ETV Bharat / bharat

ಕನಿಷ್ಠ ಬೆಂಬಲ ಬೆಲೆ ನೀಡಿ 43 ಲಕ್ಷ ಮೆಟ್ರಿಕ್​​ ಟನ್​ ಭತ್ತ ಖರೀದಿ ಮಾಡಲಿರುವ ಕೇಂದ್ರ!

ಕನಿಷ್ಠ ಬೆಂಬಲ ಬೆಲೆಯಲ್ಲಿ ನೀಡಿ ಕೇಂದ್ರ ಸರ್ಕಾರ 43 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಲು ನಿರ್ಧರಿಸಿದೆ.

Kharif paddy
Kharif paddy
author img

By

Published : Oct 12, 2020, 10:45 PM IST

ನವದೆಹಲಿ: ಹೊಸ ಕೃಷಿ ಮಸೂದೆಗಳಿಗೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಇದರಿಂದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿ ಬರೋಬ್ಬರಿ 43 ಲಕ್ಷ ಮೆಟ್ರಿಕ್​​ ಟನ್​​ ಭತ್ತ ಖರೀದಿ ಮಾಡಲು ಮುಂದಾಗಿದೆ.

ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬರೋಬ್ಬರಿ 3.57 ಲಕ್ಷ ರೈತರಿಂದ ಇಷ್ಟೊಂದು ಪ್ರಮಾಣದ ಭತ್ತ ಖರೀದಿ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ. ಇದಕ್ಕಾಗಿ 8032.62 ಕೋಟಿ ರೂ ವೆಚ್ಚ ಮಾಡಲಿದೆ ಎಂದಿದೆ.

ಪ್ರಮುಖವಾಗಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್​, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಇದರಲ್ಲಿ ಸೇರಿಕೊಂಡಿವೆ. ಇದರ ಜತೆಗೆ ಬೇಳೆಕಾಳು, ಎಣ್ಣೆಕಾಳು ಖರೀದಿ ಮಾಡಲು ಕೇಂದ್ರಾಡಳಿತ ಪ್ರದೇಶ ಹಾಗೂ ಇತರೆ ರಾಜ್ಯಗಳಿಂದ ಪ್ರಸ್ತಾಪ ಪಡೆದ ಮೇಲೆ ಅನುಮತಿ ನೀಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.