ನವದೆಹಲಿ: ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 1 ಕೀರ್ತಿ ಚಕ್ರ ಹಾಗೂ 9 ಶೌರ್ಯ ಚಕ್ರ ಪ್ರಶಸ್ತಿ ಘೋಷಣೆ ಮಾಡಿದೆ.
ಜಮ್ಮು-ಕಾಶ್ಮಿರದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ರಶೀದ್ ಕಲಾಸ್ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಘೋಷಣೆ ಮಾಡಲಾಗಿದ್ದು, ಇದರ ಜತೆಗೆ ಒಂಬತ್ತು ಭದ್ರತಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಶೌರ್ಯ ಪ್ರಶಸ್ತಿ ಪಡೆದವರು
ಲೆಫ್ಟಿನೆಂಟ್ ಕರ್ನಲ್ ಕ್ರಿಶನ್ ಸಿಂಗ್ ರಾವತ್, ಮೇಜರ್ ಅನಿಲ್ ಉರ್ಸ್, ಹವಲ್ದಾರ್ ಅಲೋಕ್ ಕುಮಾರ್ ದುಬೆ, ವಿಂಗ್ ಕಮಾಂಡೀರ್ ವಿಶಾಕ್ ನಾಯರ್, ಜೆಕೆಪಿಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಅಮಿತ್ ಕುಮಾರ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಬ್ ಇನ್ಸ್‌ಪೆಕ್ಟರ್ ಮಹಾವೀರ್ ಪ್ರಸಾದ್ ಗೋದಾರ್ (ಮರಣೋತ್ತರ); ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಎರನ್ನಾ ನಾಯಕ (ಮರಣೋತ್ತರ); ಸಿಐಎಸ್ಎಫ್ ಕಾನ್ಸ್ಟೇಬಲ್ ಮಹೇಂದ್ರ ಕುಮಾರ್ ಪಾಸ್ವಾನ್ (ಮರಣೋತ್ತರ), ಸಿಐಎಸ್ಎಫ್ ಕಾನ್ಸ್ಟೇಬಲ್ ಸತೀಶ್ ಪ್ರಸಾದ್ ಕುಶ್ವಾಹ್ (ಮರಣೋತ್ತರ) ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಇದರ ಜತೆಗೆ ಪೊಲೀಸ್ ಹಾಗೂ ಸೇನಾ ಪಡೆಗಳಿಗೆ ಕೇಂದ್ರ ಸರ್ಕಾರ 926 ಶೌರ್ಯ ಪದಕ ಪ್ರಕಟಿಸಿದೆ. ಇದರ ಜತೆಗೆ 60 ಸೇನಾ ಪದಕ ಘೋಷಣೆ ಮಾಡಲಾಗಿದೆ.