ಕಡಪ (ಆಂಧ್ರಪ್ರದೇಶ): ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ರೈತನೋರ್ವ ಆಕಸ್ಮಿಕವಾಗಿ ಟ್ರ್ಯಾಕ್ಟರ್ನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಕಡಪ ಜಿಲ್ಲೆಯ ಚಿನ್ನ ವೆಂಚುರ್ಲಾ ಗ್ರಾಮದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಚಿನ್ನ ವೆಂಚುರ್ಲಾ ಗ್ರಾಮದ ರೈತ ಸಂಜೀವ್ ಖನ್ನಾ, ಭತ್ತದ ಕೆಲಸಕ್ಕಾಗಿ ಟ್ರ್ಯಾಕ್ಟರ್ ಮೂಲಕ ಹೊಲ ಹಸನು ಮಾಡುತ್ತಿದ್ದ. ಈ ವೇಳೆ ಟ್ರ್ಯಾಕ್ಟರ್‌ನ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ. ಚಕ್ರಗಳನ್ನು ಹೂಳಿನಿಂದ ಮೇಲೆತ್ತಲು ಯತ್ನಿಸಿದಾಗ ಏಕಾಏಕಿಯಾಗಿ ವಾಹನ ಪಲ್ಟಿಯಾಗಿದೆ. ಈ ವೇಳೆ ರೈತ ಟ್ರ್ಯಾಕ್ಟರ್ ಕೆಳಗೆ ರೈತ ಸಿಲುಕಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಸ್ಥಳದಲ್ಲಿದ್ದ ಇತರರು ನೋಡು ನೋಡುತ್ತಲೇ ಈ ಘಟನೆ ನಡೆದಿದೆ. ಕೂಡಲೇ ಸಂಜೀವ್ ಖನ್ನಾರ ಪ್ರಾಣ ರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆತ ಟ್ರ್ಯಾಕ್ಟರ್ ಪಲ್ಟಿಯಾಗುತ್ತಿದ್ದಂತೆ ಅಸುನೀಗಿದ್ದ.
ದುರ್ಘಟನೆಯ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೋರ್ವನ ಮೊಬೈಲ್ನಲ್ಲಿ ಸೆರೆಯಾಗಿದೆ.