ETV Bharat / bharat

ಚಂಪಾರಣ್​ನಲ್ಲಿ 'ಅಹಿಂಸಾ ದೇವಿ'ಯೊಂದಿಗೆ ಗಾಂಧಿ ಮುಖಾಮುಖಿ

1917ರಲ್ಲಿ ನಡೆದ ಚಂಪಾರಣ್​ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಹೋರಾಟದ ಗತಿಯನ್ನೇ ಬದಲಾಯಿಸಿತು. ಅಲ್ಲಿ ಮಹಾತ್ಮಾ ಗಾಂಧೀಜಿ 'ಅಹಿಂಸಾ ದೇವಿ'ಯೊಂದಿಗೆ ಮುಖಾಮುಖಿಯಾದರು. ಇದಾದ ಬಳಿಕ ಗಾಂಧೀಜಿಯವರ ಚಿಂತನೆ ಮತ್ತು ಕಾರ್ಯಗಳಲ್ಲಿ ಸತ್ಯ ಮತ್ತು ಅಹಿಂಸೆಯೇ ಅಡಕವಾಗಿದೆ ಎಂಬುವುದು ಸ್ಪಷ್ಟವಾಯಿತು. ಆದರೆ ಗಾಂಧೀಜಿಯವರ ತೀವ್ರ ಅಹಿಂಸಾ ತತ್ವವನ್ನು ಲಾಲಾ ಲಜಪತ್ ರಾಯ್ ಸೇರಿದಂತೆ ಹಲವರು ಒಪ್ಪಿರಲಿಲ್ಲ. ಅವರಿಗೆ ಗಾಂಧೀಜಿ ಸೂಕ್ತ ಉತ್ತರ ನೀಡಿದ್ದರು.

gandhi
author img

By

Published : Sep 22, 2019, 5:01 AM IST

ಅದು ಏಪ್ರಿಲ್ 1917. ಚಂಪಾರಣ್​ನಲ್ಲಿ ಸತ್ಯ ಹಾಗೂ ಅಹಿಂಸೆಯ ಪ್ರಯೋಗ ನಡೆಯುತ್ತದೆ. ಅದರ ನಾಯಕನೇ ಮೋಹನದಾಸ ಕರಮಚಂದ ಗಾಂಧಿ. ಅಂಥದ್ದೇ ಪ್ರಯೋಗವನ್ನು ಅವರು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿಯೂ ನಡೆಸಿ, ಯಶ ಕಂಡಿದ್ದರು. ಈ ಪ್ರಯೋಗ ಅವರಿಗೆ ಭಾರತದಲ್ಲಿ ಹೊಸ ಗುರುತನ್ನೇ ನೀಡಿತು. ಬಹುಶಃ ಅದಕ್ಕಾಗಿಯೇ ಚಂಪಾರಣ್​ನ ರೈತ ರಾಜ್​ಕುಮಾರ್​ ಶುಕ್ಲಾ ಅವರು ಗಾಂಧೀಜಿ ಅವರಿಗೆ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು. 1917ರ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಗಾಂಧೀಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ನಾಯಕತ್ವದ ಮುಂಚೂಣಿಯಲ್ಲಿರಲಿಲ್ಲ. ಆದರೂ ರಾಜ್​ಕುಮಾರ್​ ಅವರಿಗೆ ಗಾಂಧೀಜಿ ಮೇಲೆ ಅಪಾರ ವಿಶ್ವಾಸವಿತ್ತು. ಚಂಪಾರಣ್ ಕುರಿತು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಅವರು ಚಂಪಾರಣ್​ನಲ್ಲಿ 'ಅಹಿಂಸಾ ದೇವಿ'ಯೊಂದಿಗೆ ಮುಖಾಮುಖಿಯಾಗಿದ್ದೇನೆಂದು ಹೇಳಿದ್ದಾರೆ. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಭಾರತವು ಪ್ರಪ್ರಥಮ ಬಾರಿಗೆ ಇಲ್ಲಿ ಸತ್ಯಾಗ್ರಹಕ್ಕೆ ಸಾಕ್ಷಿಯಾಯಿತು. 1917ರಲ್ಲಿ ನಡೆದ ಚಂಪಾರಣ್​ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಹೋರಾಟದ ಗತಿಯನ್ನೇ ಬದಲಾಯಿಸಿತು. ಇದಾದ ಬಳಿಕ ರಾಷ್ಟ್ರೀಯ ಹೋರಾಟ ಹಾಗೂ ಕಾಂಗ್ರೆಸ್​ನಲ್ಲಿ ಮಹಾತ್ಮಾ ಗಾಂಧೀಜಿ ಕೇಂದ್ರ ಸ್ಥಾನವನ್ನೇ ಪಡೆದರು.

