ಪಣಜಿ(ಗೋವಾ): ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಗೋವಾ ಬೀಚ್ಗೆ ಆಗಮಿಸುವ ಪ್ರವಾಸಿಗರು ನೀರಿನಲ್ಲಿ ಮುಳುಗದಂತೆ ಕಾಪಾಡಲು ಹೊಸ ಪ್ರೋಟೋಕಾಲ್ ರೂಪಿಸಿದ್ದಾರೆ. ಯಾಕೆಂದರೆ, ಈ ಹಿಂದೆ ನೀರಿನಲ್ಲಿ ಮುಳುಗಿದ ವ್ಯಕ್ತಿಗಳಿಗೆ ಬಾಯಿಯ ಮೂಲಕ ಆಮ್ಲಜನಕ ಪೂರೈಸಿ ಜೀವ ಉಳಿಸುವ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಇದೀಗ ಕೊರೊನಾ ಹಿನ್ನೆಲೆ ಅದು ಅಸಾಧ್ಯ.
"ಹೊಸ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (new cardiopulmonary resuscitation) ಎಂಬ ಪ್ರೋಟೋಕಾಲ್ ಆಗಿ ಬದಲಾಗಿದೆ. ಇದು ಕೈಯ ಮೂಲಕ ಜೀವ ಉಳಿಸುವ ಕಾರ್ಯ ಮಾಡುತ್ತದೆ " ಎಂದು ಖಾಸಗಿ ಜೀವರಕ್ಷಕ ಏಜೆನ್ಸಿ ದೃಷ್ಟಿ ಮರೀನ್ನ ಕಾರ್ಯಾಚರಣೆಯ ಮುಖ್ಯಸ್ಥ ರವಿಶಂಕರ್ ಹೇಳಿದ್ದಾರೆ.
"ಸಾಮಾನ್ಯವಾಗಿ ಬಾಯಿಯಿಂದ ಬಾಯಿಗೆ ಶ್ವಾಸ ನೀಡಿ ಜೀವ ಉಳಿಸುವ ಕಾರ್ಯ ಮಾಡಲಾಗುತ್ತದೆ. ಆದರೆ, ಇದರ ಮೂಲಕ ಜೀವ ಉಳಿಸುವ ಕಾರ್ಯ ಮಾಡಬಹುದು. ಇದು ತನ್ನಷ್ಷಕ್ಕೆ ಉಬ್ಬಿಕೊಳ್ಳುವ ಮೂಲಕ ಮನುಷ್ಯನಿಗೆ ಗಾಳಿ ಪೂರೈಸುತ್ತದೆ. ಈ ಪ್ರಕ್ರಿಯೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಬಹುದು" ಎಂದು ಶಂಕರ್ ಹೇಳಿದರು.
"ಪಾರುಗಾಣಿಕಾ ಕೆಲಸದಲ್ಲಿ ಅನಿವಾರ್ಯವಾಗಿ ದೈಹಿಕ ಸಂಪರ್ಕ ಒಳಗೊಂಡಿರುತ್ತದೆ. ಆದರೆ, ಹೊಸ ಪ್ರೋಟೋಕಾಲ್ ಅದನ್ನು ಗಮನಾರ್ಹವಾಗಿ ನಿಗ್ರಹಿಸುತ್ತದೆ. ಜೀವರಕ್ಷಕರ ಮತ್ತು ರಕ್ಷಿಸಲ್ಪಟ್ಟ ವ್ಯಕ್ತಿಗಳ ಸುರಕ್ಷತೆಗೆ ಇದು ಮುಖ್ಯವಾಗಿದೆ" ಎಂದು ಹೇಳಿದರು.