ಇಸ್ಲಾಮಾಬಾದ್: ಪಾಕಿಸ್ತಾನದ ಗುಜ್ರನ್ವಾಲಾ ಕೋರ್ಟ್ 26/11 ರ ಮುಂಬೈ ಅಟ್ಯಾಕ್ನ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ತಪ್ಪಿತಸ್ಥ ಎಂದು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣವನ್ನ ಪಾಕಿಸ್ತಾನದಲ್ಲಿರುವ ಗುಜರಾತ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಜುಲೈ 17 ರಂದು ಪಾಕಿಸ್ತಾನದ ಪೊಲೀಸರು ಭಯೋತ್ಪಾದಕರಿಗೆ ಹಣಕಾಸು ಪೂರೈಸಿದ ಆರೋಪದ ಮೇಲೆ ಹಫೀಜ್ ಸಯೀದ್ನನ್ನು ಬಂಧಿಸಿ 7 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆ ಬಳಿಕ ಬಂಧನದ ಅವಧಿಯನ್ನ 14 ದಿನಗಳಿಗೆ ವಿಸ್ತರಿಸಲಾಗುತ್ತು.
ಈ ಸಂಬಂಧ ವಿಚಾರಣೆ ನಡೆಸಿದ್ದ ಗುಜ್ರನ್ವಾಲಾ ಕೋರ್ಟ್ ಕೌಂಟರ್ ಟೆರರಿಸಂ ಡಿಪಾರ್ಟ್ಮೆಂಟ್( ಸಿಟಿಡಿ) ಗೆ ಆಗಸ್ಟ್ 7ರ ಒಳಗೆ ಪ್ರಕರಣದ ಸಂಪೂರ್ಣ ಚಾರ್ಜ್ಶೀಟ್ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು ಎಂದು ಖಾಸಗಿ ನ್ಯೂಸ್ ವರದಿ ಮಾಡಿದೆ. ಜುಲೈ 3ರಂದು ಜಮಾತ್ ಉದ್ ದವಾದ 13 ಲೀಡರ್ಗಳನ್ನ ಪಾಕಿಸ್ತಾನ ಬ್ಯಾನ್ ಮಾಡಿತ್ತು.