ETV Bharat / bharat

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ ವಿದ್ಯಾರ್ಥಿಗಳ ಮೇಲೆ ಸುಳ್ಳು ಅತ್ಯಾಚಾರ ಆರೋಪ ; ಪೊಲೀಸರಿಗೆ ಕೋರ್ಟ್​ ತಪರಾಕಿ - Court reprimands cops for false rape allegation

ಅತ್ಯಾಚಾರದ ಪ್ರಸ್ತಾಪಕ್ಕೆ ಆಘಾತಕ್ಕೊಳಗಾದ ನ್ಯಾಯಾಧೀಶರು, ಆರೋಪಿ ವಿದ್ಯಾರ್ಥಿಗಳ ವಿರುದ್ಧ ಇಂತಹ ಸಂಬಂಧವಿಲ್ಲದ ಆರೋಪವನ್ನು ಹೇಗೆ ಉಲ್ಲೇಖಿಸಬಹುದು ಎಂದು ಪೊಲೀಸರನ್ನು ಪ್ರಶ್ನಿಸಿದರು.

ಪೊಲೀಸರ ವಿರುದ್ಧ ಕೋರ್ಟ್​ ಅಸಮಾಧಾನ
ಪೊಲೀಸರ ವಿರುದ್ಧ ಕೋರ್ಟ್​ ಅಸಮಾಧಾನ
author img

By

Published : Jan 24, 2021, 5:45 PM IST

ವಿಜಯವಾಡ : ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ ಐವರು ತೆಲುಗುನಾಡು ವಿದ್ಯಾರ್ಥಿ ಒಕ್ಕೂಟದ (ಟಿಎನ್‌ಎಸ್‌ಎಫ್) ಕಾರ್ಯಕರ್ತರನ್ನು ಪತ್ತೆ ಹಚ್ಚಿ ತಡೆಪಲ್ಲಿ ಪೊಲೀಸರು ಮಾಡಿದ ಪ್ರಮಾದದ ಬಗ್ಗೆ ಮಂಗಳಗರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಶನಿವಾರ ಆಘಾತ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ರಿಮಾಂಡ್ ವರದಿಯ ಮೂಲಕ ಬಂಧನದ ಕಾರಣವನ್ನು ಸಿಎಂ ಅವರ ನಿವಾಸದ ಬಳಿ 'ಕಾನೂನುಬಾಹಿರ ಸಭೆ' ಎಂದು ಹೇಳಲಾಗಿದ್ದರೆ, ವರದಿಯ ಮುಕ್ತಾಯದ ಭಾಗದಲ್ಲಿ ಅತ್ಯಾಚಾರದ ಪ್ರಸ್ತಾಪವಿದ್ದು, ಇದಕ್ಕೆ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ.

ಅತ್ಯಾಚಾರದ ಪ್ರಸ್ತಾಪಕ್ಕೆ ಆಘಾತಕ್ಕೊಳಗಾದ ನ್ಯಾಯಾಧೀಶರು, ಆರೋಪಿ ವಿದ್ಯಾರ್ಥಿಗಳ ವಿರುದ್ಧ ಇಂತಹ ಸಂಬಂಧವಿಲ್ಲದ ಆರೋಪವನ್ನು ಹೇಗೆ ಉಲ್ಲೇಖಿಸಬಹುದು ಎಂದು ಪೊಲೀಸರನ್ನು ಪ್ರಶ್ನಿಸಿದರು.

ಇದಕ್ಕೆ ಪೊಲೀಸರು, ರಿಮಾಂಡ್ ವರದಿಯನ್ನು ಪರಿಷ್ಕರಿಸಿ ಹೊಸ ವರದಿಯನ್ನು ಕೂಡಲೇ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಬಳಿಕ ಹೊಸ ರಿಮಾಂಡ್ ವರದಿಯ ಆಧಾರದ ಮೇಲೆ ಐವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ರಿಮಾಂಡ್‌ಗೆ ಕಳುಹಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.