ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೊರೊನಾ ದೃಢಪಟ್ಟವರ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ವರದಿಯ ಪ್ರಕಾರ ಬಲೂಚಿಸ್ತಾನ, ಸಿಂಧ್, ಇಸ್ಲಾಮಾಬಾದ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬಲೂಚಿಸ್ತಾನದಲ್ಲಿ ಐದು ಹೊಸ ಪ್ರಕರಣಗಳು ವರದಿಯಾದ ಕಾರಣದಿಂದ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ಮುಟ್ಟಿದೆ. ತಫ್ತಾನ್ ಕ್ವಾರಂಟೈನ್ನಲ್ಲಿ 115, ಸಿಂಧ್ನಲ್ಲಿ 413, ಖೈಬರ್ ಪಖ್ತುಂಖ್ವಾದಲ್ಲಿ 78, ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 81 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೂ ಇತರೆಡೆಗಳಲ್ಲಿ 16 ಮಂದಿ ವೈರಸ್ಗೆ ತುತ್ತಾಗಿರುವುದು ದೃಢಪಟ್ಟಿದೆ.
ಈವರೆಗೂ ಏಳು ಮಂದಿ ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಪಂಜಾಬ್ ಪ್ರಾಂತ್ಯದ ಫಾತಿಮಾ ಜಿನ್ನಾ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಲೂಚಿಸ್ತಾನದ 65 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿತ್ತು. 18 ಮಂದಿಗೆ ಚಿಕಿತ್ಸೆ ನೀಡಿ ಕೊರೊನಾದಿಂದ ಗುಣಪಡಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.