ETV Bharat / bharat

ಕೊರೊನಾದಿಂದ ನಿತ್ಯ 5 ವರ್ಷದೊಳಗಿನ 6,000 ಮಕ್ಕಳ ಸಾವು: ಎಚ್ಚರಿಕೆ ನೀಡಿದ ಯುನಿಸೆಫ್

ಕೊರೊನಾ ವೈರಾಣು ಎಂಬ ಮಹಾಮಾರಿಯ ದಾಳಿ ಐದನೇ ತಿಂಗಳಿಗೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ, ಯುನಿಸೆಫ್, ‘ ಆರೋಗ್ಯ ಬಿಕ್ಕಟ್ಟು ಎಂಬುದು ಶೀಘ್ರದಲ್ಲಿಯೇ ಮಕ್ಕಳ ಹಕ್ಕುಗಳ ಬಿಕ್ಕಟ್ಟಾಗಿ ಪರಿಣಮಿಸಲಿದೆ ‘ ಎಂದು ಹೇಳಿದೆ. ತುರ್ತುಕ್ರಮ ಕೈಗೊಳ್ಳದೇ ಹೋದಲ್ಲಿ ಐದು ವರ್ಷದೊಳಗಿನ 6,000 ಮಕ್ಕಳು ನಿತ್ಯ ಮರಣ ಹೊಂದಬಹುದು ಎಂದು ಅದು ಕಳವಳ ವ್ಯಕ್ತಪಡಿಸಿದೆ.

UNICEF
ಕೋವಿಡ್ – 19
author img

By

Published : May 15, 2020, 5:19 PM IST

ಹೈದರಾಬಾದ್: ಕೊರೊನಾ ವೈರಸ್ ಕಬಂಧಬಾಹು ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ಆರೋಗ್ಯ ವ್ಯವಸ್ಥೆ ಮತ್ತು ದೈನಂದಿನ ಸೇವೆ ದುರ್ಬಲಗೊಳ್ಳುತ್ತಿದೆ ಮತ್ತು ಅಡೆತಡೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳಲ್ಲಿ ತಡೆಗಟ್ಟಬಹುದಾದ ಅವಕಾಶಗಳು ಇದ್ದರೂ ನಿತ್ಯ ಹೆಚ್ಚುವರಿಯಾಗಿ 6,000 ಮಕ್ಕಳು ಸಾವಿಗೆ ತುತ್ತಾಗಬಹುದು ಎಂದು ವಿಶ್ವಸಂಸ್ಥೆ ಮಕ್ಕಳ ತುರ್ತುನಿಧಿ ( ಯುನಿಸೆಫ್ ) ಎಚ್ಚರಿಕೆ ನೀಡಿದೆ.

ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಪತ್ರಿಕೆಯಲ್ಲಿ ಬುಧವಾರ ಪ್ರಕಟವಾದ ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಸಂಶೋಧಕರ ವಿಶ್ಲೇಷಣೆಯಂತೆ ಮುಂದಿನ ಆರು ತಿಂಗಳಲ್ಲಿ ತಡೆಗಟ್ಟಬಹುದಾದ ಅವಕಾಶಗಳು ಇದ್ದರೂ ನಿತ್ಯ ಹೆಚ್ಚುವರಿಯಾಗಿ 6,000 ಮಕ್ಕಳು ಸಾವಿಗೆ ತುತ್ತಾಗಬಹುದು. 118 ಕೆಳ ಮತ್ತು ಮಧ್ಯಮ – ಆದಾಯ ಹೊಂದಿದ ಅಂತಾರಾಷ್ಟ್ರೀಯ ಸ್ಥಳಗಳಲ್ಲಿನ ಮೂರು ಅತಿ ಕೆಟ್ಟ ಸಂಭವನೀಯತೆಗಳನ್ನು ಇದು ಆಧರಿಸಿದೆ ಎಂದು ಯುನಿಸೆಫ್ ಹೇಳಿದೆ. ನಿತ್ಯ ದೊರೆಯುತ್ತಿದ್ದ ಆರೋಗ್ಯ ಸೇವೆಗಳ ಸಂರಕ್ಷಣೆಯಲ್ಲಿ ಉಂಟಾಗುವ ಕುಸಿತ ಮತ್ತು ಮಕ್ಕಳನ್ನು ಕಳೆದುಕೊಳ್ಳುವ ಪ್ರಮಾಣ ಹೆಚ್ಚುವುದರಿಂದಾಗಿ ಕೇವಲ ಮುಂದಿನ ಆರು ತಿಂಗಳುಗಳಲ್ಲಿ ಐದು ವರ್ಷದ ಒಳಗಿನ 1.2 ದಶಲಕ್ಷದಷ್ಟು ಮಕ್ಕಳು ಸಾವಿಗೆ ತುತ್ತಾಗಬಹುದು ಎನ್ನಲಾಗಿದೆ, ( ಆಕರ: ಗರ್ಭಿಣಿ ಅಮ್ಮಂದಿರು, ಆರೋಗ್ಯ ವ್ಯವಸ್ಥೆಯಿಂದ ಬೆದರಿಕೆಗೆ ಒಳಗಾದ ಶಿಶುಗಳು ).

