ಭಾದೋಹಿ(ಉತ್ತರಪ್ರದೇಶ): ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದೆ. ದೇಶದ ಎಲ್ಲ ವರ್ಗದವರು ಮಹಾಮಾರಿ ಹೊಡೆದೋಡಿಸಲು ತಮ್ಮ ಕೈಲಾದಷ್ಟು ಧನ ಸಹಾಯ ಮಾಡುತ್ತಿದ್ದು, ರೈತರು ನೆರವಿನ ಹಸ್ತ ಚಾಚುತ್ತಿದ್ದಾರೆ.
ಉತ್ತರಪ್ರದೇಶದ ಭಾದೋಹಿ ಜಿಲ್ಲೆಯ ರೈತ ಸಾವನ್ನಪ್ಪಿದ ತಂದೆಯ ಪುಣ್ಯತಿಥಿ ನಡೆಸಲು ತೆಗೆದಿಟ್ಟಿದ್ದ ಲಕ್ಷ ರೂ ಹಣವನ್ನು ಕೊರೊನಾ ಹರಿಹಾರ ಕಾರ್ಯಕ್ಕೆ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಹಣ ನೀಡಿದ್ದಾಗಿ ರೈತ ರಾಜೇಶ್ ಮಿಶ್ರಾ ತಿಳಿಸಿದ್ದಾರೆ.
ಕಾರ್ಯಗಳಲ್ಲಿ 5ಕ್ಕಿಂತ ಹೆಚ್ಚು ಜನರು ಸೇರುವ ಹಾಗಿಲ್ಲ ಎಂದು ಈಗಾಗಲೇ ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ, ಅದಕ್ಕಾಗಿ ತೆಗೆದಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.
ಜಿಲ್ಲಾಧಿಕಾರಿಗೆ 1 ಲಕ್ಷ ರೂ ಚೆಕ್ ಹಸ್ತಾಂತರಿಸಿದ ರಾಜೇಶ್ ಮಿಶ್ರಾ ನಿರ್ಧಾರ ಜನಮೆಚ್ಚುಗೆ ಗಳಿಸಿದೆ.