ETV Bharat / bharat

ಪ್ರಪಂಚದಾದ್ಯಂತ ಮಹಾರಕ್ಕಸನ ವಿರುದ್ಧ ಮಹಾಯುದ್ಧ

ಇಟಲಿಯ ಕೆಲವು ಭಾಗಗಳಲ್ಲಿ, ಸೋಂಕು ತಡೆ ನಿಯಮಗಳನ್ನು ಪಾಲಿಸಲು ನಿರಾಕರಿಸಿದ ಜನರ ವಿರುದ್ಧ ಸರ್ಕಾರ ಸೆರೆವಾಸ ಆದೇಶ ಹೊರಡಿಸಲಾಗಿದೆ. ಕೋಮು ಅಥವಾ ಧಾರ್ಮಿಕ ಘರ್ಷಣೆಯ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಸರ್ಕಾರಗಳು ಇಂತಹ ಆದೇಶ ನೀಡುತ್ತವೆ. ಆದರೆ ಇಟಲಿ ಸರ್ಕಾರ ತನ್ನ ನಾಗರಿಕರನ್ನು ಕೊರೊನಾ ವೈರಸ್‌ನಿಂದ ರಕ್ಷಿಸುವ ಸಲುವಾಗಿ ದೇಶವನ್ನೇ ಸಂಪೂರ್ಣ ಬಂದ್ ಮಾಡಲು ನಿರ್ದೇಶನ ನೀಡಿದ್ದು ಇದೇ ಮೊದಲು. ಕೊರೊನಾ ವೈರಸ್ ಮಹಾರಕ್ಕಸ ಪ್ರಪಂಚದಾದ್ಯಂತ ಭೀತಿ ಸೃಷ್ಟಿ ಮಾಡುತ್ತಿದೆ. ಹಲವಾರು ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ಕುಸಿದಿದೆ.

Coronavirus effect
ಕೊರೊನಾ ವೈರಸ್
author img

By

Published : Mar 13, 2020, 7:59 AM IST

ಜೀವನೋಪಾಯದ ಹಾದಿಗಳು ಸ್ಥಗಿತಗೊಂಡಿವೆ. ಕೆಲವು ದೇಶಗಳಲ್ಲಿ, ಜನರು ತುರ್ತುಸ್ಥಿತಿ ಹೊರತುಪಡಿಸಿದರೆ ತಮ್ಮ ಮನೆ ತೊರೆಯಲು ನಿರಾಕರಿಸುತ್ತ ಇದ್ದಾರೆ. ಎರಡು ತಿಂಗಳ ಹಿಂದೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಈ ವೈರಸ್ ಮೊದಲು ಅವತಾರಎತ್ತಿದ್ದು ಈಗ ಇದು ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಿಗೆ ತನ್ನ ಕಬಂಧಬಾಹು ಚಾಚಿದೆ. ಈ ವೈರಸ್ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಆಘಾತಕ್ಕೆ ತಳ್ಳಿದೆ. ಜನವರಿ 30 ರಂದು, ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯೂ ಎಚ್‌ ಒ ) ವೈರಸ್ ದಾಳಿಯನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಪರಿಗಣಿಸಿದೆ. ಅತಿರೇಕದ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಡಬ್ಲ್ಯೂ ಎಚ್‌ ಒ ತ್ವರಿತ ನಿಯಂತ್ರಣ ಕ್ರಮಗಳನ್ನು ಪ್ರಾರಂಭ ಮಾಡಿದೆ. ಇಲ್ಲಿಯವರೆಗೆ ಸಂಸ್ಥೆ 1.30 ಲಕ್ಷ ವೈದ್ಯಕೀಯ ವೃತ್ತಿಪರರಿಗೆ 7 ಭಾಷೆಗಳಲ್ಲಿ ಆನ್‌ಲೈನ್ ಕೋರ್ಸ್‌ಗಳ ಮೂಲಕ ವೈರಸ್ ತಡೆಗಟ್ಟುವ ಕ್ರಮಗಳ ಬಗ್ಗೆ ತರಬೇತಿ ನೀಡಿತು. ಹಲವಾರು ದೇಶಗಳ ನಾಯಕರ ಸಮನ್ವಯ ಕ್ರಮಗಳ ಹೊರತಾಗಿಯೂ, ಯಾವುದೇ ಮಹತ್ವದ ಫಲಿತಾಂಶ ಲಭ್ಯ ಆಗಿಲ್ಲ.

ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ವೈರಸ್ ಹರಡುವ ಪ್ರಮಾಣ ವೃದ್ಧಿಸುತ್ತಲೇ ಇದೆ. ಜನರಲ್ಲಿ ಭೀತಿ ಮನೆ ಮಾಡಿದೆ. ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ ಆಗಿದೆ. ಈ ಅನಿರೀಕ್ಷಿತ ಸ್ಥಿತಿಯ ಬಗ್ಗೆ ಸಾರ್ವಜನಿಕರು ಚಿಂತೆಗೆ ಈಡಾಗಿದ್ದಾರೆ. ಈ ವೈರಸ್ ಈಗಾಗಲೇ ವಿಶ್ವದಾದ್ಯಂತ 109 ದೇಶಗಳಿಗೆ ವಿಸ್ತರಿಸಿದೆ. ಮಹಾಖಳನಿಗೆ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸುವ ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬಲ್ಲ ದೇಶ ಅತ್ಯಂತ ಜವಾಬ್ದಾರಿಯುತ ರಾಷ್ಟ್ರ ಎನಿಸಿಕೊಳ್ಳಲಿದೆ ಎಂಬ ಮಾತುಗಳು ಇವೆ. ಒಂದು ರಾಷ್ಟ್ರವು ಸಾಕಷ್ಟು ವೈದ್ಯಕೀಯ ಆರೈಕೆ ನೀಡಲು ವಿಫಲವಾದರೆ, ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಅಪಾಯವನ್ನು ತಳ್ಳಿಹಾಕಲಾಗದು. ರಾಷ್ಟ್ರಗಳು ಡಬ್ಲ್ಯೂ ಎಚ್‌ ಒ ಜೊತೆ ಸಮನ್ವಯತೆಯಿಂದ ಕೆಲಸ ಮಾಡುವುದು, ತಕ್ಷಣದ ವೈದ್ಯಕೀಯ ನೆರವು ನೀಡುವ ಜವಾಬ್ದಾರಿ ತೆಗೆದುಕೊಳ್ಳುವುದು ಮತ್ತು ಸೋಂಕಿತರನ್ನು ರಕ್ಷಿಸಲು ಇದು ಸಕಾಲ. ವೈದ್ಯಕೀಯ ಆರೈಕೆ ಒದಗಿಸುವಲ್ಲಿ ಸ್ವಲ್ಪಮಟ್ಟಿನ ನಿರ್ಲಕ್ಷ್ಯ ತೋರಿದರೂ ನಿರ್ಣಾಯಕ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದಂತೆ ಆಗುತ್ತದೆ. ವಿಶ್ವದ ಎಲ್ಲೆಡೆ 3,850 ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ಗೆ ಬಲಿ ಆಗಿದ್ದಾರೆ. ಈ ಪೈಕಿ ಚೀನಾ ದೇಶ ಒಂದರಲ್ಲಿಯೇ 3,120 ಸಾವುಗಳು ಸಂಭವಿಸಿವೆ. ಕರೋನಾ ಸೋಂಕಿನಿಂದ ಇಟಲಿಯಲ್ಲಿ 366 ಮತ್ತು ಇರಾನ್‌ನಲ್ಲಿ 237 ಮಂದಿ ಮೃತ್ಯುಲೋಕ ಪ್ರವೇಶಿಸಿದ್ದಾರೆ. ಚೀನಾದಲ್ಲಿ ಸೋಂಕಿತರ ಸಂಖ್ಯೆ 1.11 ಲಕ್ಷ ದಾಟಿದೆ. ಕರೋನಾ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಚೀನಾ ಸರ್ಕಾರ 1000 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿದೆ ಮತ್ತು ವುಹಾನ್ ಪ್ರಾಂತ್ಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.

