ETV Bharat / bharat

ಮಹಾರಾಷ್ಟ್ರದಲ್ಲಿ ಕರ್ಫ್ಯೂ ಜಾರಿ​;ಕೊರೊನಾಗೆ ವಿಶ್ವಾದ್ಯಂತ 15 ಸಾವಿರ ಬಲಿ... ಏರುತ್ತಲೇ ಇದೆ ಸಾವಿನ ಸಂಖ್ಯೆ: LIVE

author img

By

Published : Mar 23, 2020, 5:01 PM IST

Updated : Mar 23, 2020, 5:40 PM IST

Coronavirus LIVE Updates
Coronavirus LIVE Updates

17:34 March 23

ಕೊರೊನಾಗೆ ವಿಶ್ವಾದ್ಯಂತ 15 ಸಾವಿರ ಬಲಿ... ಏರುತ್ತಲೇ ಇದೆ ಸಾವಿನ ಸಂಖ್ಯೆ

ಪ್ಯಾರಿಸ್​: ಮಹಾಮಾರಿ ಕೊರೊನಾಗೆ ವಿಶ್ವದಾದ್ಯಂತ ಬರೋಬ್ಬರಿ 15 ಸಾವಿರ ಮಂದಿ ಅಸುನೀಗಿದ್ದಾರೆ.  ಈ ಸಂಖ್ಯೆ ಏರುತ್ತಲೇ ಇದೆ.  ಭಾರತದಲ್ಲಿ ಇದುವರೆಗೂ 8 ಮಂದಿ ಮೃತಪಟ್ಟಿದ್ದಾರೆ.  ಸುಮಾರು 415 ಜನರಿಗೆ ಸೋಂಕು ತಗುಲಿದ್ದು, ಲಕ್ಷಾಂತರ ಜನ ಕೊರೊಂಟೈನ್​ ಮನೆಯಲ್ಲಿ ಬಂಧಿಯಾಗಿದ್ದಾರೆ.  

ಇನ್ನು ಜಾಗತಿಕವಾಗಿ ಕೋಟಿ ಕೋಟಿ ಮಂದಿ ಕೊರೊನಾ ಭೀತಿಯಿಂದ ಮನೆ ಬಿಟ್ಟು ಹೊರಗೆ ಬಾರದೆ ಒದ್ದಾಡುತ್ತಿದ್ದಾರೆ.  ಇನ್ನು ಸೋಂಕು ಹರಡಿಸಿದ ಚೀನಾದಲ್ಲಿ 3,270 ಜನ ಮೃತಪಟ್ಟರೆ, ಇಟಲಿಯಲ್ಲಿ ಸಾವಿನ ಸಂಖ್ಯೆ 5,476 ರನ್ನೂ ದಾಟಿ ಮುನ್ನುಗ್ಗುತ್ತಿದ್ದು, ಮರಣ ಮೃದಂಗವನ್ನೇ ಸೃಷ್ಟಿಸಿದೆ.  ಇನ್ನೊಂದೆಡೆ ಇಟಲಿ ಪಕ್ಕದ ಸ್ಪೇನ್​​ನಲ್ಲಿ 2182 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 

17:19 March 23

ನಾಳೆಯಿಂದ ಅಸ್ಸೋಂ ಬಂದ್​​​​

ಅಸ್ಸೋಂ ರಾಜ್ಯ ಸಹ ಕೊರೊನಾ ತಡೆಗಟ್ಟಲು ದಿಟ್ಟಕ್ರಮ ಕೈಗೊಂಡಿದೆ. ನಾಳೆ ಆರುಗಂಟೆಯಿಂದ ಮಾರ್ಚ್​ 31 ರವರೆಗೆ ರಾಜ್ಯವನ್ನ ಲಾಕ್​ಡೌನ್​ ಮಾಡುವ ನಿರ್ಧಾರ ಕೈಗೊಂಡಿದೆ.  ಈ ಬಗ್ಗೆ ಅಲ್ಲಿನ ಸಚಿವ ಹಿಮಂತ್ ಬಿಸ್ವಾಸ್​ ಮಾಹಿತಿ ನೀಡಿದ್ದಾರೆ. 

17:05 March 23

ಮಹಾರಾಷ್ಟ್ರದಲ್ಲಿ ಕರ್ಫ್ಯೂ ಜಾರಿ

ಕೊರೊನಾ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ.  ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಿಎಂ ಉದ್ದವ್​ ಠಾಕ್ರೆ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಎಲ್ಲ ಜಿಲ್ಲೆಗಳು ಲಾಕ್​ಡೌನ್​ ಆಗಲಿವೆ. 

16:49 March 23

19 ರಾಜ್ಯ ಸಂಪೂರ್ಣವಾಗಿ ಲಾಕ್​ ಡೌನ್​: ಮಹಾರಾಷ್ಟ್ರದಲ್ಲಿ ಕರ್ಫ್ಯೂ ಜಾರಿ

ನವದೆಹಲಿ: ಕೊರೋನಾ ವೈರಸ್​ ಮಟ್ಟ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದೀಗ ಮಧ್ಯರಾತ್ರಿಯಿಂದಲೇ ದೇಶೀಯ ವಿಮಾನ ಹಾರಾಟ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ. 

ಕೊರೋನಾವೈರಸ್ ನಿಂದಾಗಿ ದೇಶಾದ್ಯಂತ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ, ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ, ಮಾಲ್ ಗಳು, ಶಾಪ್ ಗಳನ್ನು ಈ ಮಾಸಾಂತ್ಯದವರೆಗೂ  ಸ್ಥಗಿತಗೊಳಿಸಲಾಗಿದ್ದು, ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. 

ಮಹಾಮಾರಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿರುವ 19 ರಾಜ್ಯಗಳನ್ನ ಸಂಪೂರ್ಣವಾಗಿ ಲಾಕ್​ ಡೌನ್​ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ ಇಲ್ಲಿಯವರೆಗೆ 415 ಕೇಸ್​ ಕಂಡು ಬಂದಿದ್ದು, 23 ಜನರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಏಳು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಅಗರವಾಲ್​ ತಿಳಿಸಿದ್ದಾರೆ.

Last Updated : Mar 23, 2020, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.