ETV Bharat / bharat

ಲಡಾಖ್​ ಗಡಿಯಲ್ಲಿ ಬೆಂಗಳೂರಿನ HAL ತಯಾರಿಸಿದ ಹಗುರ ಯುದ್ಧ ಹೆಲಿಕಾಪ್ಟರ್​ಗಳ ಗಸ್ತು! - ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್

ಭಾರತೀಯ ಭೂ ಸೇನೆ ಹಾಗೂ ವಾಯುಸೇನೆಗೆ 110 ಹಗುರ ಯುದ್ಧ ಹೆಲಿಕಾಪ್ಟರ್​ಗಳ ಅಗತ್ಯವಿದ್ದು, ಈಗಾಗಲೇ 15 ಕಾಪ್ಟರ್​​ಗಳ‌ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿದೆ. ಆರಂಭಿಕ ಹಂತವಾಗಿ ಎರಡು ಎಲ್‌ಸಿಎಎಚ್‌ಗಳನ್ನು ಸೇನೆಗೆ ನೀಡಲಾಗಿದೆ.

Helicopters
ಹೆಲಿಕಾಪ್ಟರ್
author img

By

Published : Aug 12, 2020, 10:34 PM IST

ಬೆಂಗಳೂರು: ಲಡಾಖ್​​​ ಗಡಿ ವ್ಯಾಪ್ತಿಯಲ್ಲಿನ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತಯಾರಿಸಿದ ಎರಡು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್) ಐಎಎಫ್ ಕಾರ್ಯಾಚರಣೆಯ ಬೆಂಬಲವಾಗಿ ಗಸ್ತು ಕಾರ್ಯದಲ್ಲಿ ತೊಡಗಿದ್ದವು.

ಏರ್​ ಸ್ಟಾಫ್ ವೈಸ್ ಚೀಫ್ ಮಾರ್ಷಲ್ ಹರ್ಜಿತ್ ಸಿಂಗ್ ಅರೋರಾ ಅವರು ಎಚ್‌ಎಎಲ್ ನಿರ್ಮಿತ ಹೆಲಿಕಾಪ್ಟರ್​ಗಳ ಕಾರ್ಯಚರಣೆಯಲ್ಲಿ ಪೈಲಟ್​ ವಿಂಗ್ ಅಡ್ಮಿನಿಸ್ಟ್ರೇಟರ್ (ನಿವೃತ್ತ) ಸುಭಾಶ್ ಪಿ ಜಾನ್ ಅವರೊಂದಿಗೆ ಪಾಲ್ಗೊಂಡರು. ಅಸಾಧಾರಣ ತಾಪಮಾನದಲ್ಲಿ ಎಲ್​​ಸಿಎಚ್​ ಪರಿಣಾಮಕಾರಿಯಾಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಏರಿಯಾ ಆಫ್​ ರೆಸ್ಪಾನ್ಸಿಬಿಲಿಟಿ (ಎಒಆರ್) ಮತ್ತು ಎತ್ತರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಎಲ್​ಸಿಎಚ್​ ಒಳಗೊಂಡಿವೆ. ಬದಲಾದ ಹೆಚ್ಚಿನ ಎತ್ತರದಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತು ನಿಖರವಾಗಿ ತಲುಪಿಸುವ ಸಾಮರ್ಥ್ಯ ಇದಕ್ಕಿದೆ. ಈ ಗುಣಲಕ್ಷಣಗಳು ಉಷ್ಣ ಮತ್ತು ಅತ್ಯಂತ ಎತ್ತರದ ಕಾರ್ಯಚರಣೆಗೆ ಸೂಕ್ತವಾಗಿದೆ.

ಭಾರತೀಯ ಭೂ ಸೇನೆ ಹಾಗೂ ವಾಯುಸೇನೆಗೆ 110 ಎಲ್‌ಸಿಎಚ್‌ಗಳ ಅಗತ್ಯವಿದ್ದು, ಈಗಾಗಲೇ 15 ಎಲ್‌ಸಿಎಚ್‌ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿದೆ. ಆರಂಭಿಕ ಹಂತವಾಗಿ ಎರಡು ಎಲ್‌ಸಿಎಎಚ್‌ಗಳನ್ನು ಸೇನೆಗೆ ನೀಡಲಾಗಿದೆ.

ಭಾರತೀಯ ಸಶಸ್ತ್ರ ಪಡೆಗಳ ನಿರ್ದಿಷ್ಟ ಮತ್ತು ವಿಶಿಷ್ಟ ಅವಶ್ಯಕತೆಗಳನ್ನು ಪೂರೈಸಲು ಎಚ್‌ಎಎಲ್ ವಿನ್ಯಾಸಗೊಳಿಸಿದೆ. ವಿಶ್ವದ ಹಗುರವಾದ ದಾಳಿ ಹೆಲಿಕಾಪ್ಟರ್ ಆಗಿದ್ದು, ಆ ಮೂಲಕ ಆತ್ಮನಿರ್ಭ‘ರ ಭಾರತನಲ್ಲಿ ಎಚ್‌ಎಎಲ್‌ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಎಚ್‌ಎಎಲ್‌ನ ಸಿಎಂಡಿ ಆರ್ ಮಾಧವನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.