ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ, ಇಂದಿನಿಂದ ಎರಡನೇ ಅವಧಿಯ ಮೊದಲ 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
-
After four long months, #MannKiBaat is back to do what it has always loved- celebrate the power of positivity and the strengths of 130 crore Indians!
— Narendra Modi (@narendramodi) June 29, 2019 " class="align-text-top noRightClick twitterSection" data="
Do tune in at 11 AM tomorrow morning! pic.twitter.com/aVxLXGqeAh
">After four long months, #MannKiBaat is back to do what it has always loved- celebrate the power of positivity and the strengths of 130 crore Indians!
— Narendra Modi (@narendramodi) June 29, 2019
Do tune in at 11 AM tomorrow morning! pic.twitter.com/aVxLXGqeAhAfter four long months, #MannKiBaat is back to do what it has always loved- celebrate the power of positivity and the strengths of 130 crore Indians!
— Narendra Modi (@narendramodi) June 29, 2019
Do tune in at 11 AM tomorrow morning! pic.twitter.com/aVxLXGqeAh
ಪ್ರಧಾನಿ ಮೋದಿ ಅವರ ಬಾನುಲಿ ಭಾಷಣ 'ಮನ್ ಕಿ ಬಾತ್' ಇಂದು ಬೆಳಗ್ಗೆ 11 ಗಂಟೆಗೆ ಮತ್ತೆ ಪ್ರಾರಂಭಗೊಳ್ಳಲಿದೆ ಎಂದು ಮೋದಿ ಟ್ವೀಟ್ಟರ್ ಮೂಲಕ ತಿಳಿಸಿದ್ದಾರೆ.
ಪ್ರಧಾನಿಯವರ 'ಮನ್ ಕಿ ಬಾತ್' ಏಕಕಾಲಕ್ಕೆ ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನ (ಡಿಡಿ)ದಲ್ಲಿ ಪ್ರಸಾರಗೊಳ್ಳಲಿದೆ. ನರೇಂದ್ರ ಮೋದಿ ಆ್ಯಪ್ ಮತ್ತು ಯುಟ್ಯೂಬ್ ಚಾನಲ್‌ನಲ್ಲಿಯೂ ನೇರ ಪ್ರಸಾರಗೊಳ್ಳಲಿದೆ.
ಲೋಕಸಭೆ ಚುನಾವಣೆಗೂ ಮೊದಲು ಫೆಬ್ರವರಿ 24ರಂದು ಪ್ರಸಾರಗೊಂಡಿದ್ದ ಮನ್ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದು ಈ ಕಾರ್ಯಕ್ರಮವನ್ನ ಮುಂದುವರೆಸುವುದಾಗಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.
2014ರ ಅಕ್ಟೋಬರ್ 3 ರಂದು ಪ್ರಾರಂಭಗೊಂಡಿದ್ದ ಮನ್ ಕಿ ಬಾತ್ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರಗೊಳ್ಳುತ್ತಾ ಬಂದಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಟ್ವೀಟ್ ಮಾಡಿದ್ದ ಮೋದಿ, ಮನ್ ಕಿ ಬಾತ್ ಪ್ರಾರಂಭಕ್ಕೂ ಮೊದಲು, ಜೂನ್ 11 ರಿಂದ 26ರ ಒಳಗೆ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ ನಿಮ್ಮಲ್ಲಿರುವ ಹೊಸ ಐಡಿಯಾ ಬಗ್ಗೆ ತಿಳಿಸಿ ಎಂದು ಕೇಳಿಕೊಂಡಿದ್ದರು.