ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳಿಂದ ದೇಶದ ರೈತರು ಸ್ವಾವಲಂಬಿಗಳಾಗುತ್ತಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಹೊಸ ಕೃಷಿ ಕಾಯ್ದೆಗಳಿಂದ ಪ್ರತಿಯೊಬ್ಬ ರೈತನು ಸ್ವಾವಲಂಬಿಯಾಗುತ್ತಾನೆ. ಸರ್ಕಾರ ರೈತರಿಂದ ಬೆಳೆಗಳನ್ನು ಖರೀದಿಸುವ ಪ್ರಮಾಣ ಹೆಚ್ಚಾಗಲಿದೆ. ಉದಾಹರಣೆಗೆ 2013-14ರಲ್ಲಿ ಸರ್ಕಾರ ರೈತರಿಂದ ಹೆಸರು ಕಾಳು ಖರೀದಿ ಮಾಡುತ್ತಿರಲಿಲ್ಲ.
ಆದರೆ, 2019-20ರಲ್ಲಿ ಮೋದಿ ಸರ್ಕಾರ 1.66 ಲಕ್ಷ ಮೆಟ್ರಿಕ್ ಟನ್ ಹೆಸರು ಕಾಳು ಖರೀದಿ ಮಾಡಿದೆ ಎಂದು ಸಚಿವ ಪ್ರಸಾದ್ ಟ್ವೀಟ್ ಮಾದಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿನ್ನೆಯಷ್ಟೇ ಮೂರು ಕೃಷಿ ಮಸೂದೆಗಳಿಗೆ ಅಂಕಿತ ಹಾಕಿದ್ದರು. ವಾರದ ಹಿಂದಷ್ಟೇ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆಗಳನ್ನು ಅಂಗೀಕರಿಸಲಾಗಿತ್ತು.
ಇದೀಗ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆ, ಅಗತ್ಯ ವಸ್ತುಗಳ (ತಿದ್ದುಪಡಿ) ಕಾನೂನಾತ್ಮಕ ರೂಪ ಪಡೆದುಕೊಂಡು ಕಾಯ್ದೆಗಳಾಗಿವೆ.