ETV Bharat / bharat

ಏಮ್ಸ್ ಆಸ್ಪತ್ರೆಗೆ ದಾಖಲಾದ ಮಾಜಿ ವಿತ್ತ ಸಚಿವ ಅರುಣ್​ ಜೇಟ್ಲಿ...  ಹಾಸ್ಪಿಟಲ್​​ಗೆ ದೌಡಾಯಿಸಿದ ಅಮಿತ್​ ಶಾ!

ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಏಮ್ಸ್​ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​​ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ.

ಅರುಣ್​ ಜೇಟ್ಲಿ/Arun Jaitley
author img

By

Published : Aug 9, 2019, 8:04 PM IST

Updated : Aug 9, 2019, 11:29 PM IST

ನವದೆಹಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಸಿರಾಟದ ತೊಂದರೆಯಿಂದ ಅರುಣ್​ ಜೇಟ್ಲಿ ಬಳಲುತ್ತಿರುವ ಕಾರಣ ಅವರನ್ನ ಹೃದಯರೋಗ ವಿಭಾಗದಲ್ಲಿರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಏಮ್ಸ್​ಗೆ ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಹರ್ಷವರ್ಧನ್, ಗೃಹ ಸಚಿವ ಅಮಿತ್​ ಶಾ ಸೇರಿ ಪ್ರಮುಖರು​ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿವಿಧ ಮುಖಂಡರ ಭೇಟಿ

ಕಳೆದ 18 ತಿಂಗಳಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜೇಟ್ಲಿ, ಮೋದಿ 2.0 ಸಂಪುಟದಲ್ಲಿ ಸಚಿವ ಸ್ಥಾನದಿಂದ ದೂರ ಇರಲು ನಿರ್ಧರಿಸಿದ್ದರು. ಜತೆಗೆ ಈಗಾಗಲೇ ಕಳೆದ ವರ್ಷ ನ್ಯೂಯಾರ್ಕ್​​ನಲ್ಲಿ ಚಿಕಿತ್ಸೆ ಸಹ ಪಡೆದುಕೊಂಡು ಬಂದಿದ್ದರು.

66 ವರ್ಷದ ಅರುಣ್​ ಜೇಟ್ಲಿ ಕಳೆದ ವರ್ಷ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಜತೆಗೆ ಸತತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದು, ಇದೀಗ ಏಮ್ಸ್​ನ ಹೃದಯರೋಗ ವಿಭಾಗದಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. 2019ರ ಲೋಕಸಭಾ ಚುನಾವಣೆಯಿಂದ ಜೇಟ್ಲಿ ಹೊರಗುಳಿದಿದ್ದರು. ಜತೆಗೆ ತಮಗೆ ಯಾವುದೇ ರೀತಿಯ ಜವಾಬ್ದಾರಿ ನೀಡದಂತೆ ಮೋದಿ ಬಳಿ ಮನವಿ ಮಾಡಿದ್ದರು.

Intro:Body:

ಏಮ್ಸ್​ ದಾಖಲಾದ ಮಾಜಿ ವಿತ್ತ ಸಚಿವ ಅರುಣ್​ ಜೇಟ್ಲಿ... ಭೇಟಿ ನೀಡಿದ ಅಮಿತ್​ ಶಾ! 

ನವದೆಹಲಿ: ಕೇಂದ್ರ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಏಮ್ಸ್​ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಿದ್ದಾರೆ. 

ಕಳೆದ 18 ತಿಂಗಳಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜೇಟ್ಲಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನದಿಂದ ದೂರ ಇರಲು ನಿರ್ಧರಿಸಿದ್ದರು. ಜತೆಗೆ ಈಗಾಗಲೇ ನ್ಯೂಯಾರ್ಕ್​​ನಲ್ಲಿ ಜೇಟ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು.

Conclusion:
Last Updated : Aug 9, 2019, 11:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.