ETV Bharat / bharat

ಭ್ರಷ್ಟಾಚಾರ ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಿದೆ: ಸೋನಿಯಾ ಹೇಳಿಕೆಗೆ ಮೋದಿ ಪ್ರತ್ಯುತ್ತರ!

ಕಳೆದ ದಶಕಗಳಲ್ಲಿ ಒಂದು ಪೀಳಿಗೆಯನ್ನು ಭ್ರಷ್ಟಾಚಾರದ ತಪ್ಪಿಗೆ ಶಿಕ್ಷಿಸದಿದ್ದಾಗ ಇತರರು ಹೆಚ್ಚಿನ ಶಕ್ತಿಯೊಂದಿಗೆ ಭ್ರಷ್ಟಾಚಾರ ಮಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಈ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಇದು ರಾಜಕೀಯ ಸಂಪ್ರದಾಯದ ಭಾಗವಾಯಿತು. ಪೀಳಿಗೆಯಿಂದ ಪೀಳಿಗೆಗೆ ಭ್ರಷ್ಟಾಚಾರದ ಈ ರಾಜವಂಶವು ದೇಶವನ್ನು ಟೊಳ್ಳಾಗಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು..

author img

By

Published : Oct 27, 2020, 9:35 PM IST

Sonia Gandhi
ಮೋದಿ

ನವದೆಹಲಿ: ಭಾರತದ ಪ್ರಜಾಪ್ರಭುತ್ವವು ಅಡ್ಡ ದಾರಿಯಲ್ಲಿದೆ ಮತ್ತು ಅದರ ವ್ಯವಸ್ಥೆಯ ಸ್ತಂಭಗಳು ಆಕ್ರಮಣಕ್ಕೊಳಗಾಗುತ್ತಿವೆ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿಕೆ ನೀಡಿದ ಒಂದು ದಿನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಭ್ರಷ್ಟಾಚಾರ ರಾಜವಂಶದಲ್ಲಿ (ಅದು ಹಾದುಹೋಗಿದೆ) ಪೀಳಿಗೆಯಿಂದ ಪೀಳಿಗೆಗೆ ಸಾಗಿಬರುತ್ತಿದೆ. ರಾಜಕೀಯ ಸಂಪ್ರದಾಯದ ಭಾಗವಾಯಿತು, ದೇಶವನ್ನು ಟೊಳ್ಳು ಮಾಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ವಿಡಿಯೋ ಲಿಂಕ್ ಮೂಲಕ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಡೀ ತಲೆಮಾರು ಭ್ರಷ್ಟಾಚಾರದ ನಿರ್ಭಯದಿಂದ ವರ್ತಿಸಿ ಯಾವುದೇ ಶಿಕ್ಷೆ ಅನುಭವಿಸಲಿಲ್ಲ ಎಂದು ಹೇಳಿದರು.

ಕಳೆದ ದಶಕಗಳಲ್ಲಿ ಒಂದು ಪೀಳಿಗೆಯನ್ನು ಭ್ರಷ್ಟಾಚಾರದ ತಪ್ಪಿಗೆ ಶಿಕ್ಷಿಸದಿದ್ದಾಗ ಇತರರು ಹೆಚ್ಚಿನ ಶಕ್ತಿಯೊಂದಿಗೆ ಭ್ರಷ್ಟಾಚಾರ ಮಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಈ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಇದು ರಾಜಕೀಯ ಸಂಪ್ರದಾಯದ ಭಾಗವಾಯಿತು. ಪೀಳಿಗೆಯಿಂದ ಪೀಳಿಗೆಗೆ ಭ್ರಷ್ಟಾಚಾರದ ಈ ರಾಜವಂಶವು ದೇಶವನ್ನು ಟೊಳ್ಳಾಗಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಇಂದು ಸರ್ಕಾರದ ಮೇಲೆ ನಾಗರಿಕರ ನಂಬಿಕೆ ಹೆಚ್ಚಾಗಿದೆ. ಸರ್ಕಾರದ ಅನಗತ್ಯ ಒತ್ತಡವನ್ನು ಕಡಿಮೆ ಮಾಡಲು ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ನಾಗರಿಕರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.