ETV Bharat / bharat

ಕಾಂಗ್ರೆಸ್ ಮತ್ತು ನಗರ ನಕ್ಸಲರಿಂದ ಪೌರತ್ವ, ಎನ್​​ಆರ್​ಸಿ ಬಗ್ಗೆ ಅಪಪ್ರಚಾರ: ಮೋದಿ ತೀವ್ರ ವಾಗ್ದಾಳಿ

ಕಾಂಗ್ರೆಸ್ ಮತ್ತು ಕೆಲವು ನಗರ ನಕ್ಸಲರಿಂದ ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ನಿರಂತರವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ರು.

Congress urban Naxals spreading rumours over says Modi,ಕಾಂಗ್ರೆಸ್ ಮತ್ತು ಅರ್ಬನ್ ನಕ್ಸಲರಿಂದ  ಅಪಪ್ರಚಾರ
ನರೇಂದ್ರ ಮೋದಿ
author img

By

Published : Dec 22, 2019, 5:40 PM IST

ನವದೆಹಲಿ: ರಾಮಲೀಲಾ ಮೈದಾನದಲ್ಲಿ ಬಿಜೆಪಿ ಏರ್ಪಡಿಸಿದ್ದ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ನರೇಂದ್ರ ಮೋದಿ, ಪ್ರಧಾನಿ

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿರುದ್ಧ ಪ್ರತಿಪಕ್ಷಗಳು ದೇಶದ ಜನರಿಗೆ ಸುಳ್ಳು ಮಾಹಿತಿ ರವಾನಿಸಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಕಾಂಗ್ರೆಸ್​ ಕಾಲದಲ್ಲೆ ಎನ್​ಆರ್​ಸಿ ಕಾಯ್ದೆ ಸಿದ್ಧವಾಗಿತ್ತು. ಹಾಗಾದ್ರೆ ಆ ಸಂದರ್ಭದಲ್ಲಿ ಅವರು ನಿದ್ದೆ ಮಾಡುತ್ತಿದ್ದರೇನು? ನಾವು ಎನ್‌ಆರ್‌ಸಿಯನ್ನು ಸಂಪುಟ ನಿರ್ಣಯದಿಂದಾಗಲೀ ಅಥವಾ ಸಂಸತ್ತಿನಲ್ಲಾಗಲೀ ಜಾರಿಗೆ ತಂದಿಲ್ಲ. ಒಂದ್ವೇಳೆ ನಾವು ನಿಮಗೆ ಮಾಲೀಕತ್ವದ ಹಕ್ಕುಗಳನ್ನು ನೀಡುವ ಸಲುವಾಗಿ ಸಂಸತ್ತಿನಲ್ಲಿ ಶಾಸನ ರೂಪಿಸುತ್ತಾ ಇನ್ನೊಂದೆಡೆ ನಿಮ್ಮನ್ನು ಓಡಿಸುವ ಕೆಲಸ ಮಾಡಲು ಸಾಧ್ಯವೇ ? ಎಂದು ಮೋದಿ ಏರುಧ್ವನಿಯಲ್ಲಿ ಜನತೆಯನ್ನು ಪ್ರಶ್ನಿಸಿದ್ರು.

ದೇಶದಲ್ಲಿ ಪೌರತ್ವ ವಂಚಿತ ಮುಸ್ಲಿಮರನ್ನು ನಿರ್ಬಂಧಿತ ಶಿಬಿರಗಳಲ್ಲಿ(detention camps) ಬಂಧಿಸಲಾಗುತ್ತದೆ ಎಂದು ಕಾಂಗ್ರೆಸ್ ಮತ್ತವರ ಮೈತ್ರಿ ಪಕ್ಷದ ಸ್ನೇಹಿತರು ಹಾಗು ಕೆಲವು ನಗರ ನಕ್ಸಲರು ಸುಳ್ಳು ವದಂತಿಗಳನ್ನು ದೇಶವ್ಯಾಪಿ ಹರಡುತ್ತಿದ್ದಾರೆ. ನೀವೆಲ್ಲಾ ವಿದ್ಯಾವಂತರು. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್‌ಆರ್‌ಸಿ ಎಂದರೆ ಏನು? ಎಂಬುದನ್ನು ಸರಿಯಾಗಿ ಓದಿ, ಅರ್ಥೈಸಿಕೊಳ್ಳಿ. ಆ ಮೂಲಕ ನೀವು ಓದಿರುವ ಶಿಕ್ಷಣಕ್ಕೆ ಬೆಲೆ ಕೊಡಿ ಎಂದು ಮೋದಿ ವಿಪಕ್ಷಗಳಿಗೆ ಮನವಿ ಮಾಡಿದ್ರು.

ಭಾರತೀಯ ಮುಸ್ಲಿಮರೂ ಸೇರಿದಂತೆ, ಯಾರ ಪೂರ್ವಜರು ಭಾರತದ ಪುತ್ರರಾಗಿದ್ದಾರೋ ಅವರೆಲ್ಲಾ ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಭಾರತದಲ್ಲಿ ಯಾವುದೇ ಬಂಧನ ಕೇಂದ್ರವೂ ಇಲ್ಲ ಅಥವಾ ಯಾವುದೇ ಭಾರತೀಯ ಮುಸ್ಲಿಮರನ್ನು ಬಂಧಿಸಲಾಗುವುದಿಲ್ಲ ಎಂದು ಕಾಯ್ದೆಯ ಬಗ್ಗೆ ಎದ್ದಿರುವ ಎಲ್ಲಾ ಸಂದೇಹ, ಊಹಾಪೋಹಗಳಿಗೆ ಮೋದಿ ಸ್ಪಷ್ಟನೆ ಕೊಟ್ಟರು.

ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ, ಈ ಪೌರತ್ವ(ತಿದ್ದುಪಡಿ)ಕಾಯ್ದೆ(ಸಿಎಎ) ಯಾವುದೇ ಭಾರತೀಯರಿಗೆ ಅಲ್ಲ. ಸಂಸತ್ತಿನಲ್ಲಿಯೂ ಇದನ್ನೇ ಹೇಳಿದ್ದೇವೆ. ದೇಶದ 130 ಕೋಟಿ ಭಾರತೀಯಗೂ ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂದು ಮೋದಿ ತಿಳಿಹೇಳಿದ್ರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.