ETV Bharat / bharat

ನೋಟು ರದ್ದತಿ, ದೋಷಪೂರಿತ ಜಿಎಸ್​ಟಿ, ವಿಫಲ ಲಾಕ್‌ಡೌನ್​ನಿಂದ ಆರ್ಥಿಕತೆ ನೆಲಕಚ್ಚಿದೆ: ರಾಹುಲ್​​​ - ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Economy destroyed by demonetisation, 'flawed' GST', 'failed' lockdown: Rahul on FM's 'Act of God' remark
ಆರ್ಥಿಕತೆ ನೆಲಕಚ್ಚಿದ್ದು ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್​ಟಿ, ವಿಫಲ ಲಾಕ್‌ಡೌನ್ ನಿಂದ ಆಕ್ಟ್ ಆಫ್ ಗಾಡ್ ನಿಂದಲ್ಲ: ರಾಹುಲ್
author img

By

Published : Aug 29, 2020, 9:14 AM IST

Updated : Aug 29, 2020, 12:55 PM IST

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್ಥಿಕತೆಗೆ ನಾಶವಾಗಲು 3 ಮುಖ್ಯ ಕಾರಣಗಳಿವೆ. ಅವು ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿ ಮತ್ತು ವಿಫಲವಾದ ಲಾಕ್‌ಡೌನ್ ಎಂದಿದ್ದಾರೆ.

  • India’s economy has been destroyed by three actions:

    1. Demonetisation
    2. Flawed GST
    3. Failed lockdown

    Anything else is a lie.https://t.co/IOVPDAG2cv

    — Rahul Gandhi (@RahulGandhi) August 28, 2020 " class="align-text-top noRightClick twitterSection" data=" ">

'ಆಕ್ಟ್ ಆಫ್​ ಗಾಡ್​' ಅಂದರೆ ದೇವರ ಕೃತ್ಯದಡಿಯಲ್ಲಿ ಬರುವ ಕೋವಿಡ್​ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಗೆ ತೊಂದರೆಯಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಇನ್ನೂ ಸಂಕುಚನ ಕಾಣಲಿದೆ ಎಂದು ಸೀತಾರಾಮನ್ ಹೇಳಿದ್ದರು.

ಸೀತಾರಾಮನ್​ ಹೇಳಿಕೆಗೆ ಸಂಬಂಧಿಸಿದಂತೆ ಒಂದು ಸುದ್ದಿಯನ್ನು ಟ್ಯಾಗ್ ಮಾಡಿರುವ ರಾಹುಲ್​ ಗಾಂಧಿ, "ಭಾರತದ ಆರ್ಥಿಕತೆಯು ಮೂರು ಕ್ರಿಯೆಗಳಿಂದ ನಾಶವಾಗಿದೆ. ಅವು ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್​ಟಿ ಹಾಗೂ ವಿಫಲವಾದ ಲಾಕ್​​ಡೌನ್. ಉಳಿದದ್ದೇನಾದರೂ ಕಾರಣವೆಂದು ನೀಡಿದರೆ ಅದು ಸುಳ್ಳು" ಎಂದು ಟ್ವೀಟ್ ಮಾಡಿದ್ದಾರೆ.

Last Updated : Aug 29, 2020, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.