ETV Bharat / bharat

ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ಗೂ ಕೊರೊನಾ​: ಟ್ವೀಟ್​ ಮಾಡಿದ ಚೋಪ್ರಾ!

ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿರುವ ವಿಷಯದ ಬಗ್ಗೆ ಆಕಾಶ್​ ಚೋಪ್ರಾ ಟ್ವೀಟ್​ ಮಾಡಿ ಮಾಹಿತಿ ಹೊರಹಾಕಿದ್ದಾರೆ.

Former India opener Chetan Chauhan
Former India opener Chetan Chauhan
author img

By

Published : Jul 12, 2020, 1:51 AM IST

ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚು ಹಬ್ಬುತ್ತಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಹಾಗೂ ಭಾರತೀಯ ಜನತಾ ಪಾರ್ಟಿ ಮುಖಂಡ ಚೇತನ್​ ಚೌಹಾಣ್​ಗೂ ಕೊರೊನಾ ಪಾಸಿಟಿವ್​ ತಗುಲಿರುವುದು ಕನ್ಫರ್ಮ್​​ ಆಗಿದೆ.

ಈ ಹಿಂದೆ ಉತ್ತರ ಪ್ರದೇಶದ ಸಚಿವರಾಗಿದ್ದ ಚೌಹಾಣ್​, ಟೀಂ ಇಂಡಿಯಾ ಪರ 40 ಟೆಸ್ಟ್​ ಪಂದ್ಯ ಹಾಗೂ 7 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದರು.

ಕ್ರಿಕೆಟ್​ ದಂತಕಥೆ ಸುನಿಲ್​ ಗವಾಸ್ಕರ್​ ಜತೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಚೌಹಾಣ್​, ಟೆಸ್ಟ್​​ ಪಂದ್ಯಗಳಿಂದ 2,084ರನ್​ಗಳಿಕೆ ಮಾಡಿದ್ದು, ಟೆಸ್ಟ್​​ ಪಂದ್ಯದಲ್ಲಿ 97ರನ್​​ ಇವರ ಅತ್ಯಧಿಕ ಸ್ಕೋರ್​​ ಆಗಿದೆ.

  • Chetan Chauhan ji is also tested positive for #COVIDー19. Sending best wishes in his direction too...get well soon, sir. Tough night this one...Big B and Chetan Ji.

    — Aakash Chopra (@cricketaakash) July 11, 2020 " class="align-text-top noRightClick twitterSection" data=" ">

ಇದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್​ ಚೋಪ್ರಾ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು, ಚೇತನ್​ ಚೌಹಾಣ್​ ಜೀಗೂ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಜತೆಗೆ ಬಿಗ್​ ಬಿ ಹಾಗೂ ಚೇತನ್​ಜೀಗೆ ಈ ರಾತ್ರಿ ಕಠಿಣ ಎಂದು ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ ಚೇತನ್​ ಚೌಹಾಣ್​​ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಅಸೋಷಿಯೇಷನ್​ ಜತೆ ನಿಕಟ ಸಂಪರ್ಕ ಹೊಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.