ಹರಿಯಾಣ/ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ, ಪಂಜಾಬ್ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದು, ಪರಿಣಾಮ ವಧು-ವರ ಇದ್ದ ಕಾರೊಂದು ನಡುರಸ್ತೆಯಲ್ಲೇ ಸಿಲುಕಿದ್ದ ದೃಶ್ಯ ಕಂಡುಬಂದಿತು.
ಸಿಂಘು ಗಡಿಯಲ್ಲಿ (ದೆಹಲಿ - ಹರಿಯಾಣ ಗಡಿ ಪ್ರದೇಶ) ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆಗಟ್ಟಲೆ ವಧುವರರು ಸಿಲುಕಿದ್ದರು. ದೆಹಲಿಯ ನರೇಲಾ ಮೂಲಕ ಪಾಣಿಪತ್‌ಗೆ ಬರುತ್ತಿದ್ದರು.
ಇನ್ನು ಇಂದು ಬೆಳಗ್ಗೆಯಿಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದರು, ದೆಹಲಿಗೆ ತೆರಳದಂತೆ ತಡೆದಿದ್ದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾನಿರತ ರೈತರು ಪೊಲೀಸರ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು.