ETV Bharat / bharat

ಕೋವಿಡ್-19 ವಿರುದ್ಧ ಹೋರಾಡಲು 'ನಾನೂ ಕೊರೊನಾ ಯೋಧ' ಅಭಿಯಾನ ಆರಂಭಿಸಿದ ಗುಜರಾತ್​​ ಸರ್ಕಾರ

ಜನರಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಕುರಿತು ಜಾಗೃತಿ ಮೂಡಿಸಲು ಗುಜರಾತ್ ಸರ್ಕಾರ 'ನಾನೂ ಕೊರೊನಾ ಯೋಧ' ಎಂಬ ಅಭಿಯಾನ ಪ್ರಾರಂಭಿಸಿದೆ.

gujarat gvt
gujarat gvt
author img

By

Published : May 23, 2020, 12:00 PM IST

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸರ್ಕಾರ ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು 'ನಾನೂ ಕೊರೊನಾ ಯೋಧ' ಎಂಬ ಅಭಿಯಾನವನ್ನು ಘೋಷಿಸಿದೆ.

ವಿಜಯ್ ರೂಪಾನಿ ಫೇಸ್‌ಬುಕ್ ಲೈವ್ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಮೇ 21ರಿಂದ ಮೇ 27ರವರೆಗೆ ಈ ಅಭಿಯಾನ ನಡೆಯಲಿದೆ.

"ಕೊರೊನಾ ಸೋಂಕಿನ ವಿರುದ್ಧ ಎಲ್ಲರೂ ಒಗ್ಗೂಡಬೇಕು. ಇದನ್ನು ಜನರ ಯುದ್ಧವನ್ನಾಗಿ ಮಾಡಲು ಗುಜರಾತ್ ಜನರ ಸುರಕ್ಷತೆಗಾಗಿ 'ನಾನೂ ಕೊರೊನಾ ಯೋಧ' ಎಂಬ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ." ಎಂದು ಗುಜರಾತ್ ಸಿಎಂ ಹೇಳಿದರು.

ಈ ಸಂದರ್ಭದಲ್ಲಿ ಮೂರು ಪ್ರತಿಜ್ಞೆ ಕೈಗೊಳ್ಳುವಂತೆ ಅವರು ತಿಳಿಸಿದರು. ಅವುಗಳೆಂದರೆ:

  • ಎಲ್ಲಾ ವೃದ್ಧರು ಮತ್ತು ಮಕ್ಕಳು ಮನೆಯೊಳಗೆ ಇರುವಂತೆ ನೋಡಿಕೊಳ್ಳಿ.
  • ತುರ್ತು ಕಾರಣಗಳಿಲ್ಲದೆ ಮತ್ತು ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಹೋಗಬಾರದು.
  • ಸಾಮಜಿಕ ಅಂತರ ಕಾಯ್ದುಕೊಳ್ಳಿ.

ಗುಜರಾತ್​ನಲ್ಲಿ 13,273 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ 802ಕ್ಕೆ ತಲುಪಿದ್ದು, 5,880 ಮಂದಿ ಚೇತರಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.