ಗುಂಟೂರು (ಆಂಧ್ರ ಪ್ರದೇಶ) : ಗುಂಟೂರು ಜಿಲ್ಲೆ ತೆನಾಲಿಯ ಜೋಡಿಯೊಂದು ಮೂರು ಧರ್ಮಗಳ ಸಂಪ್ರದಾಯ ಪ್ರಕಾರ ವಿವಾಹವಾಗಿ ಗಮನ ಸೆಳೆದಿದೆ.
ತೆನಾಲಿಯ ದಿಲೀಪ್ ಕುಮಾರ್ ಪುಲಿವರ್ತಿ ಮತ್ತು ಹೈದರಾಬಾದ್‌ನ ಕಮಲಾಬಾಯ್ ವಿಶಿಷ್ಟವಾಗಿ ವಿವಾಹವಾಗಿರುವ ವಧು- ವರರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವರ ದಿಲೀಪ್ ಹೈದರಾಬಾದ್‌ನಲ್ಲಿ ಏರೋಫಾಲ್ಕನ್ ಏವಿಯೇಷನ್ ಕಂಪನಿಯನ್ನು ನಡೆಸುತ್ತಿದ್ದಾರೆ. ಅಪರೂಪದ ವಿವಾಹ ಸಮಾರಂಭ ನವೆಂಬರ್ 21 ರಂದು ತೆನಾಲಿಯ ಗೌತಮ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆದಿದೆ.
ನ. 21 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕ್ರಿಶ್ಚಿಯನ್ ಪಾದ್ರಿ ಸಮ್ಮುಖದಲ್ಲಿ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯ ಪ್ರಕಾರ ಮದುವೆ ನಡೆಯಿತು. ಬಳಿಕ ಸಂಜೆ, ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಇಸ್ಲಾಂ ಧರ್ಮದ ಸಂಪ್ರದಾಯ ಪ್ರಕಾರ ಜೋಡಿ ವಿವಾಹವಾದರು. ಬಳಿಕ ವರ ಹಿಂದೂ ಸಂಪ್ರದಾಯ ಪ್ರಕಾರ ವಧುವಿಗೆ ತಾಳಿ ಕಟ್ಟಿದ. ಈ ಮೂಲಕ ವಿಶಿಷ್ಟ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಒಂದೇ ಜೋಡಿ ಮೂರು ಧರ್ಮಗಳ ಪ್ರಕಾರ ಮದುವೆಯಾಗಿರುವುದು ಅಪರೂಪಲ್ಲಿ ಅಪರೂಪ ಎಂದೇ ಹೇಳಬಹುದು.