‘ಕೋವಿಡ್ – 19 ದುರಂತದಿಂದಾಗಿ ಶಿಶು ಹಕ್ಕುಗಳಿಗೆ ದೊಡ್ಡ ವಿಪತ್ತು ಒದಗಿಬರಲಿದೆ ‘ ಎಂದು ಯುನಿಸೆಫ್ ಕೆನಡಾ ಘಟಕದ ಅಧ್ಯಕ್ಷ ಮತ್ತು ಸಿ ಇ ಒ ಡೇವಿಡ್ ಮೊರ್ಲೆ ಹೇಳಿದ್ದಾರೆ. ಮಕ್ಕಳು ವೈರಸ್‌ನಿಂದ ನೇರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಆದರೂ, ಅವರು ಗುಪ್ತ ಬಲಿಪಶುಗಳಾಗುವ ಸಂಭವ ಹೆಚ್ಚು ಇದೆ. ಸಾಂಕ್ರಾಮಿಕ ರೋಗದ ಕ್ಷಿಪ್ರ, ಮಧ್ಯಮ ಹಾಗೂ ದೀರ್ಘಕಾಲೀನ ಪರಿಣಾಮಗಳಿಂದ ಅವರ ಬಾಲ್ಯ ನಿರಂತರ ಬದಲಾವಣೆಗೆ ಒಳಪಡುವುದು ಇದಕ್ಕೆ ಕಾರಣ. ಈಗಾಗಲೇ ಸಂಶೋಧನೆಯಲ್ಲಿ ಸೇರ್ಪಡೆಗೊಂಡಿರುವ 118 ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಇನ್ನು ಆರೇ ತಿಂಗಳಲ್ಲಿ ತಮ್ಮ ಐದನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲೇ ಪ್ರಾಣ ಬಿಡುವ 2.5 ದಶಲಕ್ಷ ಮಕ್ಕಳ ಸಾಲಿಗೆ ಈ ಸಂಭಾವ್ಯ ಮಕ್ಕಳ ಸಾವುಗಳು ಕೂಡ ಸೇರಿವೆ.

