ನವದೆಹಲಿ:ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹನ್ನೊಂದು ಗಂಟೆಗೆ ಆಗಮಿಸುವ ಸಾಧ್ಯತೆ ಇದೆ.
ಉಸಿರಾಟದ ತೊಂದರೆಯಿಂದ ಅರುಣ್ ಜೇಟ್ಲಿ ಅವರನ್ನ ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಹಿರಿಯ ನಾಯಕನ ಆರೋಗ್ಯ ಸ್ಥಿತಿ ಉಲ್ಬಣಿಸಿದೆ ಎಂದು ಮೂಲಗಳು ತಿಳಿಸಿವೆ.
ಏಮ್ಸ್ ಆಸ್ಪತ್ರೆಗೆ ದಾಖಲಾದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ... ಹಾಸ್ಪಿಟಲ್ಗೆ ದೌಡಾಯಿಸಿದ ಅಮಿತ್ ಶಾ!
66 ವರ್ಷದ ಅರುಣ್ ಜೇಟ್ಲಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿತ್ತ ಸಚಿವರಾಗಿ ಕಾಯರ್ನಿರ್ವಹಿಸಿದ್ದರು. ಮೋದಿ ಅವರು ಪ್ರಧಾನಿ ಅಭ್ಯರ್ಥಿ ಆಗಲು ಪ್ರಮುಖ ಪಾತ್ರ ವಹಿಸಿದ್ದ ಅರುಣ್ ಜೇಟ್ಲಿ, ಎನ್ಡಿಎ ಸರ್ಕಾರ ಟ್ರಬಲ್ ಶೂಟರ್ ಆಗಿದ್ದರು.. ರಫೆಲ್ ಸೇರಿದಂತೆ ಗಂಭೀರ ಆರೋಪಗಳ ಸಂದರ್ಭದಲ್ಲಿ ಮೋದಿ ಪರವಾಗಿ ಸಾಕ್ಷ್ಯ ಸಮೇತ, ದಾಖಲೆಗಳನ್ನಿಷ್ಟುಕೊಂಡು ತಿರುಗೇಟು ನೀಡುತ್ತಿದ್ದರು. ನೋಟ್ ಬ್ಯಾನ್ ಸೇರಿದಂತೆ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳುವ ಮಾಸ್ಟರ್ ಮೈಂಡ್ ಜೇಟ್ಲಿ ಆಗಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದ ಜೇಟ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದರು.
ಇದೇ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಸಹ ಜೇಟ್ಲಿ ಮಂಡನೆ ಮಾಡಿರಲಿಲ್ಲ. ಚಿಕಿತ್ಸೆ ಹಿನ್ನಲೆಯಲ್ಲಿ ಜೇಟ್ಲಿ ಅಮೆರಿಕಾದಲ್ಲಿದ್ದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದ್ದರು.