ETV Bharat / bharat

ಅನರ್ಹ ಶಾಸಕರ ವಿಚಾರಣೆ: ಅನರ್ಹತೆ ಎಂಬುದು ಶಿಕ್ಷೆಯ ಹೇರಿಕೆ- ವಕೀಲ ಸುಂದರಂ

ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಯನ್ನು ಆಲಿಸುತ್ತಿದೆ. ಈ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುವಂತೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ಮನವಿ ಮನವಿ ಮಾಡಿದರು. ಮೊದಲು ವಿಚಾರಣೆ ನಡೆಯಲಿ, ಆಚ ಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ ಎಂದು ನ್ಯಾಯಪೀಠ ತಿಳಿಸಿತು.

ಸಾಂದರ್ಭಿಕ ಚಿತ್ರ
author img

By

Published : Oct 23, 2019, 5:31 PM IST

ನವದೆಹಲಿ: ಸುಪ್ರೀಂಕೋರ್ಟ್ ರಾಜ್ಯದ 17 ಅನರ್ಹ ಶಾಸಕರ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತಿಕೊಂಡು ಸುದೀರ್ಘ ವಿಚಾರಣೆ ನಡೆಸುತ್ತಿದೆ.

ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ಆಲಿಸುತ್ತಿದೆ. ಈ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುವಂತೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ಮನವಿ ಮನವಿ ಮಾಡಿದರು. ಮೊದಲು ವಿಚಾರಣೆ ನಡೆಯಲಿ, ಆ ಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ ಎಂದು ನ್ಯಾಯಪೀಠ ತಿಳಿಸಿತು.

ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್​ ರೋಹಟ್ಗಿ ತಮ್ಮ ವಾದ ಮಾಡಿ, 'ಸ್ಪೀಕರ್ ನಿರ್ಧಾರದ ನ್ಯಾಯಾಂಗ ಪರಿಶೀಲನೆಯ ಬಗ್ಗೆ ಮಾತ್ರ ನಾವು ಈಗ ಕಾಳಜಿ ವಹಿಸುತ್ತೇವೆ. ಸ್ಪೀಕರ್ ನಿರ್ಧರಿಸುವ ಮೊದಲೇ ಪ್ರಕರಣ ದಾಖಲಾಗಿದ್ದರಿಂದ, ಇತರ ವಿಷಯಗಳೂ ಇದರಲ್ಲಿ ಅಡಗಿವೆ. ಸ್ಪೀಕರ್ ಅವರ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಸ್ಯೆಗಳು ಉದ್ಭವಿಸಿದ್ದವು. ವಿಧಾನ ಸಭೆಯ ಸದಸ್ಯರಿಗೆ ರಾಜೀನಾಮೆ ನೀಡುವ ಅನಿವಾರ್ಯವಾದ ಹಕ್ಕಿದೆ' ಎಂದರು.

ಅನರ್ಹತೆಯು ದುರುದ್ದೇಶ, ಅನಿಯಂತ್ರಿತತೆ ಮತ್ತು ಉತ್ತರದ ಅನುಮತಿಗೆ ಏಳು ದಿನಗಳ ಅವಧಿಯ ಕಾಲಾವಕಾಶವಿದೆ. ಅನರ್ಹತೆ ಮಾನ್ಯವಾಗಿದ್ದರೂ ಸಹ ಸ್ಪರ್ಧಿಸಲು ಬಯಸಿದರೆ ಅದು ನೂತನ ಚುನಾವಣೆಯಲ್ಲಿ ಕೊನೆಗೊಳ್ಳುತ್ತದೆ. ಸ್ಪರ್ಧಿಸಲು ಬಯಸದಿದ್ದರೆ ಅನರ್ಹತೆಯು 2023ರವರೆಗೆ ಮುಂದುವರಿಯುತ್ತದೆ ಎಂದು ರೋಹಟ್ಗಿ ವಾದ ಮಂಡಿಸಿದರು

ಕರ್ನಾಟಕ ವಿಧಾನಸಭೆಯ ನಿಯಮಗಳನ್ನು ಉಲ್ಲೇಖಿಸಿದ ಅನರ್ಹ ಶಾಸಕ ಸುಧಾಕರ್​ ಪರ ವಕೀಲ ಸುಂದರಂ ಅವರು, ಅನರ್ಹಗೊಂಡ ಶಾಸಕ ಮತ್ತು ರಾಜೀನಾಮೆ ನೀಡಿದರ ನಡುವೆ ಮೂಲಭೂತ ವ್ಯತ್ಯಾಸವಿದೆ. ರಾಜೀನಾಮೆಯ ನಿಯಮಗಳ ಅಡಿಯಲ್ಲಿ ಸುದೀರ್ಘವಾದ ವಿಚಾರಣೆಯನ್ನು ಸ್ಪೀಕರ್ ಅವರು ಸ್ವಯಂಪ್ರೇರಿತತೆವಾಗಿ ಕಂಡುಕೊಳ್ಳಬೇಕು. ರಾಜೀನಾಮೆ ನಂತರ ನಡೆದ ಘಟನೆಗಳನ್ನು ಗಣನೆಗೆ ತೆಗೆದುಕೊಳ್ಳಬಾರದು. ಇದು ಕೇವಲ ಅನರ್ಹತೆಯಲ್ಲ. ಇದೊಂದು ರೀತಿಯಲ್ಲಿ ಶಿಕ್ಷೆಯ ಹೇರಿಕೆ ಎಂದರು.

ವಾದ- ಪ್ರತಿವಾದ ನಡೆಸುತ್ತಿರುವ ವಕೀಲರು:

ಅನರ್ಹರ ಪರ- ವಕೀಲ ಮುಕುಲ್ ರೋಹ್ಟಗಿ

ಕೆಪಿಸಿಸಿ ಪರ: ಕಪಿಲ್ ಸಿಬಲ್​​

ಕಾಂಗ್ರೆಸ್ ಪರ- ವಕೀಲ ದೇವದತ್ತ ಕಾಮತ್
ಪ್ರಸ್ತುತ ಸ್ಪೀಕರ್​ ಪರ- ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ
ಅನರ್ಹ ಶಾಸಕ ಸುಧಾಕರ್​ ಪರ- ವಕೀಲ ಸುಂದರಂ
ಅನರ್ಹ ಶಾಸಕ ಶ್ರೀಮಂತ ಪಾಟೀಲ ಪರ- ವಕೀಲ ವಿ. ಗಿರಿ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.