ETV Bharat / bharat

'ಫಸ್ಟ್​ ಬೆಲ್​': ಇದು ಕೇರಳ ಸರ್ಕಾರದ ಆನ್​ಲೈನ್​ ತರಗತಿಗಳ ಯಶಸ್ಸಿನ ಗುಟ್ಟು

ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಒಂದರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ತಮಗೆ ಅನುಕೂಲವಿರುವ ಮಾಧ್ಯಮಗಳ ಮೂಲಕ ತಮ್ಮ ಮನೆಯಲ್ಲೇ ಕುಳಿತು ಸುರಕ್ಷಿತವಾಗಿ ಪಾಠಗಳನ್ನು ಕಲಿಯಬಹುದು. ಟೆಲಿವಿಷನ್, ವೆಬ್​ಸೈಟ್​ ಹಾಗೂ ಯೂಟ್ಯೂಬ್ ಚಾನೆಲ್​ ಮೂಲಕ ಪಾಠ ಕೇಳಲು ಸರ್ಕಾರ ವ್ಯವಸ್ಥೆ ಮಾಡಿದೆ.

First Bell
ಫಸ್ಟ್​ ಬೆಲ್
author img

By

Published : Jul 3, 2020, 5:09 PM IST

ತಿರುವನಂತಪುರಂ(ಕೇರಳ): ಜಗತ್ತೇ ಕೋವಿಡ್​ ಸುಳಿಯಲ್ಲಿ ಸಿಕ್ಕಿ ನಲುಗುತ್ತಿದೆ. ಆರ್ಥಿಕತೆ ವೈರಸ್​ ದಾಳಕ್ಕೆ ಸಿಲುಕಿ ಬಿದ್ದುಹೋಗಿದೆ. ಶೈಕ್ಷಣಿಕ ಕ್ಷೇತ್ರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೈಲೆಂಟ್​ ಆಗಿದೆ. ಕಣ್ಣಿಗೆ ಕಾಣದ ಮಾರಕ ವೈರಸ್​ ವ್ಯೂಹಕ್ಕೆ ಸಿಲುಕಿ ಮಕ್ಕಳ ಬದುಕೇ ಅತಂತ್ರವಾಗಿದೆ...

ಕೇರಳ. ಶೈಕ್ಷಣಿಕೆವಾಗಿ ಭಾರೀ ಮುನ್ನಡೆಯಲ್ಲಿರುವ ಭಾರತದ ರಾಜ್ಯ. ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವುದು ಈ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಹಿಡಿದ ಕೈಗನ್ನಡಿ. ಆರಂಭದಿಂದಲೇ ಕೋವಿಡ್​ ಪರಿಸ್ಥಿತಿಯನ್ನು ಸಮರ್ಥವಾಗಿ ಹಾಗೂ ದಿಟ್ಟವಾಗಿ ನಿಭಾಯಿಸಿದ್ದಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದ ರಾಜ್ಯವೆಂದರೆ ಅದು ಕೇರಳ. ವೈರಸ್​ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದ್ದಂತೆಯೇ ಇಲ್ಲಿನ ರಾಜಕೀಯ ನಾಯಕರು, ಪ್ರಬುದ್ಧ ಜನತೆ ಎಚ್ಚೆತ್ತು ನಿಂತು ವೈರಸ್​ ವಿರುದ್ಧ ಹೋರಾಟಕ್ಕೆ ನಿಂತ್ರು. ಅಗತ್ಯ ಸನ್ನಿವೇಶದಲ್ಲಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಜನತೆಯ ರಕ್ಷಣೆಗೆ ತೊಡೆ ತಟ್ಟಿ ನಿಂತಿತು ಇಲ್ಲಿನ ಸರ್ಕಾರ. ವ್ಯಾಪಾರ-ವಹಿವಾಟು, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ವಲಯಗಳನ್ನೂ ಗಣನೆಗೆ ತೆಗೆದುಕೊಂಡು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ನಿಭಾಯಿಸಲಾಯ್ತು. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಚರ್ಚೆಗೊಳಗಾದ ಪ್ರಮುಖ ಕ್ಷೇತ್ರ ಶಿಕ್ಷಣ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯುವ ಬಗ್ಗೆ ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರ ಚರ್ಚೆಗೆ ನಿಂತಿತು. ಆದ್ರೆ ಕೇರಳದ ವಿಷಯ ಹೀಗಿರಲಿಲ್ಲ.

