ನವದೆಹಲಿ: ಈ ಬಾರಿಯ ಬುದ್ದ ಪೂರ್ಣಿಮ ದಿನವೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ವಿಶಿಷ್ಷವಾಗಿ ನಡೆಯಲಿದೆ.
ಮಹಾ ಮಾರಿ ಕೊರೊನಾ ಜಗತ್ತನ್ನು ಆವರಿಸಿರುವ ಹಿನ್ನೆಲೆ, ಈ ವರ್ಷದ ಬುದ್ದ ಪೂರ್ಣಿಮೆಯನ್ನು "ವರ್ಚುವಲ್ ವಿಸಾಕ್" ದಿನವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.
ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಸೇರಿ ಕೋವಿಡ್ ಹೋರಾಟದಲ್ಲಿ ತೊಡಗಿರುವ ಎಲ್ಲಾ ವಾರಿಯರ್ಸ್ಗೆ ಗೌರವ ಸಲ್ಲಿಸುವ ಸಲುವಾಗಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ (ಐಬಿಸಿ) ಸಹಯೋಗದೊಂದಿಗೆ ಸಂಸ್ಕೃತಿ ಸಚಿವಾಲಯ ವರ್ಚುವಲ್ ಪ್ರಾರ್ಥನಾ ಸಂಗಮ ಆಯೋಜಿಸಿದ್ದು, ವಿಶ್ವದ ಎಲ್ಲಾ ಪ್ರಮುಖ ಬೌದ್ದ ಸಂಘಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಾರ್ಥನಾ ಸಂಗಮದಲ್ಲಿ ನೇಪಾಳದ ಲುಂಬಿನಿ ಉದ್ಯಾನ, ಬೋಧಗಯಾದ ಮಹಾಬೋಧಿ ದೇವಸ್ಥಾನ, ಸಾರನಾಥದ ಮುಲ್ಗಂಧಾ ಕುಟಿ ವಿಹಾರ, ಖುಷಿ ನಗರದ ಪರಿನಿರ್ವಾಣ ಸ್ತೂಪ, ರುವಾನ್ವೇಲಿ ಮಹಾ ಸೆಯಾ, ಶ್ರೀಲಂಕಾದ ಐತಿಹಾಸಿಕ ಅನುರಾಧಪುರ ಸ್ತೂಪ ಆವರಣ ಮತ್ತು ಇತರ ಜನಪ್ರಿಯ ಬೌದ್ಧ ತಾಣಗಳಿಂದ ನೇರ ಪ್ರಸಾರ ನಡೆಯಲಿದೆ.
ವರ್ಚುವಲ್ ಪ್ರಾರ್ಥನಾ ಸಂಗಮ ಬೆಳಗ್ಗೆ 6.30 ಕ್ಕೆ ಪ್ರಾರಂಭಗೊಂಡು ಸಂಜೆ 7.45 ರವರೆಗೆ ನಡೆಯಲಿದೆ.