ಕಳೆದ 50 ವರ್ಷಗಳಲ್ಲಿ, ಹಲವಾರು ವೈರಸ್ಸುಗಳು ಜನರ ಬದುಕಿಗೆ ಧಕ್ಕೆ ಒಡ್ಡಿವೆ. 1967 ರಲ್ಲಿ ಮಾರ್ಬರ್ಗ್ ವೈರಸ್, 1976 ರಲ್ಲಿ ಎಬೋಲಾ, 1994 ರಲ್ಲಿ ಹೇರಾ ಮತ್ತು ಹಕ್ಕಿ ಜ್ವರ, 1998 ರಲ್ಲಿ ನಿಫಾನ್, 2002 ರಲ್ಲಿ ಸಾರ್ಸ್, 2009 ರಲ್ಲಿ ಹಂದಿ ಜ್ವರ, 2012 ರಲ್ಲಿ ಮೆರ್ಸ್ ಮತ್ತು 2012 ರಲ್ಲಿ ಕೋಳಿಜ್ವರದ ಸೋಂಕು ಜನರನ್ನು ತೊಂದರೆಗೆ ಈಡುಮಾಡಿದವು. ವಿಶ್ವದ ಎಲ್ಲೆಡೆ ಸುಮಾರು 762.6 ಕೋಟಿ ಜನರು ಈ ವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ. 2009 ರಲ್ಲಿ ಸಂಭವಿಸಿದ ಹಂದಿ ಜ್ವರ ಅನೇಕ ಜನರನ್ನು ಬಲಿ ತೆಗೆದುಕೊಂಡಿತು. ಕೋಳಿ ಜ್ವರ ಆಕ್ರಮಿಸಿದ ಏಳು ವರ್ಷಗಳ ನಂತರ, ಕೊರೊನಾ ವೈರಸ್ ಜಗತ್ತಿಗೆ ದಾಂಗುಡಿ ಇಟ್ಟಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಪರಿಣಾಮ ಆರ್ಥಿಕ ವಲಯ ಕುಸಿದಿದೆ. ಈ ವೈರಸ್ ಇಟಲಿ, ಇರಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ ಮತ್ತು ಅರಬ್ ರಾಷ್ಟ್ರಗಳಿಗೆ ಶೀಘ್ರವಾಗಿ ಹರಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಸದಂತೆ ಜನರು ಭಯಪಡುತ್ತಾರೆ. ಕೆಲವು ಪ್ರದೇಶಗಳಲ್ಲಿ, ಸರ್ಕಾರಗಳು ತನ್ನ ನಾಗರಿಕರಿಗೆ ಆಹಾರ ತಲುಪಿಸಬೇಕಾದೆ. ಅಧಿಕಾರಿಗಳ ಸೂಚನೆ ಮೇರೆಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಅನೇಕ ಮಂದಿ ಹೆದರುತ್ತ ಇದ್ದಾರೆ. ಹಲವಾರು ರಾಷ್ಟ್ರಗಳು ಚೀನಾ ಸರಕುಗಳ ಮೇಲೆ ಆಮದು ನಿಷೇಧ ಹೇರಿವೆ. ಕಚ್ಚಾ ಔಷಧ ಆಮದಿನ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದ ಔಷಧೀಯ ಉದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಸಾರ್ವಜನಿಕ ಪ್ರಯಾಣ ಮಂದಗತಿಯಲ್ಲಿ ಇರುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಹೋಟೆಲ್ ಮತ್ತಿತರ ಆತಿಥ್ಯ ಉದ್ಯಮ ಕುಸಿಯಲಿದೆ ಎಂಬ ಆತಂಕಗಳು ಎದುರಾಗಿವೆ.

ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ಸಮಾವೇಶಗಳು, ಸಭೆಗಳು ಮತ್ತು ಕ್ರೀಡಾಕೂಟಗಳಿಗೆ ನಿರ್ಬಂಧ ಹೇರಲಾಗಿದೆ. ಫೆಬ್ರವರಿ 26 ರಿಂದ 29 ರವರೆಗೆ ವಾಷಿಂಗ್ಟನ್‌ನಲ್ಲಿ ನಡೆದ ರಾಜಕೀಯ ಸಮಾವೇಶ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಸಮ್ಮೇಳನದಲ್ಲಿ ಭಾಗವಹಿಸಿದ ಇಬ್ಬರು ಕೊರೊನಾ ವೈರಸ್ ದಾಳಿಗೆ ಒಳಗಾಗಿದ್ದಾರೆ ಎಂದು ತಿಳಿದು ಅಮೆರಿಕ ಆಘಾತಕ್ಕೆ ಒಳಗಾಯಿತು. ಅಧ್ಯಕ್ಷ ಟ್ರಂಪ್ ಕೂಡ ಭಾಗಿಯಾಗಿದ್ದ ಕಾರ್ಯಕ್ರಮ ಅದು. ಈ ಉದಾಹರಣೆ ವೈರಸ್ ದಾಳಿ ಎಷ್ಟು ಭಯಾನಕ ಎಂಬುದನ್ನು ಸಾಬೀತುಪಡಿಸುತ್ತದೆ. ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯ ಪ್ರಕಾರ, COVID-19 ದಾಳಿಯಿಂದ 11,300 ಕೋಟಿ ಡಾಲರ್ ನಷ್ಟ ಉಂಟಾಗಿದೆ. ವಾಯುಯಾನ ಉದ್ಯಮ ಒಂದರಲ್ಲಿಯೇ ಇಷ್ಟು ಭಾರಿ ನಷ್ಟ ಉಂಟಾದರೆ ಭವಿಷ್ಯದ ಪರಿಣಾಮಗಳು ಆತಂಕಕಾರಿ ಎಂದು ಅನಿಸುತ್ತದೆ. ವೈರಸ್ ಆಕ್ರಮಣದಿಂದಾಗಿ ಉತ್ಪಾದನಾ ಉದ್ಯಮದ ಮೇಲೂ ಋಣಾತ್ಮಕ ಪರಿಣಾಮ ಕಾಣಿಸಿದೆ. ಉತ್ಪನ್ನಗಳು ಕಾರ್ಖಾನೆಗಳಲ್ಲೇ ಸಿಲುಕಿ ಹಾಕಿಕೊಂಡಿವೆ. ಕಾರ್ಖಾನೆ ಸ್ಥಗಿತಗೊಂಡ ಪರಿಣಾಮ ಕಾರ್ಮಿಕರು ಮತ್ತು ನೌಕರರು ತೊಂದರೆ ಎದುರಿಸುತ್ತಿದ್ದಾರೆ. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ಈ ಪರಿಸ್ಥಿತಿಯ ಅನಗತ್ಯ ಲಾಭ ಪಡೆದಿದ್ದಾರೆ. ಮುಖಗವಸುಗಳು, ರಕ್ಷಣಾ ಕವಚಗಳ ಬೆಲೆ ಗಗನಕ್ಕೆ ಏರಿದೆ. ವೈದ್ಯಕೀಯ ಸಿಬ್ಬಂದಿ ಕೂಡ ಮುಖಗವಸುಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ಡಬ್ಲ್ಯೂ ಎಚ್‌ ಒ ಬಹಿರಂಗಪಡಿಸಿದ್ದು ಅವುಗಳ ಉತ್ಪಾದನೆ ಬೇಡಿಕೆಗೆ ಅನುಗುಣವಾಗಿ ಇರಬೇಕು ಎಂದು ಅದು ಸೂಚನೆ ನೀಡಿದೆ. COVID-19 ಸೋಂಕಿತ ದೇಶಗಳಿಗೆ ಸಹಾಯ ಮಾಡಲು WHO ಮುಂದೆ ಬಂದಿದೆ. ಇದು ವಿವಿಧ ದೇಶಗಳಲ್ಲಿ ಹಣ ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಿತು. ಕೊರೊನಾ ವೈರಸ್ ದಾಳಿಗೆ ತುತ್ತಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶ್ವ ಬ್ಯಾಂಕ್ 12 ಶತಕೋಟಿ ಅಮೆರಿಕನ್ ಡಾಲರ್ ನೆರವು ಘೋಷಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎಲ್ಲಾ ದೇಶಗಳು ಹಣ ಸಂಗ್ರಹ ಮಾಡುತ್ತಿವೆ.

