ತಿರುವನಂತಪುರಂ: ಅವಶ್ಯಕತೆಯು ಆವಿಷ್ಕಾರದ ತಾಯಿ ಎಂಬ ಹಳೆಯ ಮಾತಿದೆ. ಹಾಗಾಗಿ ಶಿಕ್ಷಣಕ್ಕಾಗಿ ಕೇರಳ ಮೂಲಸೌಕರ್ಯ ಮತ್ತು ತಂತ್ರಜ್ಞಾನ (ಕೈಟ್) ( Kerala Infrastructure and Technology for Education) ಶನಿವಾರ ರಾಜ್ಯದ 81,000 ಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರಿಗೆ ಆನ್‌ಲೈನ್‌ನಲ್ಲಿ ನಿರ್ದಿಷ್ಟ ಐಟಿ ತರಬೇತಿಯನ್ನು ನೀಡಲು ನಿರ್ಧರಿಸಿದೆ.
ಸಂಪೂರ್ಣ ಡಿಜಿಟಲ್ ಕಾರ್ಯವಿಧಾನವನ್ನು ಬಳಸಿಕೊಂಡು ಶಿಕ್ಷಕರಿಗೆ ನಿರ್ದಿಷ್ಟ ತರಬೇತಿಯನ್ನು ಅಲ್ಪಾವಧಿಯಲ್ಲಿಯೇ ನಡೆಸುತ್ತಿರುವುದು ಭಾರತದಲ್ಲಿ ಇದೇ ಮೊದಲು.1000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮೂರು ಬ್ಯಾಚ್ಗಳನ್ನ ಮಾಡಿ ಈ ತರಬೇತಿ ನೀಡಲು ಯೋಜಿಸಿದ್ದಾರೆ. ಪ್ರತಿ ಕೇಂದ್ರದಲ್ಲಿ 25 ಶಿಕ್ಷಕರು ಮತ್ತು ಇಬ್ಬರು ತರಬೇತುದಾರರು ಇದ್ದಾರೆ ಎಂದು ಕೈಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಅನ್ವರ್ ಸದಾತ್ ತಿಳಿಸಿದ್ದಾರೆ.
"ಆದರೆ COVID-19 ಪ್ರೋಟೋಕಾಲ್‌ಗಳ ಕಾರಣದಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಈಗ ಮುಚ್ಚಲಾಗಿದ್ದು, ಆನ್‌ಲೈನ್ ಮೂಲಕವೇ ಶಾಲೆಗಳಲ್ಲಿನ ಎಲ್ಲ ಹೈಟೆಕ್ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಐದು ದಿನಗಳಲ್ಲಿ ತರಬೇತಿ ಪೂರ್ಣಗೊಳ್ಳುತ್ತದೆ" ಎಂದು ಸದಾತ್ ಹೇಳಿದರು.
ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದರೂ, ಸಿಬ್ಬಂದಿ ಶಾಲೆಗೆ ಬರಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.