ETV Bharat / bharat

ರೈಲ್ವೆ ಇಲಾಖೆಯಿಂದ 50,000 ಲೀ. ನೀರಿನ ಬಾಟಲ್, 20 ಲಕ್ಷ ಆಹಾರ ಪೊಟ್ಟಣ ವಿತರಣೆ

ಕೋವಿಡ್​-19 ವಿರುದ್ಧ ಹೋರಾಟದಲ್ಲಿ ಬೀದಿಗಿಳಿದಿರುವ ದೆಹಲಿ ಪೊಲೀಸ್ ಸಿಬ್ಬಂದಿಗೆ ದಿನಕ್ಕೆ 10,000 ನೀರಿನ ಬಾಟಲಿಗಳನ್ನು ನೀಡಲು ಆರಂಭಿಸಿದ್ದೇವೆ. ಇಲ್ಲಿಯವರೆಗೆ 50,000 ನೀರಿನ ಬಾಟಲ್ ನೀಡಲಾಗಿದೆ. ಲಾಕ್​ಡೌನ್ ಸಮಯದಲ್ಲಿ 2 ಮಿಲಿಯನ್ ಊಟದ ಪೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

Indian Railway
ಭಾರತೀಯ ರೈಲ್ವೆ
author img

By

Published : Apr 21, 2020, 11:56 PM IST

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿ ಪೊಲೀಸರ ಪರವಾಗಿ ನಿಂತಿರುವ ಭಾರತೀಯ ರೈಲ್ವೆ ಇಲಾಖೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ 10,000 ನೀರಿನ ಬಾಟಲ್​ ಒದಗಿಸುವ ವ್ಯವಸ್ಥೆ ಮಾಡುತ್ತಿದೆ.

ಭಾರತೀಯ ರೈಲ್ವೆ ತನ್ನ ಪಿಎಸ್‌ಯು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ನೆರವಿನಿಂದ ದೆಹಲಿಯಲ್ಲಿ ಏಪ್ರಿಲ್ 16ರಿಂದ ದಿನಕ್ಕೆ 10,000 ರೈಲ್ ನೀರಿನ ಬಾಟಲಿಗಳನ್ನು ಉಚಿತವಾಗಿ ವಿತರಿಸಲು ಆರಂಭಿಸಿದೆ.

ಬೇಸಿಗೆಯಲ್ಲಿ ಬಿಸಿಯಾದ ವಾತಾವರಣ ಬೇಸರದ ಪರಿಸ್ಥಿತಿಗಳನ್ನು ಉಂಟುಮಾಡುತ್ತದೆ. ಪೊಲೀಸ್ ಸಿಬ್ಬಂದಿ ಗಡಿಯಾರದ ಮುಳ್ಳಿನಂತೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತಹ ಸವಾಲಿನ ವೇಳಯಲ್ಲಿ ವಿವಿಧ ಸ್ಥಳಗಳಲ್ಲಿ ವೈದ್ಯರು ಮತ್ತು ಅರೆವೈದ್ಯರ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ಹೇಳಿದೆ.

ಕೋವಿಡ್​-19 ವಿರುದ್ಧ ಹೋರಾಟದಲ್ಲಿ ಬೀದಿಗಿಳಿದಿರುವ ದೆಹಲಿ ಪೊಲೀಸ್ ಸಿಬ್ಬಂದಿಗೆ ದಿನಕ್ಕೆ 10,000 ನೀರಿನ ಬಾಟಲಿಗಳನ್ನು ನೀಡಲು ಆರಂಭಿಸಿದ್ದೇವೆ. ಇಲ್ಲಿಯವರೆಗೆ 50,000 ನೀರಿನ ಬಾಟಲ್ ನೀಡಲಾಗಿದೆ ಎಂದು ಹೇಳಿದೆ.

ಭಾರತೀಯ ರೈಲ್ವೆಯು ದೇಶವ್ಯಾಪಿ ಲಾಕ್​ಡೌನ್ ಸಮಯದಲ್ಲಿ 2 ಮಿಲಿಯನ್ ಊಟದ ಪೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದಿದೆ.

ಉಪಾರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವಿಟ್ಟರ್​ ಮುಖಾಂತರ ರೈಲ್ವೆ ಇಲಾಖೆಯ ನಡೆಯನ್ನು ಶ್ಲಾಘಿಸಿದರು, "ಲಾಕ್‌ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ 2 ಮಿಲಿಯನ್ ಉಚಿತ ಬಿಸಿ ಊಟದ ಪೊಟ್ಟಣ ವಿತರಿಸಿದ ಭಾರತೀಯ ರೈಲ್ವೆಗೆ ಅಭಿನಂದನೆಗಳು. ಈ ಪ್ರಶಂಸನೀಯ ಸೇವೆಯು ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಶ್ರಮಿಕರು, ಮಕ್ಕಳು, ಮನೆಯಿಲ್ಲದವರು ಮತ್ತು ಬಡವರಿಗೆ ಸಹಾಯಕವಾಗಿದೆ" ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.