ಶಾಲಾ- ಕಾಲೇಜುಗಳನ್ನು ಮತ್ತೆ ತೆರೆಯುವುದು ಬಿಡಿ. ಆ ಬಗ್ಗೆ ಯೋಚನೆಗೂ ಕೇರಳ ಸರ್ಕಾರ ಮುಂದಾಗಿಲ್ಲ. ಮಕ್ಕಳ ಆರೋಗ್ಯ ಹಾಗೂ ಪೋಷಕರ ಭಯಕ್ಕೆ ಧೈರ್ಯ ತುಂಬುವ ನಿರ್ಧಾರಕ್ಕೆ ಬಂದ ಕೇರಳ ಸಿಎಂ ಪಿಣರಾಯಿ ವಿಜಯನ್​ ನೇತೃತ್ವದ ಸರ್ಕಾರ, ಮಕ್ಕಳ ಬಗ್ಗೆ ಅಪಾರ ಕಾಳಜಿ ವಹಿಸೋಕೆ ಸಂಕಲ್ಪ ಮಾಡಿತು. ಹಾಗಿದ್ರೆ ಮಕ್ಕಳ ಭವಿಷ್ಯದ ಕತೆ ಏನು? ಇದಕ್ಕಾಗಿ ಕಳೆದ ಜೂನ್​ ಆರಂಭದಲ್ಲೇ ಪರಿಣಾಮಕಾರಿಯಾಗಿ ಆನ್​ಲೈನ್​ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಆರಂಭಿಸೋಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೇರಳ ಸರ್ಕಾರ ಆರಂಭಿಸಿತು. ಅದುವೇ 'ಫಸ್ಟ್​ ಬೆಲ್'.

ಕೇರಳ ಸರ್ಕಾರದ ಆನ್​ಲೈನ್​ ತರಗತಿಗಳ ಯಶಸ್ಸಿನ ಗುಟ್ಟು

ದೇಶದಲ್ಲೇ ಫಸ್ಟ್​, ಕೇರಳದ 'ಫಸ್ಟ್​ ಬೆಲ್'...

ಜೂನ್ 1 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ‘ಫಸ್ಟ್ ಬೆಲ್’ ಹೆಸರಿನ ಆನ್‌ಲೈನ್ ಶಿಕ್ಷಣ ವಿಧಾನವನ್ನು ಪ್ರಾರಂಭಿಸಿಬಿಟ್ಟರು. ಕೋವಿಡ್​ನಿಂದಾಗಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಹಾಜರಾಗಿ ಪಾಠ ಕಲಿಯುವ ಸ್ಥಿತಿಯಲ್ಲಿ ಇಲ್ಲದಿದ್ದಾಗ ಭಾರತದ ರಾಜ್ಯ ಸರ್ಕಾರವೊಂದು ಜಾರಿಗೆ ತಂದ ಆನ್​ಲೈನ್​ ಶಿಕ್ಷಣ ವ್ಯವಸ್ಥೆಯಲ್ಲಿ ಕೇರಳದ 'ಫಸ್ಟ್​ ಬೆಲ್' ಮೊದಲನೆಯದು.

ಲಭ್ಯ ಅಂಕಿ-ಅಂಶಗಳ ಪ್ರಕಾರ, ಕೇರಳ ಸರ್ಕಾರ ನಡೆಸುತ್ತಿರುವ ಆನ್‌ಲೈನ್ ತರಗತಿಗಳಲ್ಲಿ ದೇಶಾದ್ಯಂತ ಸುಮಾರು 40 ಲಕ್ಷ ಜನರು ಭಾಗವಹಿಸುತ್ತಿದ್ದಾರೆ. ಪಾಠ ಕೇಳುತ್ತಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಒಂದರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ತಮಗೆ ಅನುಕೂಲವಿರುವ ಮಾಧ್ಯಮಗಳ ಮೂಲಕ ತಮ್ಮ ಮನೆಯಲ್ಲೇ ಕುಳಿತು ಸುರಕ್ಷಿತವಾಗಿ ಪಾಠಗಳನ್ನು ಕಲಿಯಬಹುದು. ಟೆಲಿವಿಷನ್, ವೆಬ್​ಸೈಟ್​ ಹಾಗೂ ಯೂಟ್ಯೂಬ್ ಚಾನೆಲ್​ ಮೂಲಕ ಪಾಠ ಕೇಳಲು ಸರ್ಕಾರ ವ್ಯವಸ್ಥೆ ಮಾಡಿದೆ.

