ನವದೆಹಲಿ: ಮುಂದಿನ ತಿಂಗಳು ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗಾಗಿ ಆಪ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಫೈಟ್ ಎದುರಾಗಿದ್ದು, ಈಗಾಗಲೇ ಎಲ್ಲ ಪಕ್ಷಗಳು ಭರದ ಕಸರತ್ತು ನಡೆಸುತ್ತಿವೆ.
ಈಗಾಗಲೇ ಆಡಳಿತ ಪಕ್ಷ ಎಲ್ಲ 70 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿ ಘೋಷಣೆ ಮಾಡಿ ಪಟ್ಟಿ ರಿಲೀಸ್ ಮಾಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ ಮೊದಲ ಪಟ್ಟಿ ರಿಲೀಸ್ ಮಾಡಿತ್ತು. ಇದೀಗ ಎರಡು ಪಕ್ಷ ಉಳಿದ ಕ್ಷೇತ್ರಗಳಿಗೆ ಎರಡನೇ ಪಟ್ಟಿ ರಿಲೀಸ್ ಮಾಡಿದೆ.
ಮೊದಲ ಲಿಸ್ಟ್ನಲ್ಲಿ ಕಾಂಗ್ರೆಸ್ 54 ಕ್ಷೇತ್ರಗಳಿಗೆ ಹಾಗೂ ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿತ್ತು. ಇದೀಗ ಕಮಲ 10 ಕ್ಷೇತ್ರ ಹಾಗೂ ಕಾಂಗ್ರೆಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ.
-
Bharatiya Janata Party (BJP) releases another list of 10 candidates for the #DelhiElections2020. Tajinder Pal Bagga to contest from Hari Nagar constituency. pic.twitter.com/I61TvNuBzu
— ANI (@ANI) January 20, 2020 " class="align-text-top noRightClick twitterSection" data="
">Bharatiya Janata Party (BJP) releases another list of 10 candidates for the #DelhiElections2020. Tajinder Pal Bagga to contest from Hari Nagar constituency. pic.twitter.com/I61TvNuBzu
— ANI (@ANI) January 20, 2020Bharatiya Janata Party (BJP) releases another list of 10 candidates for the #DelhiElections2020. Tajinder Pal Bagga to contest from Hari Nagar constituency. pic.twitter.com/I61TvNuBzu
— ANI (@ANI) January 20, 2020
ಅರವಿಂದ್ ಕೇಜ್ರಿವಾಲ್ ಸ್ಫರ್ಧೆ ಮಾಡುತ್ತಿರುವ ನವದೆಹಲಿ ಕ್ಷೇತ್ರದಿಂದ ರೋಮೇಶ್ ಸಂಬರ್ವಾಲ್ ಹಾಗೂ ಬಿಜೆಪಿಯಿಂದ ಸುನೀಲ್ ಯಾದವ್ ಕಣಕ್ಕಿಳಿಯಲಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಬಿಜೆಪಿ ಸೇರಿದ್ದ ಮಾಜಿ ಶಾಸಕರಾದ ಅಮ್ರೇಶ್ ಗೌತಮ್ ಹಾಗೂ ಭಿಮೇಶ್ ಶರ್ಮಾಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಫೆ. 8ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಹೊರಬೀಳಲಿದೆ.