ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮತ್ತೆರಡು ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ. ಹಾಗೆಯೇ ಒಂದು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ರಿಲೀಫ್ ಸಿಕ್ಕಿದೆ.
ನಾಂದೇಡ್ ಹಾಗೂ ವಾರಣಾಸಿಯಲ್ಲಿನ ಭಾಷಣದಲ್ಲಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ನಾಗ್ಪುರದಲ್ಲಿ ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ದೂರು ದಾಖಲಿಸಿತ್ತು.
ಈ ಬಗ್ಗೆ ಆಯೋಗವು ವಿಚಾರಣೆ ನಡೆಸಿ, ಭಾಷಣದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಮೋದಿ, ಶಾಗೆ ಕ್ಲೀನ್ ಚೀಟ್ ನೀಡಿದೆ.
ಮಧ್ಯಪ್ರದೇಶ ಸಮಾವೇಶದಲ್ಲಿನ ಭಾಷಣದ ಕುರಿತ ನೋಟಿಸ್ಗೆ ಉತ್ತರ ನೀಡಲು ಸಮಯಾವಕಾಶ ಕೊಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ನೋಟಿಸ್ಗೆ ಪ್ರತಿಕ್ರಿಯೆ ನೀಡುವ ಅವಧಿಯನ್ನು ಮೇ.7ರವರೆಗೆ ವಿಸ್ತರಿಸಿದೆ.