ನವದೆಹಲಿ : ದೆಹಲಿಯ ಹಲವಾರು ಭಾಗಗಳು ಮತ್ತು ರಾಷ್ಟ್ರ ರಾಜಧಾನಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಭಾರೀ ಚಳಿಯ ನಡುವೆಯೂ ನವದೆಹಲಿಯ ಚಾಂದಿನಿಚೌಕ್, ಬಾರಖಂಬಾ ರಸ್ತೆ, ಗ್ರೀನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಮುಂಜಾನೆಯಿಂದಲೇ ಮಳೆ ಸುರಿದಿದೆ.
ದಕ್ಷಿಣ ದೆಹಲಿಯ ಕೆಲವು ಭಾಗಗಳಾದ ಅಯನಗರ, ಡೆರಾಮಾಂಡಿ, ತುಘಲಕ್ಬಾದ್ ಮತ್ತು ಹರಿಯಾಣದ ಕೆಲವು ಜಿಲ್ಲೆಗಳಲ್ಲಿ "ಗುಡುಗು ಸಹಿತ ಅಲ್ಪ ಮತ್ತು ಸಾಧಾರಣ ಮಳೆಯಾಗಲಿದೆ" ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
-
#WATCH I Delhi: Rain lashes parts of the national capital; visuals from near Barakhamba Road pic.twitter.com/hMjERKdvCX
— ANI (@ANI) January 3, 2021 " class="align-text-top noRightClick twitterSection" data="
">#WATCH I Delhi: Rain lashes parts of the national capital; visuals from near Barakhamba Road pic.twitter.com/hMjERKdvCX
— ANI (@ANI) January 3, 2021#WATCH I Delhi: Rain lashes parts of the national capital; visuals from near Barakhamba Road pic.twitter.com/hMjERKdvCX
— ANI (@ANI) January 3, 2021
ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಭಾನುವಾರದಂದು ಲಘು ಮಳೆ ಮತ್ತು ಸೋಮವಾರ ಮಧ್ಯಮ ಮಳೆಯಾಗುತ್ತದೆ ಎಂದು ಹೇಳಿತ್ತು ಹವಾಮಾನ ಇಲಾಖೆ ಹೇಳಿತ್ತು.
"ಸಂಪೂರ್ಣ ದೆಹಲಿ, ಗುರುಗ್ರಾಮ್, ಫಾರುಖ್‌ನಗರ, ಕೊಸ್ಲಿ, ಮನೇಸರ್, ಸೊಹ್ನಾ, ಫರಿದಾಬಾದ್, ಭಿವಾಡಿ, ರೇವಾರಿ, ಬಾವಲ್, ಬಲ್ಲಾಬ್‌ಗ್ರಾ, ನುಹ್, ಟಿಜಾರಾದ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ" ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.