ನವದೆಹಲಿ : ರೈತ ಚಳವಳಿಯ ಬಗ್ಗೆ ಟ್ವೀಟ್ ಮಾಡಿದಕ್ಕಾಗಿ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪರಿಸರ ಹೋರಾಟದ ಮೂಲಕ ಗ್ರೇಟಾ ಥನ್ಬರ್ಗ್ ಸಣ್ಣ ವಯಸ್ಸಿನಲ್ಲೇ ಪ್ರಖ್ಯಾತಿ ಗಳಿಸಿದವರು. ಜನವರಿ 3, 2003 ರಂದು ಸ್ವೀಡನ್ನಲ್ಲಿ ಜನಿಸಿದ ಗ್ರೇಟಾ, ಈಗಾಗಲೇ ವಿಶ್ವ ಸಂಸ್ಥೆ ಸೇರಿದಂತೆ ಹಲವು ದೊಡ್ಡ ದೊಡ್ಡ ಜಾಗತಿಕ ವೇದಿಕೆಗಳಲ್ಲಿ ಭಾಷಣ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯರಾಗಿರುವ ಗ್ರೇಟಾ, ಈ ಹಿಂದೆ ಹಲವು ದೇಶಗಳ ಹೋರಾಟಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಜಾಗತಿಕ ತಾಪಮಾನದ ಬಗ್ಗೆ ಗ್ರೇಟಾ ಮಾಡಿದ ಭಾಷಣ ಜಾಗತಿಕ ನಾಯಕ ಗಮನ ಸೆಳೆದಿತ್ತು. ವಿಶ್ವ ಸಂಸ್ಥೆ ಈ ನಿಟ್ಟಿನಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಿದೆ.
ಭಾರತದಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಬೆಂಬಲಿಸಿ, ಕಳೆದ ಬುಧವಾರ ಗ್ರೇಟಾ ಟ್ವೀಟ್ ಮಾಡಿದ್ದರು. ಇದಕ್ಕೆ , ದೇಶ ವಿದೇಶಗಳಿಂದ ಬಹುದೊಡ್ಡ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈ ಟ್ವೀಟ್ಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಗ್ರೇಟಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
-
I still #StandWithFarmers and support their peaceful protest.
— Greta Thunberg (@GretaThunberg) February 4, 2021 " class="align-text-top noRightClick twitterSection" data="
No amount of hate, threats or violations of human rights will ever change that. #FarmersProtest
">I still #StandWithFarmers and support their peaceful protest.
— Greta Thunberg (@GretaThunberg) February 4, 2021
No amount of hate, threats or violations of human rights will ever change that. #FarmersProtestI still #StandWithFarmers and support their peaceful protest.
— Greta Thunberg (@GretaThunberg) February 4, 2021
No amount of hate, threats or violations of human rights will ever change that. #FarmersProtest
ಈ ಕುರಿತು ಪ್ರತಿಕ್ರಿಯಿಸಿರುವ ಗ್ರೇಟಾ, ನಾನು ಈಗಲೂ ಕೂಡ ರೈತರ ಹೋರಾಟದೊಂದಿಗೆ ಇದ್ದೇನೆ, ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯು ಅದನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.