ನವದೆಹಲಿ : ಕೊರೊನಾ ವಿರುದ್ಧದ 'ಯೋಜಿತ ಹೋರಾಟ' ಭಾರತದ ಜಿಡಿಪಿ ಶೇ.24ರಷ್ಟು ಕುಸಿತ, 12 ಕೋಟಿ ಉದ್ಯೋಗ ನಷ್ಟ, 15.5 ಲಕ್ಷ ಕೋಟಿ ಹೆಚ್ಚುವರಿ ಒತ್ತಡದ ಸಾಲಗಳು ಮತ್ತು ಜಾಗತಿಕವಾಗಿ ಅತಿ ಹೆಚ್ಚು ದೈನಂದಿನ ಕೋವಿಡ್-19 ಪ್ರಕರಣ ಮತ್ತು ಸಾವುಗಳನ್ನು ಸೃಷ್ಟಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಪೃರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಮೋದಿ ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಈ ಹಿಂದೆ ಇಂತಹ ಎಲ್ಲ ಆರೋಪಗಳನ್ನು ಕೆಂದ್ರ ಸರ್ಕಾರ ತಳ್ಳಿ ಹಾಕಿದೆ.
'ಕೋವಿಡ್ ವಿರುದ್ಧ ಮೋದಿ ಸರ್ಕಾರದ ಯೋಜಿತ ಹೋರಾಟವು ಭಾರತವನ್ನು ಪ್ರಪಾತಕ್ಕೆ ತಳ್ಳಿದೆ: ಐತಿಹಾಸಿಕ ಜಿಡಿಪಿ -24ರಷ್ಟು ಕಡಿತ, 12 ಕೋಟಿ ಉದ್ಯೋಗ ನಷ್ಟ, 15.5 ಲಕ್ಷ ಕೋಟಿ ಹೆಚ್ಚುವರಿ ಒತ್ತಡದ ಸಾಲಗಳು ಮತ್ತು ಜಾಗತಿಕವಾಗಿ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣ ಮತ್ತು ಸಾವುಗಳು ವರದಿಯಾಗುತ್ತಿವೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ
ಆದರೆ, ಭಾರತ ಸರ್ಕಾರ ಮತ್ತು ಮಾಧ್ಯಮಗಳಿಗೆ ಎಲ್ಲವೂ ಚೆನ್ನಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು 46 ಲಕ್ಷ ದಾಟಿವೆ. ಆದರೆ, 36,24,196 ಜನರು ಚೇತರಿಸಿಕೊಂಡಿದ್ದಾರೆ, ರಾಷ್ಟ್ರೀಯ ಚೇತರಿಕೆ ದರ 77.77 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.