ವೈರಸ್ ಹಲವಾರು ರಾಷ್ಟ್ರಗಳಲ್ಲಿ ಪ್ರಕ್ಷುಬ್ಧತೆ ಉಂಟು ಮಾಡಿದ್ದರೆ, ಭಾರತದಲ್ಲಿ ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿ ಇದೆ. ಇಲ್ಲಿಯವರೆಗೆ, ಭಾರತದಲ್ಲಿ 70ಕ್ಕೂ ಜನರಲ್ಲಿ COVID-19 ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 16 ಮಂದಿ ಇಟಲಿ ಪ್ರವಾಸಿಗರು. ಉಳಿದ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದರಿಂದ ಕಳವಳ ಪಡುವ ಅಗತ್ಯ ಇಲ್ಲ. ಭಾರತಕ್ಕೆ 6 ಲಕ್ಷ ವಿದೇಶಿ ಪ್ರಯಾಣಿಕರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸೋಂಕಿತ ಜನರಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ತಕ್ಷಣದ ಆತಂಕ ಇಲ್ಲ. ಆದರೆ ಸರ್ಕಾರ ತನ್ನ ‘ಚಲ್ತೇ ಹೈ’ ಮನೋಭಾವ ತೊರೆಯಬೇಕಿದೆ. . ಅಧಿಕಾರಿಗಳು ಎಂದಿಗಿಂತಲೂ ಹೆಚ್ಚು ಜಾಗರೂಕರಾಗಿ ಇರಬೇಕಿದೆ. ಅಮೆರಿಕದಿಂದ ಹೈದರಾಬಾದ್‌ಗೆ ಪ್ರಯಾಣ ಮಾಡುತ್ತಿದ್ದ ಟೆಕಿಯೊಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾದ ನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ ಹೆಚ್ಚಿನ ಎಚ್ಚರಿಕೆ ವಹಿಸಿದ್ದವು. ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡವು. ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರಿಗೆ ಎಚ್ಚರಿಕೆ ನೀಡಲಾಯಿತು. ವೈರಸ್ ವಿರುದ್ಧ ಹೋರಾಟ ಮಾಡಲು ನಿಗದಿಪಡಿಸಿದ ಹಣ ದುರುಪಯೋಗ ಮಾಡಿಕೊಳ್ಳುವ ಬದಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕಿದೆ. ಅಗತ್ಯ ಉಪಕರಣಗಳನ್ನು ವೈದ್ಯಕೀಯ ಸಂಸ್ಥೆಗಳಿಗೆ ಒದಗಿಸಬೇಕಿದೆ. ಅತ್ಯಾಧುನಿಕ ಸಂಶೋಧನಾ ಕೇಂದ್ರಗಳನ್ನು ತೆರೆಯಬೇಕಿದೆ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ. ವೈದ್ಯಕೀಯ ವೃತ್ತಿಪರರು ಮತ್ತು ಸರ್ಕಾರಿ ಅಧಿಕಾರಿಗಳು ಸಂಘಟಿತ ಪ್ರಯತ್ನ ಮಾಡಿದರೆ ಹೆಚ್ಚಿನ ತೊಂದರೆಗಳನ್ನು ತಪ್ಪಿಸಬಹುದು.