ಎಲ್ಲಾ ತರಗತಿಗಳಿಗೆ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ತರಗತಿಗಳನ್ನು ನಿಗದಿಪಡಿಸಲಾಗಿದೆ. ತರಗತಿಗಳನ್ನು ಕೇರಳದ ಸರ್ಕಾರಿ ಚಾನೆಲ್ 'ಕೈಟ್ ವಿಕ್ಟರ್ಸ್‌'ನಲ್ಲಿ ಪ್ರಸಾರ ಮಾಡಲಾಗುತ್ತದೆ. ಕೈಟ್ ವಿಕ್ಟರ್ಸ್‌ನ ವೆಬ್​ಸೈಟ್​ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲೂ ಇದು ಲಭ್ಯವಿದೆ.

ಎಲ್ಲಾ ರೀತಿಯಲ್ಲೂ ಅಚ್ಚುಕಟ್ಟು ವ್ಯವಸ್ಥೆ...

ತರಗತಿಗತಿಗಳಿಗೆ ಅನುಗುಣವಾಗಿ ಶಿಕ್ಷಕರು ನಡೆಸುವ ಪಾಠಗಳನ್ನು ಇಂಗ್ಲೀಷ್​ ಹಾಗೂ ಮಲಯಾಳಂ ಮಾಧ್ಯಮಗಳ ಮೂಲಕ ರೆಕಾರ್ಡ್​ ಮಾಡಲಾಗುತ್ತದೆ. ಇದಕ್ಕಾಗಿ ಎಲ್ಲಾ ರೀತಿಯ ಸುಸಜ್ಜಿತ ರೆಕಾರ್ಡಿಂಗ್​ ಸೆಟ್​ ನಿರ್ಮಿಸಿ ಶಿಕ್ಷಕರ ಪಾಠದ ವಿಡಿಯೋ ಚಿತ್ರೀಕರಣ ನಡೆಸಿ ಪ್ರಸಾರ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳನ್ನು ತಲುಪಲು ಬೇಕಾದ ವಿಸ್ತಾರವಾದ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಯೋಗಿಕ ತರಗತಿಗಳ ನಂತರ ಬಂದ ಪ್ರತಿಕ್ರಿಯೆಗಳ ಅನುಸಾರವಾಗಿ ಕಾರ್ಯಕ್ರಮದಲ್ಲಿ ಅಗತ್ಯ ಬದಲಾವಣೆಯನ್ನೂ ಮಾಡಲಾಗಿದೆ.

ಪ್ರತಿ ವಾರ ತರಗತಿಗಳ ಪ್ರಾರಂಭವಾಗುವುದಕ್ಕೂ ಮೊದಲು, ಪ್ರತಿ ತರಗತಿಗಳ ವೇಳಾಪಟ್ಟಿಯನ್ನು ಟಿವಿ, ಯೂಟ್ಯೂಬ್ ಚಾನೆಲ್‌ ಹಾಗೂ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ.

ಪಾಠ ಮಿಸ್​ ಮಾಡ್ಕೊಂಡ್ರೆ ಚಿಂತೆ ಬೇಡ...

ಸರ್ಕಾರಿ ಅನುದಾನಿತ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ www.victers.kite.kerala.gov.in, facebook.com/victerseduchannel ಮತ್ತು youtube.co/itsvicter ನಲ್ಲಿ ಯಾವುದೇ ಸಮಯದಲ್ಲಿ ಪಾಠಗಳು ಲಭ್ಯವಿದೆ. ಟೆಲಿವಿಷನ್ ತರಗತಿಯನ್ನು ಮಿಸ್​ ಮಾಡಿಕೊಂಡವರು ಈ ಲಿಂಕ್​ಗೆ ಹೋಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮಗೆ ಬೇಕಾದಾಗ ತರಗತಿಗಳನ್ನು ವೀಕ್ಷಿಸಬಹುದಾಗಿದೆ.

