ಕಣ್ಣೂರು: ಮೂರು ತಿಂಗಳಿದ್ದಾಗ ಕೋವಿಡ್‌ಗೆ ತುತ್ತಾಗಿ ಬಳಲುತ್ತಿದ್ದ ಗರ್ಭಿಣಿ, ರೋಗದಿಂದ ಚೇತರಿಸಿಕೊಂಡಿದ್ದು, ಆರೋಗ್ಯವಂತ ಅವಳಿ ಗಂಡು ಶಿಶುಗಳಿಗೆ ಶನಿವಾರ ಕಣ್ಣೂರು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.
ಪೆರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ಅಜಿನ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಹೆರಿಗೆ ಮಾಡಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಆಸ್ಪತ್ರೆಯಲ್ಲಿ ನಡೆಸುತ್ತಿರುವ 14ನೇ ಸಿ ವಿಭಾಗದ ಶಸ್ತ್ರಚಿಕಿತ್ಸೆ ಇದಾಗಿದೆ.
2.25 ಹಾಗು 2.35 ಕೆ.ಜಿ ತೂಕ ಹೊಂದಿರುವ ಶಿಶುಗಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಜುಲೈ ತಿಂಗಳಲ್ಲಿ ಆಸ್ಪತ್ರೆಯಲ್ಲಿ ಪ್ರಸೂತಿ ಚಿಕಿತ್ಸೆಯನ್ನು ಬಯಸಿದ್ದ ಮಹಿಳೆ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ತಂತ್ರದ ಮೂಲಕ ಗರ್ಭ ಧರಿಸಿದ್ದಳು.
ಈವರೆಗೆ ಪರಿಯಾರಂ ಆಸ್ಪತ್ರೆಯಲ್ಲಿ 50 ಯಶಸ್ವಿ ಹೆರಿಗೆ ಮಾಡಿಸಲಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕೇರಳದಲ್ಲಿಯೇ ಅತಿ ಹೆಚ್ಚು ಹೆರಿಗೆ ಮಾಡಿಸಿದ ಕೀರ್ತಿ ಕಣ್ಣೂರು ಪೆರಿಯಾರಂ ಆಸ್ಪತ್ರೆಗೆ ಸಲ್ಲುತ್ತದೆ.