COVID-19 ದಾಳಿಯಿಂದಾಗಿ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಈ ಸ್ಥಿತಿಯ ಬಗ್ಗೆ ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ. ಯುನಿಸೆಫ್‌ನ ಇತ್ತೀಚಿನ ವರದಿಯ ಪ್ರಕಾರ, ವಿಶ್ವದ ಎಲ್ಲೆಡೆ 22 ದೇಶಗಳಲ್ಲಿ ಸುಮಾರು 29 ಕೋಟಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. 13 ರಾಷ್ಟ್ರಗಳಲ್ಲಿ ಅಲ್ಲಿನ ಸರ್ಕಾರಗಳು ಮಾರ್ಚ್ 15 ರವರೆಗೆ ಅಧಿಕೃತವಾಗಿ ರಜಾದಿನ ಘೋಷಿಸಿವೆ. ಉಳಿದ 9 ದೇಶಗಳಲ್ಲಿ ಸೋಂಕು ಪೀಡಿತ ಪ್ರದೇಶಗಳನ್ನು ಲೆಕ್ಕಿಸಿ ರಜೆ ಘೋಷಣೆ ಮಾಡಲಾಗಿದೆ. ಚೀನಾದಲ್ಲಿ 23 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಂದ ದೂರ ಉಳಿದಿದ್ದಾರೆ. ಈ ಸ್ತಬ್ಧತೆಯಿಂದಾಗಿ ಅಧ್ಯಯನಗಳ ಮೇಲೆ ಪರಿಣಾಮ ಉಂಟಾಗದಂತೆ ತಡೆಯಲು ಯುನೆಸ್ಕೋ ಪರ್ಯಾಯ ದೂರ ಶಿಕ್ಷಣ ಕೋರ್ಸ್‌ಗಳನ್ನು ರೂಪಿಸಲು ಸೂಚನೆ ನೀಡಿದೆ. ಉತ್ತಮ ಅಂತರ್ಜಾಲ ಸಂಪರ್ಕ ಇರುವ ಪ್ರದೇಶಗಳಲ್ಲಿ ಈ ವ್ಯವಸ್ಥೆ ಸಾಧ್ಯ. ಆದರೆ ಮೂಲ ಸೌಕರ್ಯಗಳ ಕೊರತೆ ಇರುವ ಹಲವಾರು ದೂರದ ಪ್ರದೇಶಗಳನ್ನು ಕಾಣಬಹುದು. ಅಂತಹ ಪ್ರದೇಶಗಳಲ್ಲಿ, ವಿಶೇಷವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಉಂಟಾಗುವ ಸಾಧ್ಯತೆಗಳು ಹೆಚ್ಚು. ಮತ್ತೊಂದೆಡೆ, ಬಡತನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಕ್ಷೀಣಿಸುವ ಸಾಧ್ಯತೆಗಳು ಇವೆ. ಏಕೆಂದರೆ ಭಾರತದಂತಹ ಹಲವಾರು ದೇಶಗಳು ಬಿಸಿಯೂಟ ಯೋಜನೆಯನ್ನು ರೂಪಿಸಿವೆ. ಅನೇಕ ದೇಶಗಳಲ್ಲಿ, ಬಡ ವಿದ್ಯಾರ್ಥಿಗಳು ಶಾಲೆಗಳಲ್ಲಿ ಒದಗಿಸುವ ಆಹಾರ ಅವಲಂಬಿಸಿದ್ದಾರೆ. ಶಾಲೆಗಳನ್ನು ಸ್ಥಗಿತಗೊಳಿಸುವುದು ಎಂದರೆ ಶಿಕ್ಷಣ ಮತ್ತು ಆರೋಗ್ಯ ಎರಡರಿಂದಲೂ ವಿದ್ಯಾರ್ಥಿಗಳು ವಂಚನೆಗೆ ಒಳಗಾದಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.