ವಿಕ್ಟರ್ಸ್ ಯೂಟ್ಯೂಬ್ ಚಾನೆಲ್‌ನ ಚಂದಾದಾರರ ಸಂಖ್ಯೆಯು 50,000 ರಿಂದ 10 ಲಕ್ಷಕ್ಕೆ ಏರಿರುವುದೇ ಸರ್ಕಾರದ ಆನ್​ಲೈನ್​ ತರಗತಿಗಳ ಯಶಸ್ಸು ಹಾಗೂ ಪರಿಣಾಮಕಾರಿ ಅನುಷ್ಟಾನಕ್ಕೆ ಸಾಕ್ಷಿ. ಇದರ ಗುಣಮಟ್ಟದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.

ಫಸ್ಟ್​ ಬೆಲ್

2 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡಲು ಕ್ರಮ...

ಕೇರಳದಲ್ಲಿ ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ ಈ ಪಾಠ ತಲುಪಿಲ್ಲ ಎಂದು ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯ ತಿಳಿಸಿದೆ. ಹೀಗಾಗಿ ಯಾವುದೇ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು ಎಂದು, ವಂಚಿತ ವಿದ್ಯಾರ್ಥಿಗಳಿಗೆ ಶಿಕ್ಷಕರ ನೇತೃತ್ವದಲ್ಲಿ ಶಾಲೆಗಳಿಂದ ಲ್ಯಾಪ್‌ಟಾಪ್ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕನ್ನಡ, ತಮಿಳು ಭಾಷಿಕರಿಗೂ ಆದ್ಯತೆ...

ಇದಲ್ಲದೆ, ಅನೇಕ ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು, ಪಂಚಾಯತ್​ಗಳು, ಶಾಲಾ ಹಳೆ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ರಾಜಕೀಯ ಸಂಘಟನೆಗಳು ವಿದ್ಯಾರ್ಥಿಗಳಿಗೆ ಟೆಲಿವಿಷನ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಿವೆ. ಕೇರಳ ಶಾಲೆಗಳಲ್ಲಿ ಕಲಿಯುತ್ತಿರುವ ಕನ್ನಡ ಮತ್ತು ತಮಿಳು ಮಧ್ಯಮ ವಿದ್ಯಾರ್ಥಿಗಳಿಗೂ ಪಾಠ ತಲುಪುವ ಉದ್ದೇಶದಿಂದ ಪ್ರತ್ಯೇಕ ಯುಟ್ಯೂಬ್ ಚಾನೆಲ್ ಮತ್ತು ಸ್ಥಳೀಯ ಕೇಬಲ್ ನೆಟ್‌ವರ್ಕ್ ಮೂಲಕ ಟಿವಿ ಚಾನೆಲ್ ಮೂಲಕ ತರಗತಿಗಳನ್ನು ಪ್ರಸಾರ ಪ್ರಾರಂಭಿಸಲಾಗಿದೆ.

ಆನ್‌ಲೈನ್ ತರಗತಿಗಳ ಆರಂಭ ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಸಂಬಂಧಿಸಿದ ಎಲ್ಲಾ ಆತಂಕಗಳು ಮತ್ತು ಗೊಂದಲಗಳನ್ನು ಕೇವಲ ಒಂದು ತಿಂಗಳ ‘ಫಸ್ಟ್ ಬೆಲ್’ ಅವಧಿಯಲ್ಲೇ ಭಾಗಶಃ ಸಮರ್ಥವಾಗಿ ನಿವಾರಿಸಲಾಗಿದೆ. ರಾಜ್ಯ ಸರ್ಕಾರದ ಹೆಜ್ಜೆಯನ್ನು ಅನುಸರಿಸಿ, ರಾಜ್ಯದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳು ಸಹ ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಇದೇ ರೀತಿಯಲ್ಲಿ ಪ್ರಾರಂಭಿಸಿವೆ.

ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿರುವ ಕೇರಳ, ಮತ್ತೆ ಆನ್​ಲೈನ್​ ತರಗತಿಗಳನ್ನೂ ಸಮರ್ಥವಾಗಿ ಹಾಗೂ ವ್ಯವಸ್ಥಿತವಾಗಿ ನಿಭಾಯಿಸೋ ಮೂಲಕ ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಇದೇ ವ್ಯವಸ್ಥೆಯನ್ನು ಬೇರೆ ರಾಜ್ಯಗಳಲ್ಲೂ ಅನುಸರಿಸಿದರೆ, ವರ್ಚುವಲ್​ ಕ್ಲಾಸ್​ ಯಶಸ್ವಿಯಾಗುವುದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕವೂ ದೂರವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.