ರಾಜ್​ಕುಮಾರ್​ ಶುಕ್ಲಾ ಆಹ್ವಾನದ ಮೇರೆಗೆ ಚಂಪಾರಣ್​ಗೆ ತೆರಳುತ್ತಿದ್ದ ಗಾಂಧೀಜಿಗೆ, ತಾನು ಅಲ್ಲಿ ಸತ್ಯಾಗ್ರಹ ಪ್ರಾರಂಭಿಸುತ್ತೇನೆ, ಹಲವು ದಿನಗಳ ಕಾಲ ಅಲ್ಲೇ ವಾಸ್ತವ್ಯ ಹೂಡುತ್ತೇನೆ, ಶಿಕ್ಷಣಕ್ಕೆ ಹೊಸ ಪರಿಕಲ್ಪನೆಯನ್ನು ನೀಡುತ್ತೇನೆ, ಕಸ್ತೂರ್ಬಾ ಗಾಂಧಿ, ರಾಜೇಂದ್ರ ಪ್ರಸಾದ್ ಹಾಗೂ ಇತರ ನಾಯಕರನ್ನು ಕೂಡಾ ಅಲ್ಲಿಗೆ ಕರೆಸಿಕೊಳ್ಳುತ್ತೇನೆ, ಚಂಪರಣ್ ಸತ್ಯಾಗ್ರಹವು ಭವಿಷ್ಯಕ್ಕೆ ಹೊಸ ಬುನಾದಿಯನ್ನು ಹಾಕಿ ಕೊಡುತ್ತದೆ ಎಂಬ ಕುರಿತು ಕಲ್ಪನೆಯೇ ಇರಲಿಲ್ಲ.

ದಕ್ಷಿಣ ಆಫ್ರಿಕಾದ ಸತ್ಯಾಗ್ರಹದ ಬಳಿಕ ಮೋಹನದಾಸ ಕರಮಚಂದ ಗಾಂಧೀಜಿಯವರ ಚಿಂತನೆ ಮತ್ತು ಕಾರ್ಯಗಳಲ್ಲಿ ಸತ್ಯ ಮತ್ತು ಅಹಿಂಸೆಯೇ ಅಡಕವಾಗಿದೆ ಎಂಬುವುದು ಸ್ಪಷ್ಟವಾಯಿತು. ಗಾಂಧೀಜಿಯ ಪ್ರಕಾರ, ಅಹಿಂಸೆ ಸತ್ಯಾಗ್ರಹದಲ್ಲಿ ಅತಿ ದೊಡ್ಡ ಸವಾಲಾಗಿದೆ. ಹಾಗಾಗಿ ಈ ಕುರಿತು ಹಲವಾರು ಚರ್ಚೆ ಹಾಗೂ ಮಾತುಕತೆಗಳು ನಡೆಯುತ್ತಿದ್ದವು.

gandhi
ಭಾರತದ ಸ್ವಾತಂತ್ರ್ಯ ಹೋರಾಟದ ಗತಿಯನ್ನೇ ಬದಲಾಯಿಸಿದ ಚಂಪಾರಣ್​ ಸತ್ಯಾಗ್ರಹ

ವ್ಯತಿರಿಕ್ತ ದೃಷ್ಟಿಕೋನಗಳನ್ನು ಹೊಂದಿರುವವರು ಅಹಿಂಸಾ ತತ್ವವನ್ನು ಒಪ್ಪುವುದಿಲ್ಲ. ಬಲಪಂಥೀಯ ಮತ್ತು ಎಡಪಂಥೀಯರು ಕೂಡಾ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಕೂಡ ಅಹಿಂಸಾ ಪರಿಕಲ್ಪನೆಯ ಕುರಿತು ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು. ಅಹಿಂಸಾ ಕುರಿತು ಲಾಲಾ ಲಜಪತ್ ರಾಯ್​ ಮತ್ತು ಮಹಾತ್ಮ ಗಾಂಧಿಯವರ ಸಂಭಾಷಣೆಯು ಅದ್ಭುತ ಚರ್ಚೆಗೆ ಒಳಪಟ್ಟಿದೆ. ಕಲ್ಕತ್ತಾ ಮೂಲದ ಮಾಸಿಕವಾದ 'ಮಾಡರ್ನ್ ರಿವ್ಯೂ'ನ ಜುಲೈ 1916ರ ಸಂಚಿಕೆಯಲ್ಲಿ, ಲಾಲಾ ಲಜಪತ್ ರಾಯ್ ಮಹಾತ್ಮರ 'ಅಹಿಂಸಾ ಪರಮೋ ಧರ್ಮಃ (ಅಹಿಂಸೆಯೇ ಸರ್ವೋಚ್ಚ ಧರ್ಮ)ವನ್ನು ಪ್ರಶ್ನಿಸಿದ್ದರು. "ನನ್ನ ಹೃದಯದಲ್ಲಿ ಶ್ರೀ ಗಾಂಧಿಯವರ ವ್ಯಕ್ತಿತ್ವದ ಬಗ್ಗೆ ಅಪಾರ ಗೌರವವಿದೆ. ಅವರ ಸತ್ಯದಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಅವರ ಉದಾತ್ತ ಉದ್ದೇಶಗಳನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಅವರ ಅಹಿಂಸಾ ತತ್ವವನ್ನು ವಿರೋಧಿಸುವುದು ಮತ್ತು ಖಂಡಿಸುವುದು ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ" ಎಂದು ಬರೆದಿದ್ದರು.

ಅಹಿಂಸೆಯ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ಲಾಲಾ ಲಜಪತ್ ರಾಯ್​ ಹೇಳಿದ್ದರು. ಅಹಿಂಸೆಯು ವ್ಯಕ್ತಿಯನ್ನು ಹೇಡಿಯಾಗಿಸಬಹುದು ಮತ್ತು ಇತರರು ದುರುಪಯೋಗ ಮಾಡಿಕೊಳ್ಳಬಹುದು. ಅಹಿಂಸೆಯು ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲನಾಗಿಸುತ್ತದೆ ಎಂದು ಅವರು ಹೇಳಿದ್ದರು. ಅಹಿಂಸೆಯನ್ನು ಪರಮೋಚ್ಛ ಸ್ಥಾನದಲ್ಲಿ ಇರಿಸಿಕೊಂಡರೆ, ಭಾರತದ ಗೌರವ, ಧೈರ್ಯ ಮತ್ತು ಶೌರ್ಯ ಅಳಿಸಿ ಹೋಗುತ್ತದೆ. ಸ್ವಾಭಿಮಾನ ಮತ್ತು ಪರಿಶುದ್ಧತೆಯನ್ನು ಕೀಳಾಗಿ ಕಾಣಲಾಗುತ್ತದೆ. ರಾಷ್ಟ್ರೀಯತೆಯ ವಿಚಾರದಲ್ಲೂ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಲಜಪತ್ ರಾಯ್​ ಹೇಳಿದ್ದರು.

