ಗೌತಮ ಬುದ್ಧ ನಗರ(ಉತ್ತರ ಪ್ರದೇಶ): ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದರೂ ಕೂಡಾ ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಡಗಿಸುವ ಪ್ರಯತ್ನ ಮಾಡಿದ ನೋಯಿಡಾದ ಖಾಸಗಿ ಕಂಪನಿಯೊಂದರ ಎಂಡಿ ಮೇಲೆ ಎಫ್ಐಆರ್ ದಾಖಲಿಸಲಾಗುವುದೆಂದು ಜಿಲ್ಲಾ ನ್ಯಾಯಾಧೀಶ ಬಿ.ಎನ್ ಸಿಂಗ್ ತಿಳಿಸಿದ್ದಾರೆ.
ಸೀಸ್‌ಫೈರ್ ಹೆಸರಿನ ಕಂಪನಿಯೊಂದರ ಡಿಎಂ ಮತ್ತು ಕೆಲವು ಸಿಬ್ಬಂದಿ ಹೊರದೇಶದಿಂದ ಹಿಂತಿರುಗಿದ್ದು, ತಮ್ಮ ಪ್ರಯಾಣದ ಮಾಹಿತಿಯನ್ನು ಮರೆಮಾಚುವ ಪ್ರಯತ್ನ ಮಾಡಿದ್ದರು.
ಸದ್ಯ ಉತ್ತರಪ್ರದೇಶದಲ್ಲಿ 22 ಸೋಂಕೇತ ಪ್ರಕರಣಗಳು ವರದಿಯಾಗಿವೆ.