸಭೆ ಕರೆದ ಮೋದಿ ನಿರ್ಧಾರಕ್ಕೆ ಹೆಚ್​ಡಿಡಿ ಮೆಚ್ಚುಗೆ

ಭಾರತ-ಚೀನಾ ನಡುವಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಸರ್ವಪಕ್ಷ ಸಭೆ ಕರೆದಿರುವುದಕ್ಕೆ ಮೆಚ್ಚುಗೆ ಸೂಚಿಸಿ ಮಾಜಿ ಪ್ರಧಾನಿ ಹೆಚ್​.​ಡಿ.ದೇವೇಗೌಡರು ಟ್ವೀಟ್ ಮಾಡಿದ್ದಾರೆ.

author img

By

Published : Jun 19, 2020, 3:44 PM IST

HDD appreciate pm modi
HDD appreciate pm modi

ಬೆಂಗಳೂರು: ಲಡಾಖ್​ನ ಗಾಲ್ವನ್​​​ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಯೋಧರ ನಡುವಿನ ಬಡಿದಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ಕರೆದಿರುವ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡ ಸ್ವಾಗತಿಸಿ ಟ್ವೀಟ್​ ಮಾಡಿದ್ದಾರೆ.

ಕಳೆದ ಸೋಮವಾರ ರಾತ್ರಿ ಉಭಯ ದೇಶದ ಸೈನಿಕರ ನಡುವಿನ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಮುಂದಿನ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರಲ್ಲಿ ಮುಂದಿನ ಕ್ರಮಗಳ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.

  • My statement on the India-China Border issue in the backdrop of the Prime Minister’s meeting with opposition leaders. pic.twitter.com/wYTu4sI6LO

    — H D Devegowda (@H_D_Devegowda) June 19, 2020 " class="align-text-top noRightClick twitterSection" data=" ">

ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಉಭಯ ದೇಶಗಳ ನಡುವೆ ಈಗಾಗಲೇ ಹಲವು ಸುತ್ತುಗಳ ಮಾತುಕತೆ ನಡೆದಿದೆ. ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಘರ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಾಗ ಮಾತ್ರ ವಿಪಕ್ಷಗಳು ತಮ್ಮ ಅಭಿಪ್ರಾಯ ತಿಳಿಸಲು ಸಾಧ್ಯ. ನಮಗೆ ಕೇವಲ ಮಾಧ್ಯಮಗಳ ಮೂಲಕ ವಿಚಾರಗಳು ತಿಳಿಯುತ್ತಿದೆ. ಅದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ ವಿಪಕ್ಷಗಳಲ್ಲೂ ಮನವಿ ಮಾಡಿಕೊಂಡಿರುವ ದೇವೇಗೌಡರು, ಭಾರತ-ಚೀನಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಂಯಮದಿಂದ ವರ್ತಿಸಬೇಕಾದ ಸ್ಥಿತಿಯಿದೆ. ರಾಷ್ಟ್ರೀಯ ಭದ್ರತೆ ಹಿತದೃಷ್ಠಿಯಿಂದ ಸರ್ಕಾರಕ್ಕೆ ನಾವು ಸಹಕಾರ ನೀಡಬೇಕು. ಆದರೆ ಸರ್ಕಾರವನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಭಾರತೀಯ ಸೇನೆಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿರುವುದು ಅಪಾಯಕಾರಿ ಎಂದು ದೇವೇಗೌಡರು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.