'ಮಾಡರ್ನ್ ರಿವ್ಯೂ'ನ ಅಕ್ಟೋಬರ್ 1916ರ ಸಂಚಿಕೆಯಲ್ಲಿ, ಲಾಲಾ ಅವರ ವಿಮರ್ಶೆಗೆ ಗಾಂಧೀಜಿ ಪ್ರತಿಕ್ರಿಯಿಸಿದ್ದರು. ನಾನು ಹಾಗೂ ಲಾಲಾ ಜಿ ಪರಸ್ಪರರ ಕುರಿತು ಗೌರವ ಹೊಂದಿದ್ದೇವೆ ಎಂದು ಗಾಂಧಿ ಬರೆದಿದ್ದರು. ಆದರೆ ತೀವ್ರ ಅಹಿಂಸೆಯ ತತ್ವವೇ ಭಾರತದ ಪತನ ಮತ್ತು ಅವನತಿಗೆ ಕಾರಣವಾಗಿದೆ ಎಂದು ಲಾಲಾ ಜಿ ಹೇಳಿದ್ದನ್ನು ಬಾಪೂ ಒಪ್ಪಲಿಲ್ಲ.

gandhi
ಗಾಂಧೀಜಿಯವರ ಚಿಂತನೆ ಮತ್ತು ಕಾರ್ಯಗಳಲ್ಲಿ ಸತ್ಯ ಮತ್ತು ಅಹಿಂಸೆ ಅಡಕವಾಗಿದೆ

1936 ರಲ್ಲಿ ಕವಿ ಸೂರ್ಯಕಾಂತ್ ತ್ರಿಪಾಠಿ ನಿರಾಲಾ ಅವರ ಮಹಾಕಾವ್ಯ 'ರಾಮ್ ಕಿ ಶಕ್ತಿ - ಪೂಜಾ' ಪ್ರಕಟವಾಯಿತು. ಅನ್ಯಾಯಿಗಳ ಕೈಯಲ್ಲಿರುವ ಅಧಿಕಾರವು ಭ್ರಷ್ಟ ಸಾಧನವಾಗಿದೆ ಎಂದು ನಿರಾಲಾ ಬರೆದಿದ್ದಾರೆ. ಹಿಂಸಾಚಾರವು ಅನ್ಯಾಯದ ಮತ್ತು ಕ್ರೂರತೆಯ ಸಂರಕ್ಷಣೆಗಾಗಿ ಇದೆ ಎಂದು ಮಹಾನ್​ ಕವಿ ಹೇಳಿದ್ದಾರೆ. ನಿರಾಲಾ ಅವರ ದೃಷ್ಠಿಯಲ್ಲಿ ಅಹಿಂಸೆಯೇ ದೊಡ್ಡ ಶಕ್ತಿ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರು ಅಹಿಂಸೆಯ ಶಕ್ತಿಯನ್ನು ಕಲ್ಪಿಸಿಕೊಂಡು, ಸತ್ಯಾಗ್ರಹದ ಆಯುಧದೊಂದಿಗೆ ಹೋರಾಡುತ್ತಿದ್ದರು. ಇದಕ್ಕೆ ನಿರಾಲಾ ತಮ್ಮ ಕಾವ್ಯದ ಮೂಲಕ ಧ್ವನಿ ನೀಡಿದರು.

ಅಹಿಂಸೆಯನ್ನು ಪ್ರಬಲ ಶಕ್ತಿಯೆಂದು ಗ್ರಹಿಸಿಕೊಂಡು, ಗಾಂಧಿ ಅಹಿಂಸೆಯನ್ನು ಪರಿಶ್ರಮ, ಧೈರ್ಯ, ಶೌರ್ಯ ಮತ್ತು ನಿರ್ಭಯತೆಯ ಸಾರಾಂಶವಾಗಿ ಸ್ಥಾಪಿಸಿದರು. ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಚಂಪಾರನ್ ಭೂಮಿಯಲ್ಲಿ ಅಹಿಂಸಾ ದೇವತೆಯೊಂದಿಗೆ ಮುಖಾಮುಖಿಯಾಗಿದ್ದನ್ನು ಉಲ್ಲೇಖಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಎರಡು ದಶಕಗಳ ಕಾಲ ಅವರು ಅಹಿಂಸೆಯಿಂದ ಹೋರಾಟ ನಡೆಸಿದ್ದರೂ, ಚಂಪಾರಣ್ ಬಗ್ಗೆ ಗಾಂಧಿ ವ್ಯಕ್ತಪಡಿಸಿದ ಅಭಿಪ್ರಾಯ ಆಳವಾದ ಪರಿಣಾಮ ಬೀರುತ್ತದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.