ತಡೆಗಟ್ಟಬಹುದಾದ ಅವಕಾಶಗಳಿದ್ದರೂ ಸಂಭವಿಸುತ್ತಿದ್ದ ಐದು ವರ್ಷದೊಳಗಿನ ಮಕ್ಕಳ ಮರಣಕ್ಕೆ ಇತಿಶ್ರೀ ಹಾಡಲು ನಡೆಯುತ್ತಿದ್ದ ಯತ್ನದಲ್ಲಿ ಒಂದು ದಶಕದಿಂದಲೂ ಪ್ರಗತಿ ಕಂಡುಬಂದಿತ್ತು. ಆದರೆ, ಕೋವಿಡ್ ಅಟ್ಟಹಾಸ ಈ ಪ್ರಗತಿಗೆ ಅಡ್ಡಗಾಲು ಹಾಕುವ ಭೀತಿ ಇದೆ. ಯುನಿಸೆಪ್​​​​​ ಸರ್ಕಾರಿ ನಿರ್ದೇಶಕರಾದ ಹೆನ್ರಿಯೆಟಾ ಫೋರ್ ಅವರ ಪ್ರಕಾರ ಕೆಟ್ಟ ಪರಿಸ್ಥಿತಿಯಡಿ ವಿಶ್ವದ ಎಲ್ಲೆಡೆ ಹಲವು ಮಕ್ಕಳು ತಮ್ಮ ಐದನೇ ಜನ್ಮದಿನಕ್ಕೂ ಮೊದಲೇ ಸಾಯುತ್ತಿದ್ದು, ಇದನ್ನು ತಡೆಯಲು ಅನೇಕ ವರ್ಷಗಳೇ ಬೇಕಾಗಬಹುದು ಎಂದಿದ್ದಾರೆ. "ವೈರಸ್ ವಿರುದ್ಧದ ಹೋರಾಟದಲ್ಲಿ ತಾಯಂದಿರು ಮತ್ತು ಮಕ್ಕಳನ್ನು ಕಳೆದುಕೊಳ್ಳಲು ನಾವು ಬಿಡಬಾರದು ಮತ್ತು ಮಕ್ಕಳ ಸಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ನಾವು ಸಾಧಿಸಿರುವ ಪ್ರಗತಿಯನ್ನು ಕೈ ಚೆಲ್ಲಬಾರದು ಮತ್ತು ತಾಯಂದಿರ ಸಾವಿನ ದರದಲ್ಲಿ ಪಲ್ಲಟಗಳಾಗದಂತೆ ನೋಡಿಕೊಳ್ಳಬೇಕಿದೆ "ಎಂದು ಅವರು ಹೇಳಿದ್ದಾರೆ.

ಅನೇಕ ಸಂದರ್ಭಗಳಲ್ಲಿ, ನಿರಾಶ್ರಿತರು, ವಲಸಿಗರು ಹಾಗೂ ಆಂತರಿಕವಾಗಿ ಚದುರಿಹೋದ ಮಕ್ಕಳು ಕ್ಸೆನೋಫೋಬಿಯಾ (ಅಪರಿಚಿತರನ್ನು ಕಂಡರೆ ಭಯಗೊಳ್ಳುವ ಮಾನಸಿಕ ಕಾಯಿಲೆ ) ಮತ್ತು ತಾರತಮ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದು, ಅವರನ್ನು ರಕ್ಷಿಸುವ ಮತ್ತು ಅವರಿಗಾಗಿ ಸೇವೆ ಸಲ್ಲಿಸುವ ಕೆಲಸ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಯುನಿಸೆಫ್ ಬೊಟ್ಟು ಮಾಡಿದೆ. ಶಾಲೆಗಳನ್ನು ಮುಚ್ಚಿರುವುದು ಮತ್ತು ಬಳಿಕ ಘಟಿಸಿದ ಪ್ರತ್ಯೇಕತೆಯಿಂದಾಗಿ (ಕ್ವಾರಂಟೈನ್) ಈಗಾಗಲೇ ಹೆಚ್ಚಿನ ಮಟ್ಟದ ಒತ್ತಡ ಉಂಟಾಗಿದೆ.

ವಿಶೇಷವಾಗಿ ದುರ್ಬಲ ವರ್ಗದ ಮಕ್ಕಳಲ್ಲಿ ನಿರ್ಬಂಧಿತ ಚಲನೆಯಿಂದ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಅದು ಸೃಷ್ಟಿಸುವ ಮಾನಸಿಕ- ಸಾಮಾಜಿಕ ಪರಿಣಾಮಗಳು ತೀವ್ರ ಒತ್ತಡ ಹೇರುವ ಸಾಧ್ಯತೆ ಇದೆ, ಮಕ್ಕಳು, ಮಹಿಳೆಯರು ಹಾಗೂ ದುರ್ಬಲ ವರ್ಗಕ್ಕೆ ರೋಗ ಹರಡುವಿಕೆ ತಡೆಯಲು ಮತ್ತು ಅದು ಉಂಟು ಮಾಡಲಿರುವ ಒಟ್ಟು ಪರಿಣಾಮಗಳನ್ನು ಕಡಿಮೆ ಮಾಡಲು ಯುನಿಸೆಫ್ ಶ್ರಮಿಸುತ್ತಿದೆ. ಆರೋಗ್ಯ, ಪೋಷಣೆ, ನೀರು ಮತ್ತು ನೈರ್ಮಲ್ಯ, ಶಿಕ್ಷಣ ಮತ್ತು ರಕ್ಷಣೆ ಈ ಸಮುದಾಯಗಳಿಗೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಅದು ವಿಶೇಷ ಗಮನ ಹರಿಸಿದೆ. ವಿಶ್ವಸಂಸ್ಥೆಯ ಅಂಗವಾಗಿರುವ ಯುನಿಸೆಫ್ ಇಲ್ಲಿಯವರೆಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಲು 5,215 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತ ಪಡೆದಿದೆ. ಹೆಚ್ಚುವರಿ ಹಣವು ಈಗಾಗಲೇ ಸಾಧಿಸಿದ ಫಲಿತಾಂಶಗಳ ಮೇಲೆ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಕೈ ತೊಳೆಯುವುದು, ಕೆಮ್ಮು ಮತ್ತು ಸೀನು ತಡೆಯುವುದು ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಕೋವಿಡ್ – 19 ತಡೆಗಟ್ಟುವ ಯುನಿಸೆಫ್ ಸಂದೇಶ 167 ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. 12 ದಶಲಕ್ಷಕ್ಕೂ ಹೆಚ್ಚು ಜನರು ಯುನಿಸೆಫ್ ಒದಗಿಸುವ ನಿರ್ಣಾಯಕ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ ಪೂರೈಕೆ ಸೌಲಭ್ಯಗಳನ್ನು ಪಡೆದಿದ್ದಾರೆ. ದೂರಶಿಕ್ಷಣ ಅಥವಾ ಗೃಹಾಧಾರಿತ ಕಲಿಕೆಯ ಲಾಭ ಪಡೆದ ಮಕ್ಕಳ ಸಂಖ್ಯೆ ಸುಮಾರು 80 ದಶಲಕ್ಷ. ಯುನಿಸೆಫ್ 52 ದೇಶಗಳಿಗೆ, 6.6 ದಶಲಕ್ಷಕ್ಕೂ ಹೆಚ್ಚು ಕೈಗವಸುಗಳು, 1.3 ಮಿಲಿಯನ್ ಶಸ್ತ್ರಚಿಕಿತ್ಸಾ ಮುಖಗವಸುಗಳು, 4,28,000 ಎನ್ - 95 ಮುಖಗವಸುಗಳು ಹಾಗೂ 34,500 ಕೋವಿಡ್ - 19 ರೋಗನಿರ್ಣಯ ಪರೀಕ್ಷಾ ಕಿಟ್ ಮತ್ತಿತರ ಪೂರಕ ವಸ್ತುಗಳನ್ನು ರವಾನಿಸಿದೆ.

10.9 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಮಹಿಳೆಯರಿಗೆ ಇದು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಿದೆ ಮತ್ತು 8,30,000 ಕ್ಕೂ ಹೆಚ್ಚು ಮಕ್ಕಳು, ಪೋಷಕರು ಮತ್ತು ಪಾಲನೆ ಮಾಡುವವರಿಗೆ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸಾಮಾಜಿಕ ಬೆಂಬಲ ಒದಗಿಸಿದೆ ಎಂಬುದು ಉಲ್ಲೇಖಾರ್ಹ ಸಂಗತಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.