ETV Bharat / bharat

ಐಶ್ವರ್ಯಾಗೆ ಇಡಿ ಫುಲ್‌ ಡ್ರಿಲ್; ಅತಿಸಾರ, ರಕ್ತದೊತ್ತಡ ಕಾರಣ ಆಸ್ಪತ್ರೆ ಸೇರಿದ ಡಿಕೆಶಿ - ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ಮಾಜಿ ಸಚಿವ ಡಿಕೆ ಶಿವಕುಮಾರ್​ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಅವರನ್ನು ಆರ್​ಎಂಎಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕೆ ಶಿವಕುಮಾರ್​
author img

By

Published : Sep 12, 2019, 8:37 PM IST

Updated : Sep 12, 2019, 8:43 PM IST

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹಾಗಾಗಿ ಅವರನ್ನು ದೆಹಲಿಯ ಆರ್​​ಎಂಎಲ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಅತಿಸಾರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವ ಕಾರಣ ಆರ್​ಎಂಎಲ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ಮಗಳು ಐಶ್ವರ್ಯಾ ಇಂದು ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದು, ವಿವಿಧ ಕಂಪನಿಗಳಲ್ಲಿ ಅವರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕಾರಣ ವಿಚಾರಣೆ ನಡೆಸಲಾಗಿದೆ. ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಡಿಸಿರುವ ಸುದ್ದಿ ತಿಳಿದ ಡಿಕೆ ಶಿವಕುಮಾರ್​ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.

  • Delhi: Aishwarya, daughter of Congress leader DK Shivakumar leaves from the office of the Enforcement Directorate (ED). She was summoned by the agency to appear before it today. DK Shivakumar was arrested by ED on September 3 in connection with an alleged money laundering case. pic.twitter.com/euBnr1V57g

    — ANI (@ANI) September 12, 2019 " class="align-text-top noRightClick twitterSection" data=" ">

ಡಿಕೆ ಶಿವಕುಮಾರ್​ ಅವರ ನವದೆಹಲಿ ನಿವಾಸದಲ್ಲಿ 8.59 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಈ ಕುರಿತ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್​ ಜಾರಿಗೊಳಿಸಿತ್ತು. ಆ. 30ರಂದು ಡಿಕೆಶಿ ವಿಚಾರಣೆಗೆ ಹಾಜರಾಗಿದ್ದು,ಅವರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಮಾಜಿ ಸಚಿವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ತದನಂತರ ಕೋರ್ಟ್​​ನಲ್ಲಿ ವಿಚಾರಣೆ ನಡೆದು,​ 10 ದಿನಗಳ ಕಾಲ ಡಿಕೆಶಿಯನ್ನು ಇಡಿ ವಶಕ್ಕೆ ಒಪ್ಪಿಸಲಾಗಿತ್ತು. ನಾಳೆ ಈ ವಿಚಾರಣಾ ಕಾಲಾವಧಿ ಮುಕ್ತಾಯಗೊಳ್ಳಲಿದೆ.

ಇನ್ನು ಐಶ್ವರ್ಯ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ತೀವ್ರವಾಗಿ ವಿಚಾರಣೆ ನಡೆಸಿರುವ ಜಾರಿ ಅಧಿಕಾರಿಗಳು ಸಂಜೆ ವೇಳೆ ಅವರನ್ನು ಬಿಡುಗಡೆಗೊಳಿಸಿದ್ದಾರೆ.

Intro:Body:

ಅತಿಸಾರ,ರಕ್ತದೊತ್ತಡ: ಆಸ್ಪತ್ರೆಗೆ ದಾಖಲಾದ ಡಿಕೆ ಶಿವಕುಮಾರ್​!

ನವದೆಹಲಿ: ಅಕ್ರಮ ಹಣ ವರ್ಗಾವಣೆ ಕೇಸ್‍ಗೆ ಸಂಂಧಿಸಿದಂತೆ ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವ ಕಾರಣ ಅವರನ್ನ ದೆಹಲಿಯ ಆರ್​​ಎಂಎಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಅತಿಸಾರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವ ಕಾರಣ ಅವರನ್ನ ಆರ್​ಎಂಎಲ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ಮಗಳು ಐಶ್ವರ್ಯಾ ಇಂದು ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದು, ವಿವಿಧ ಕಂಪನಿಗಳಲ್ಲಿ ಅವರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕಾರಣ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಮಗಳು ಐಶ್ವರ್ಯಾ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿರುವ ಸುದ್ದಿ ತಿಳಿದ ಡಿಕೆ ಶಿವಕುಮಾರ್​ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ.

ಡಿಕೆ ಶಿವಕುಮಾರ್​ ಅವರ ನವದೆಹಲಿ ನಿವಾಸದಲ್ಲಿ 8.59 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಈ ಕುರಿತು ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿಗೊಳಿಸಿದ್ರು. ಆ. 30ರಂದು ಡಿಕೆಶಿ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವರನ್ನ ವಶಕ್ಕೆ ಪಡೆದಿದ್ದರು. ತದನಂತರ ಕೋರ್ಟ್​​ನಲ್ಲಿ ವಿಚಾರಣೆ ನಡೆದಿತ್ತು. ಆಗ ಕೋರ್ಟ್​​ 10 ದಿನ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳ ವಶಕ್ಕೆ ನೀಡಿದ್ದು, ನಾಳೆ ಅದು ಮುಕ್ತಾಯಗೊಳ್ಳಲಿದೆ. 

Conclusion:
Last Updated : Sep 12, 2019, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.